ನವದೆಹಲಿ: ಹಾಸ್ಟೆಲ್ಗಳಲ್ಲಿ ವಾಸಿಸುವ 6.450 ಜೆಎನ್ಯು ವಿದ್ಯಾರ್ಥಿಗಳಲ್ಲಿ ಶೇಕಡಾ 65 ರಷ್ಟು ವಿದ್ಯಾರ್ಥಿಗಳು ಹೊಸ ಹಾಸ್ಟೆಲ್ ಶುಲ್ಕವನ್ನು ಪಾವತಿಸಿದ್ದಾರೆ ಎಂದು ವಿಶ್ವವಿದ್ಯಾಲಯ ಆಡಳಿತ ಪ್ರಕಟಿಸಿದೆ ಎಂದು ವರದಿಗಳು ಹೇಳಿವೆ
ಹಾಸ್ಟೆಲ್ ಬಾಕಿ ಪಾವತಿಸಲು ವಿದ್ಯಾರ್ಥಿಗಳಿಗೆ ಜನವರಿ 17 ರವರೆಗೆ ಸಮಯವಿದೆ, ವಿದ್ಯಾರ್ಥಿಗಳು ಮತ್ತೆ ಕ್ಯಾಂಪಸ್ಗೆ ಮರಳುವ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುತ್ತದೆ ಎಂದು ಆಡಳಿತವು ವಿಶ್ವಾಸ ವ್ಯಕ್ತಪಡಿಸಿದೆ.
ಸೆಮಿಸ್ಟರ್ ಶುಲ್ಕವನ್ನು ಪಾವತಿಸುವ ಕಾಂಪ್ಲಿಯನ್ಸ್ ದರ ಕೂಡ ಡೇ ಸ್ಕಾಲರ್ಗಳಿಗೆ ಹೆಚ್ಚಾಗಿದೆ. ಅವರಲ್ಲಿ ಶೇಕಡಾ 95 ರಷ್ಟು ಜನರು ತಮ್ಮ ಸೆಮಿಸ್ಟರ್ ಮೊತ್ತವನ್ನು ಪಾವತಿಸಿದ್ದಾರೆ.
ಎಡಪಂಥೀಯ ನೇತೃತ್ವದ ಜೆಎನ್ಯುಎಸ್ಯು ನಡೆಸಿದ ಆಂದೋಲನ ಮತ್ತು ಬಹಿಷ್ಕಾರದ ನಡುವೆಯೂ, “ಶಾಲೆಗಳು ಮತ್ತು ಕೇಂದ್ರಗಳು ತಮ್ಮ ಟೈಮ್ ಟೇಬಲ್ ಘೋಷಿಸಿವೆ ಮತ್ತು ಕೊನೆಯ ಸೆಮಿಸ್ಟರ್ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ಕಾರ್ಯೋನ್ಮುಖವಾಗುತ್ತಿವೆ” ಎಂದು ಕುಲಪತಿ ಜಗದೀಶ್ ಕುಮಾರ್ ಹೇಳಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ವಿಶ್ವವಿದ್ಯಾಲಯವು ಎಲ್ಲವನ್ನು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಜೆಎನ್ಯು ಶುಲ್ಕ ಹೆಚ್ಚಳಕ್ಕೆ ಕಾನೂನುಬದ್ಧವಾಗಿ ಸವಾಲು ಹಾಕಲು ಜೆಎನ್ಯುಎಸ್ಯು ನಿರ್ಧರಿಸಿದೆ ಮತ್ತು ನೋಂದಣಿ ಪ್ರಕ್ರಿಯೆಯನ್ನು ಬಹಿಷ್ಕರಿಸುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.