ನವದೆಹಲಿ: 2020-21ರ ಸಾಲಿನ ವಾರ್ಷಿಕ ಬಜೆಟ್ ಸಿದ್ಧತೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಅಕ್ಟೋಬರ್ 14 ರಿಂದ ಆರಂಭಿಸಲಿದೆ. ಆರ್ಥಿಕ ಪ್ರಗತಿಯಲ್ಲಿ ಹಿನ್ನಡೆ ಮತ್ತು ತೆರಿಗೆ ಸಂಗ್ರಹ ಮುಂತಾದ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂತೆ ಈ ಬಜೆಟ್ ಅತ್ಯಂತ ಪ್ರಮುಖವಾಗಿದೆ.
2020 -21ರ ಸಾಲಿನ ಕೇಂದ್ರ ಸರಕಾರದ ವಾರ್ಷಿಕ ಬಜೆಟ್ ನಿರ್ಮಲಾ ಸೀತಾರಾಮನ್ ಅವರು ವಿತ್ತಸಚಿವರಾದ ಬಳಿಕ ಮಂಡನೆಗೊಳ್ಳಲ್ಲಿರುವ ಎರಡನೇ ಬಜೆಟ್ ಆಗಿದೆ.
ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಬಜೆಟ್ ವಿಭಾಗ ಹೊರಡಿಸಿರುವ ಬಜೆಟ್ ಅಧಿಸೂಚನೆಯ ಪ್ರಕಾರ, ಪೂರ್ವ ಬಜೆಟ್ ಸಭೆಯು ಅಕ್ಟೋಬರ್ 14 ರಂದು ಆರಂಭವಾಗಲಿದೆ. ಯೂನಿಯನ್ ಬಜೆಟ್ ಇನ್ಫಾರ್ಮೇಶನ್ ಸಿಸ್ಟಮ್ ಮಾದರಿಯಲ್ಲಿ ಅದಕ್ಕೆ ಸಂಬಂಧಿಸಿದ ವಿವರಗಳು ಇರಬೇಕೆಂದು ಖಚಿತ ಪಡಿಸಿಕೊಳ್ಳುವಂತೆ ಎಲ್ಲಾ ಹಣಕಾಸು ಸಲಹೆಗಾರರಿಗೆ ಸೂಚನೆಯನ್ನು ನೀಡಲಾಗಿದೆ.
ಫೆಬ್ರವರಿ 1ರಂದು 2020-21 ಸಾಲಿನ ಬಜೆಟ್ ಮಂಡನೆಗೊಳ್ಳುವ ಸಾಧ್ಯತೆ ಇದೆ. ಬ್ರಿಟಿಷರ ಪದ್ಧತಿಯಂತೆ ಫೆಬ್ರವರಿ ತಿಂಗಳ ಕೊನೆಯಲ್ಲಿ ಬಜೆಟ್ ಮಂಡಿಸುವ ಪದ್ಧತಿಗೆ ನರೇಂದ್ರ ಮೋದಿ ಸರಕಾರ ಅಂತ್ಯಹಾಡಿದೆ.
2017ರಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ದಿವಂಗತ ಅರುಣ್ ಜೇಟ್ಲಿ ಅವರು ಮೊದಲ ಬಾರಿಗೆ ಫೆಬ್ರವರಿ 1 ರಂದು ವಾರ್ಷಿಕ ಬಜೆಟ್ ಅನ್ನು ಮಂಡನೆ ಗೊಳಿಸಿದ್ದರು. ಹಣಕಾಸು ವರ್ಷದ ಆರಂಭದಲ್ಲಿ ಎಲ್ಲ ಸಚಿವಾಲಯಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.