ನವದೆಹಲಿ: ಬಾಲಿವುಡ್ ನಟ ಹಾಗೂ ಬಿಜೆಪಿ ಮುಖಂಡ ಪರೇಶ್ ರಾವಲ್ ಅವರು ಎಲ್ಲರೂ ಚಿಂತನೆ ನಡೆಸಬೇಕಾದ ಅಭಿಪ್ರಾಯವೊಂದನ್ನು ಮುಂದಿಟ್ಟಿದ್ದಾರೆ. ನಿಜವಾದ ಹೀರೋಗಳು ಯಾರು ಎಂಬುದನ್ನು ಮುಂದಿನ ಪೀಳಿಗೆಗೆ ಸರಿಯಾಗಿ ಮನದಟ್ಟುಕೊಡಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಅವರು ಹೇಳಿದ್ದಾರೆ.
ಸಿನಿಮಾ ನಟರನ್ನು ಸಾಮಾನ್ಯವಾಗಿ ಜನರು ಹೀರೋಗಳು ಎಂದು ಕರೆಯುತ್ತಾರೆ. ಆದರೆ ಅವರು ಕೇವಲ ಮನೋರಂಜಕರು. ನಿಜವಾದ ಹೀರೋಗಳು ಭಾರತೀಯ ಸೇನಾ ಯೋಧರು ಮತ್ತು ಪೊಲೀಸರು ಎಂಬುದಾಗಿ ಅವರು ಹೇಳಿದ್ದಾರೆ. ಮಾತ್ರವಲ್ಲದೇ, ಈಗ ಕರೆಯುವ ಹೀರೋಗಳ ಹೆಸರನ್ನು ʼಮನೋರಂಜರುʼ ಎಂದು ಬದಲಾಯಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮಾತ್ರವಲ್ಲದೇ ಇ-ಕಾಮರ್ಸ್ಗಳಾದ ಫ್ಲಿಪ್ಕಾರ್ಟ್, ಅಮೆಜಾನ್, ಸ್ನ್ಯಾಪ್ಡೀಲ್ಗಳಿಗೆ ಸ್ಪಷ್ಟ ಸಂದೇಶವನ್ನು ನೀಡಿರುವ ಅವರು, ಚೀನಾ ಉತ್ಪನ್ನಗಳನ್ನು ಮಾರಾಟ ಮಾಡುವುದಾದರೆ ಡಿಸ್ಕ್ಲೇಮರ್ಗಳನ್ನು ಹಾಕಬೇಕು. ಗ್ರಾಹಕನಾಗಿ ನನಗೆ ಆ ಉತ್ಪನ್ನ ಯಾವ ದೇಶದ್ದು ಎಂದು ತಿಳಿದುಕೊಳ್ಳುವ ಹಕ್ಕಿದೆ ಎಂದಿದ್ದಾರೆ.
We Should Start Calling Actors As 'Entertainers' And Our Army & Police As 'Heroes' for Our Next Generation To Know The Actual Meaning Of Real Heroes !!!
— Paresh Rawal (@SirPareshRawal) June 23, 2020
Hello Amazon, Flipkart, Snapdeal and all the other online merchants, if you are selling Chinese goods, kindly ensure that you put a disclaimer on them. As your customer, I would like to know the origin of the product that I am buying.#BoycottChineseProducts
— Paresh Rawal (@SirPareshRawal) June 18, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.