ನವದೆಹಲಿ : ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಗುರುನಾನಕ್ ಜಯಂತಿಯ ಶುಭಾಶಯ ಕೋರಿದ್ದಾರೆ.
ಜನರು ತಮ್ಮೆಲ್ಲ ಸಂಬಂಧಗಳನ್ನು ಬಲಪಡಿಸಲು ಮತ್ತು ಒಟ್ಟಿಗೆ ಬಾಳಲು ಗುರುನಾನಕ್ ಅವರ ವಿಶ್ವದೃಷ್ಠಿ ಮತ್ತು ಅವರ ಮಾನವಧರ್ಮ ನಮ್ಮೆಲ್ಲರಿಗೂ ಪ್ರೇರಣಾದಾಯಕ ಮತ್ತು ಅವರ ವಿಶ್ವದೃಷ್ಠಿಕೋನ ಮತ್ತು ಮಾನವಧರ್ಮದಿಂದ ನಾವು ಸ್ಫರ್ಧಾತ್ಮಕ ಯುಗದಲ್ಲಿ ಒಟ್ಟಿಗೆ ಸಂತೋಷವಾಗಿ ಬಾಳಲು ಸಾಧ್ಯ ಎಂದು ಮುಖರ್ಜಿ ಜನತೆಗೆ ಹೇಳಿದ್ದಾರೆ. ಅಲ್ಲದೇ ಗುರುನಾನಕ್ ಅವರ ಬೋಧನೆಗಳನ್ನು ಪಾಲಿಸುವರಿಂದ ಎಲ್ಲರು ಒಟ್ಟಿಗೆ ಬಾಳಲು ಸಾಧ್ಯ ಎಂದು ಹೇಳಿದ್ದಾರೆ.
ಮುಖರ್ಜಿಯವರು ಟ್ವಿಟರ್ನ ಮೂಲಕ ಭಾರತ ಮತ್ತು ವಿದೇಶದಲ್ಲಿರುವ ಭಾರತೀಯರಿಗೆ ಗುರುನಾನಕ್ ಜಯಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ.
Warm greetings & best wishes to all my fellow citizens in India & abroad on the birth anniversary of Guru Nanak Devji #PresidentMukherjee
— President of India (@RashtrapatiBhvn) November 14, 2016
ಪ್ರಧಾನಿ ಮೋದಿ ಕೂಡ ವಿಶೇಷ ದಿನವಾದ ಗುರುನಾನಕ್ ಜಯಂತಿಯ ಶುಭಾಶಯ ಕೋರಿದ್ದಾರೆ. ’ಗುರುನಾನಕ್ ಅವರ ಸ್ಫೂರ್ತಿದಾಯಕ ಬೋಧನೆಗಳಿಂದ ನಾವು ಒಂದು ಉತ್ತಮ ಹಾಗೂ ಸಾಮರಸ್ಯದ ಸಮಾಜವನ್ನು ನಿರ್ಮಿಸಬಹುದೆಂದು’ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Gurupurab wishes to everyone. The inspiring teachings of the venerable Guru Nanak guide us in creating a prosperous & harmonious society.
— Narendra Modi (@narendramodi) November 14, 2016
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.