ನವದೆಹಲಿ: ದೇಶದಾದ್ಯಂತದ ಪೊಲೀಸ್ ಠಾಣೆಗಳಲ್ಲಿನ ಮಹಿಳಾ ಸಹಾಯ ಡೆಸ್ಕ್ಗಳನ್ನು ಬಲಗೊಳಿಸುವ ಸಲುವಾಗಿ ಕೇಂದ್ರ ಗೃಹಸಚಿವಾಲಯವು ನಿರ್ಭಯಾ ಫಂಡ್ ಅಡಿಯಲ್ಲಿ ರೂ. 100 ಕೋಟಿಗಳನ್ನು ಬಿಡುಗಡೆ ಮಾಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳಾ ಸಹಾಯ ಡೆಸ್ಕ್ ಯೋಜನೆಯನ್ನು ಅನುಷ್ಠಾನಗೊಳಿಸಲು ಸೂಚನೆಯನ್ನು ನೀಡಲಾಗಿದೆ.
“ಮಹಿಳಾ ಸಹಾಯ ಡೆಸ್ಕ್ಗಳು ಪೊಲೀಸ್ ಠಾಣೆಯನ್ನು ಮಹಿಳಾ ಸ್ನೇಹಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. ಪೊಲೀಸ್ ಠಾಣೆಗಳಿಗೆ ಆಗಮಿಸುವ ಮಹಿಳೆಯರಿಗೆ ಈ ಡೆಸ್ಕ್ಗಳು ಮೊದಲ ಮತ್ತು ಏಕೈಕ ಸಂಪರ್ಕ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ಈ ಡೆಸ್ಕ್ಗಳಲ್ಲಿ ಮಹಿಳಾ ಅಧಿಕಾರಿಗಳು ನಿಯೋಜಿತರಾಗಿರುತ್ತಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಡೆಸ್ಕ್ಗಳಲ್ಲಿ ನಿಯೋಜಿತರಾಗಿರುವ ಅಧಿಕಾರಿಗಳಿಗೆ ಮಹಿಳೆಯರ ಬಗ್ಗೆ ಅತಿ ಸೂಕ್ಷ್ಮವಾದ ರೀತಿಯಲ್ಲಿ ವರ್ತಿಸುವ ತರಬೇತಿಯನ್ನು ನೀಡಲಾಗುತ್ತದೆ. ಮಹಿಳೆಯರಿಗೆ ಕಾನೂನು ಸಲಹೆ, ಕೌನ್ಸಲಿಂಗ್, ಪುನರ್ವಸತಿ ಮತ್ತು ತರಬೇತಿಯನ್ನು ನೀಡುವ ಸಲುವಾಗಿ ವಕೀಲರ, ಮಾನಸಿಕ ತಜ್ಞರ ಮತ್ತು ಎನ್ಜಿಒಗಳ ಸಂಪರ್ಕವನ್ನು ಡೆಸ್ಕ್ಗಳಿಗೆ ಒದಗಿಸಲಾಗುತ್ತದೆ.
ದೇಶದಾದ್ಯಂತದ ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ 2013ರಲ್ಲಿ ನಿರ್ಭಯ ಫಂಡ್ ಅನ್ನು ಸ್ಥಾಪನೆ ಮಾಡಲಾಯಿತು. 2012ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಸ್ಮರಣಾರ್ಥ ಈ ಫಂಡ್ ಅನ್ನು ಸ್ಥಾಪನೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.