ನವದೆಹಲಿ: ಬಿಜೆಪಿಯ ಭೀಷ್ಮ, ಮಾಜಿ ಉಪ ಪ್ರಧಾನಿ ಎಲ್.ಕೆ ಅಡ್ವಾಣಿ ಅವರು ಇಂದು 92ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಶುಭಾಶಯಗಳನ್ನು ತಿಳಿಸಿದ್ದು, “ಅಡ್ಡಾಣಿ ಅವರು ಒಬ್ಬ ತತ್ವಜ್ಞಾನಿ, ಧೀಮಂತ ರಾಜಕಾರಣಿ ಮತ್ತು ಭಾರತದ ಅತ್ಯಂತ ಗೌರವಾನ್ವಿತ ನಾಯಕರುಗಳಲ್ಲಿ ಒಬ್ಬರು” ಎಂದು ಟ್ವಿಟ್ ಮಾಡಿದ್ದಾರೆ. ಅಲ್ಲದೇ, ಭಾರತದ ರಾಜಕೀಯದಲ್ಲಿ ಬಿಜೆಪಿ ಪ್ರಮುಖ ಸ್ಥಾನಕ್ಕೆ ಏರುವಂತೆ ಮಾಡುವಲ್ಲಿ ಅಡ್ವಾಣಿ ಅವರ ಕೊಡುಗೆ ಅಪಾರವಾದುದು” ಎಂದಿದ್ದಾರೆ.
“ಅಡ್ವಾಣಿ ಅವರಿಗೆ, ಸಾರ್ವಜನಿಕ ಸೇವೆ ಯಾವಾಗಲೂ ಮೌಲ್ಯದೊಂದಿಗೆ ಸಂಬಂಧಿಸಿರುತ್ತದೆ. ಒಂದೇ ಒಂದು ಬಾರಿಯೂ ಅವರು ತಮ್ಮ ಮೂಲ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಪ್ರಜಾಪ್ರಭುತ್ವದ ರಕ್ಷಣೆಯ ವಿಷಯಕ್ಕೆ ಬಂದಾಗ, ಅವರು ಸದಾ ಮುಂಚೂಣಿಯಲ್ಲಿರುತ್ತಾರೆ. ಸಚಿವನಾಗಿ, ಅವರ ಆಡಳಿತಾತ್ಮಕ ಕೌಶಲ್ಯಗಳು ವಿಶ್ವವ್ಯಾಪಿಯಾಗಿ ಮನ್ನಣೆ ಪಡೆದುಕೊಂಡಿವೆ” ಎಂದಿದ್ದಾರೆ.
ಅಡ್ವಾಣಿ ಅವರು ಬಿಜೆಪಿಗೆ ಆಕಾರ ಮತ್ತು ಶಕ್ತಿಯನ್ನು ನೀಡಲು ದಶಕಗಳಿಂದ ಶ್ರಮಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. “ಹಲವು ವರ್ಷಗಳಲ್ಲಿ, ನಮ್ಮ ಪಕ್ಷವು ಭಾರತೀಯ ರಾಜಕಾರಣದ ಪ್ರಬಲ ಧ್ರುವವಾಗಿ ಹೊರಹೊಮ್ಮಿದೆ, ಇದಕ್ಕೆ ಅಡ್ವಾಣಿ ಅವರಂತಹ ನಾಯಕರು ಮತ್ತು ನಿಸ್ವಾರ್ಥ ಕಾರ್ಯಕರ್ತರು ಕಾರಣ” ಎಂದು ಅವರು ಹೇಳಿದ್ದಾರೆ.
ಲಾಲ್ ಕೃಷ್ಣ ಅಡ್ವಾಣಿ ಅವರು 2002 ರಿಂದ 2004 ರವರೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಭಾರತದ 7 ನೇ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಬಿಜೆಪಿಯ ಸಹ ಸಂಸ್ಥಾಪಕರಲ್ಲಿ ಒಬ್ಬರು ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರೂ ಆಗಿದ್ದಾರೆ.
Scholar, statesman and one of the most respected leaders, India will always cherish the exceptional contribution of Shri Lal Krishna Advani Ji towards empowering our citizens. On his birthday, I convey my greetings to respected Advani Ji and pray for his long and healthy life.
— Narendra Modi (@narendramodi) November 8, 2019
Shri LK Advani Ji toiled for decades to give shape and strength to the @BJP4India. If over the years, our party has emerged as a dominant pole of Indian politics, it is because of leaders like Advani Ji and the selfless Karyakartas he groomed for decades.
— Narendra Modi (@narendramodi) November 8, 2019
For Advani Ji, public service has always been associated with values. Not once has he compromised on the core ideology. When it came to safeguarding our democracy, he was at the forefront. As a Minister, his administrative skills are universally lauded.
— Narendra Modi (@narendramodi) November 8, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.