ನವದೆಹಲಿ: ಮಲೇರಿಯಾ ತಡೆಗಟ್ಟುವಲ್ಲಿ ಭಾರತ ಮಹತ್ವದ ಮೈಲಿಗಲ್ಲನ್ನು ಸಾಧಿಸುತ್ತಿದೆ. ವಾರ್ಷಿಕ ಮಲೇರಿಯಾ ಸಾವು ಪ್ರಮಾಣದಲ್ಲಿ ಶೇಕಡ 41ರಷ್ಟು ಕಡಿಮೆಯಾಗಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆಯ ವರ್ಲ್ಡ್ ಮಲೇರಿಯಾ ರಿಪೋರ್ಟ್ 2019 ತಿಳಿಸಿದೆ.
2018ರಲ್ಲಿ ಭಾರತದಲ್ಲಿ ಮಲೇರಿಯಾ ಸಾವು ಪ್ರಕರಣ 10000ಕ್ಕೆ ಇಳಿದಿದೆ. ಈ ಮೂಲಕ 2017ರ ಬಳಿಕ ಇದುವರೆಗೆ ಭಾರತದಲ್ಲಿ ಶೇಕಡ 41ರಷ್ಟು ಸಾವಿನ ಪ್ರಮಾಣ ಕಡಿಮೆಯಾಗಿದೆ.
2017ಕ್ಕೆ ಹೋಲಿಸಿದರೆ 2018ರಲ್ಲಿ ಮಲೇರಿಯಾದಿಂದ ಸಂಭವಿಸಿದ ಸಾವಿನ ಪ್ರಮಾಣ ಶೇಕಡ 28ರಷ್ಟು ಕುಸಿದಿದೆ. 2016 ಮತ್ತು 2017ರ ನಡುವೆ ಮಲೇರಿಯಾ ಪ್ರಮಾಣವು ಶೇಕಡ 24ರಷ್ಟು ಕುಸಿತವನ್ನು ಕಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.
2018ರಲ್ಲಿ ಭಾರತದಲ್ಲಿ 6,737,000 ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದವು, ಇದರಲ್ಲಿ 9620 ಸಾವುಗಳು ಸಂಭವಿಸಿದವು. 2017ರಲ್ಲಿ 9,348,000 ಪ್ರಕರಣಗಳು ಪತ್ತೆಯಾಗಿದ್ದವು ಮತ್ತು 16310 ಸಾವುಗಳು ಸಂಭವಿಸಿದ್ದವು ಎಂದು ವರದಿ ತಿಳಿಸಿದೆ. 2000ನೇ ಇಸವಿಯ ಬಳಿಕ ಭಾರತದಲ್ಲಿ ಮಲೇರಿಯಾ ಪ್ರಕರಣಗಳು ಅರ್ಧದಷ್ಟು ಕಡಿಮೆಯಾಗಿವೆ. ನಾವುಗಳು ಕೂಡ ಭಾರಿ ಪ್ರಮಾಣದಲ್ಲಿ ತಗ್ಗಿದೆ. ಈ ಮೂಲಕ ಭಾರತ 2030ರ ವೇಳೆಗೆ ಮಲೇರಿಯಾ ಮುಕ್ತ ದೇಶವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
“ಭಾರತ ಮಲೇರಿಯಾ ಪ್ರಕರಣದಲ್ಲಿ ಭಾರಿ ಕುಸಿತವನ್ನು ಕಂಡಿದೆ. ಭಾರತದ ಈ ಪ್ರಗತಿ ವಿಶ್ವ ಆರೋಗ್ಯ ಸಂಸ್ಥೆ ಸೌತ್ ಈಸ್ಟ್ ಏಷ್ಯ ರೀಜನ್ಗೆ ಅಪಾರ ಪ್ರಮಾಣದ ಕೊಡುಗೆಯನ್ನು ನೀಡಿದೆ” ಎಂದು ವರದಿ ಉಲ್ಲೇಖಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.