ನವದೆಹಲಿ: ಈ ವರ್ಷ 70 ಕ್ಕೂ ಹೆಚ್ಚು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ 18 ಮತ್ತು ಕಾಂಗ್ರೆಸ್ನಿಂದ 17 ಸದಸ್ಯರು ಸೇರಿದಂತೆ ಒಟ್ಟು 69 ರಾಜ್ಯಸಭಾ ಸದಸ್ಯರು ನಿವೃತ್ತರಾಗಲಿದ್ದಾರೆ.
ಈಗಾಗಲೇ ನಾಲ್ಕು ಸ್ಥಾನಗಳು ಖಾಲಿ ಇದ್ದು, ಈ ವರ್ಷದಲ್ಲಿ ಭರ್ತಿ ಮಾಡಬೇಕಾದ ಮೇಲ್ಮನೆಯ ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 73 ಎಂದು ರಾಜ್ಯಸಭಾ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ವಿರೋಧ ಪಕ್ಷದ ಸಂಸದರು ಆಡಳಿತ ಪಕ್ಷಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿ ಬಹುಮತದತ್ತ ಸಾಗಿದೆ, ಆದರೆ 2018 ಮತ್ತು 2019 ರಲ್ಲಿ ಕೆಲವು ವಿಧಾನಸಭಾ ಚುನಾವಣೆಗಳನ್ನು ಸೋತ ಹಿನ್ನಲೆಯಲ್ಲಿ ದ್ವೈವಾರ್ಷಿಕ ಚುನಾವಣೆಗಳಲ್ಲಿ ಅದು ಸಾಕಷ್ಟು ಲಾಭ ಗಳಿಸುವ ಸಾಧ್ಯತೆಯಿಲ್ಲ ಎಂದು ದತ್ತಾಂಶಗಳ ಸೂಕ್ಷ್ಮ ವಿಶ್ಲೇಷಣೆಯಿಂದ ತಿಳಿದುಬಂದಿದೆ.
ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಮತ್ತು ರಾಮದಾಸ್ ಅಠಾವಲೆ ಅವರಲ್ಲದೆ, ಈ ವರ್ಷದಲ್ಲಿ ನಿವೃತ್ತರಾಗುವ ಇತರ ಪ್ರಮುಖ ನಾಯಕರಲ್ಲಿ ಶರದ್ ಪವರ್, ದಿಗ್ವಿಜಯ್ ಸಿಂಗ್ ಮತ್ತು ವಿಜಯ್ ಗೋಯೆಲ್ ಸೇರಿದ್ದಾರೆ.
250 ಸದಸ್ಯರ ಸದನದಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ 83 ಸದಸ್ಯರಿದ್ದರೆ, ಕಾಂಗ್ರೆಸ್ 46 ಸದಸ್ಯರನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.