ಕೊಯಮತ್ತೂರು: ಇಶಾ ಫೌಂಡೇಶನ್ನ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಅವರು ಮಣ್ಣನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಜ್ಞಾನವನ್ನು ನಡೆಸುತ್ತಿದ್ದಾರೆ. ಅವರು ಭಾನುವಾರ ಈಶಾ ಯೋಗ ಕೇಂದ್ರದಿಂದ ಹೊರಟು 27 ರಾಷ್ಟ್ರಗಳಲ್ಲಿ 30,000 ಕಿಲೋಮೀಟರ್ಗಳ ಏಕಾಂಗಿ ಮೋಟಾರ್ಸೈಕಲ್ ಪ್ರಯಾಣವನ್ನು ಆರಂಭಿಸಿದ್ದಾರೆ. 100 ದಿನಗಳ ಅವರ ಪರ್ಯಟನೆ ನಡೆಯಲಿದೆ.
100-ದಿನಗಳ ಪ್ರಯಾಣವು ಎಲ್ಲಾ 27 ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆಯನ್ನು ಒಳಗೊಂಡಿದೆ ಮತ್ತು ಆಯಾ ದೇಶಗಳಲ್ಲಿ ಮಣ್ಣನ್ನು ಉಳಿಸಲು ತುರ್ತು ನೀತಿ ಕ್ರಮವನ್ನು ಪ್ರಾರಂಭಿಸುವಂತೆ ಸದ್ಗುರು ನಾಯಕರಿಗೆ ಮನವಿ ಮಾಡಲಿದ್ದಾರೆ
“ನಾವು ಕಳೆದ ಎರಡು ವರ್ಷಗಳಿಂದ ಮಣ್ಣು ಉಳಿಸಿ ಆಂದೋಲನವನ್ನು ನಡೆಸುತ್ತಿದ್ದೇನೆ” ಎಂದು ಕಳೆದ ಎಂಟು ತಿಂಗಳಿಂದ ರಾಷ್ಟ್ರಗಳ ಮಂತ್ರಿಗಳು ಮತ್ತು ನಾಯಕರನ್ನು ಭೇಟಿಯಾಗುತ್ತಿರುವ ಸದ್ಗುರು ಹೇಳಿದ್ದಾರೆ.
“ನೀವು ಕೃಷಿ ಭೂಮಿಯನ್ನು ಹೊಂದಿದ್ದರೆ, ಕನಿಷ್ಠ 3-6% ಸಾವಯವ ಅಂಶವು ಮಣ್ಣಿನಲ್ಲಿಇರಬೇಕು ಎಂಬ ನೀತಿಯನ್ನು 192 ದೇಶಗಳಲ್ಲಿ ತರುವುದು ಈ ಆಂದೋಲನದ ಪ್ರಯತ್ನವಾಗಿದೆ. ಭವಿಷ್ಯದ ಪೀಳಿಗೆಗೆ ಇದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತವನ್ನು ತೊರೆದ ನಂತರ ಅವರ ಮೊದಲ ಭೇಟಿ ಅಮೆರಿಕ ಆಗಿದೆ, ಅಲ್ಲಿ ಅವರು ಈ ಸಮಸ್ಯೆಯನ್ನು ಗಮನಕ್ಕೆ ತರಲು ಮಾಧ್ಯಮ ಸಂವಾದಗಳನ್ನು ನಡೆಸುತ್ತಾರೆ. ನಂತರ ಅವರು ಕೆರಿಬಿಯನ್ ದ್ವೀಪಗಳಿಗೆ ಪ್ರಯಾಣಿಸುತ್ತಾರೆ, ಅಲ್ಲಿ 9-11 ರಾಷ್ಟ್ರಗಳು ಮಣ್ಣು ಉಳಿಸಿ ಆಂದೋಲನದೊಂದಿಗೆ ಎಂಒಯುಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ತಮ್ಮ 100-ದಿನಗಳ ಪ್ರಯಾಣದ ಸಮಯದಲ್ಲಿ, ಸದ್ಗುರುಗಳು ಕನ್ವೆನ್ಶನ್ ಆಫ್ ಪಾರ್ಟಿಸ್ (COP15) ನ 15 ನೇ ಅಧಿವೇಶನವನ್ನು ಉದ್ದೇಶಿಸಿ ಯುನೈಟೆಡ್ ನೇಷನ್ಸ್ ಕನ್ವೆನ್ಶನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಶನ್ (UNCCD) ನಲ್ಲಿ ಮಾತನಾಡಲಿದ್ದಾರೆ. ಇಷ್ಟೇ ಅಲ್ಲದೆ ಅವರು ಮಣ್ಣಿನ ಸಂರಕ್ಷಣೆಗೆ ಸಂಬಂಧಿಸಿದಂತೆ ಅನೇಕ ಜಾಗತಿಕ ವೇದಿಕೆಗಳಲ್ಲಿ ಮಾತನಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.