ನವದೆಹಲಿ: ಅಸಹಿಷ್ಣುತೆಯ ವಾದ ದೇಶದಾದ್ಯಂತ ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿರುವ ವೇಳೆಯಲ್ಲೇ ಮಾಜಿ ಸಚಿವ ಪಿ.ಚಿದಂಬರಂ ನೀಡಿರುವ ಹೇಳಿಕೆ ಕಾಂಗ್ರೆಸ್ಗೆ ಇರಿಸುಮುರಿಸು ಉಂಟು ಮಾಡಿದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆಡಳಿತದ ವೇಳೆ ಖ್ಯಾತ ಬರಹಗಾರ ಸಲ್ಮಾನ್ ರಶ್ದಿಯವರ ‘ಸಟಾನಿಕ್ ವರ್ಸಸ್’ ಪುಸ್ತಕವನ್ನು ನಿಷೇಧ ಮಾಡಿದ್ದು ತಪ್ಪು ನಿರ್ಧಾರ ಎಂದು ಚಿದಂಬರಂ ಅಭಿಪ್ರಾಯ ಪಟ್ಟಿದ್ದಾರೆ.
ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜ್ಜು ಅವರು, ದೇಶದಲ್ಲಿ ಕಾಂಗ್ರೆಸ್ ಸೃಷ್ಟಿಸಿರುವ ಅಸಹಿಷ್ಣುತೆಯ ವಾತಾವರಣವನ್ನು ಚಿದಂಬರಂ ಹೇಳಿಕೆ ಪಂಕ್ಚರ್ ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಅಸಹಿಷ್ಣುತೆಯ ವಿಷಯ ಲೋಕಸಭೆಯಲ್ಲಿ ಚರ್ಚಿತವಾಗುವ ಮೊದಲೇ ಕಾಂಗ್ರೆಸ್ ಸೃಷ್ಟಿತ ಅಸಹಿಷ್ಣುತೆ ಪಂಕ್ಚರ್ ಆಗಿದೆ. ಕಾಂಗ್ರೆಸ್ ಅಸಹಿಷ್ಣುತೆಯ ಪಕ್ಷ ಎಂಬುದು ಸಾಬೀತಾಗಿದೆ. ಚಿದಂಬರಂ ಅದನ್ನು ಸ್ಪಷ್ಟಪಡಿಸಿದ್ದಾರೆ ಎಂದು ರಿಜ್ಜು ಹೇಳಿದ್ದಾರೆ.
ಪುಸ್ತಕವನ್ನು ನಿಷೇಧಿಸಿ 27 ವರ್ಷಗಳ ಬಳಿಕ ಇದೀಗ ಅದು ತಪ್ಪು ನಿರ್ಧಾರ ಎಂದು ಅಂದು ಗೃಹಸಚಿವರಾಗಿದ್ದ ಚಿದಂಬರಂ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅಸಹಿಷ್ಣುತೆಯ ಆರೋಪವನ್ನು ಮಾಡುವ ಮೂಲಕ ಕಾಂಗ್ರೆಸ್ ತಪ್ಪು ಮಾಡಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.