ಇಸ್ಲಾಮಾಬಾದ್: ಕೊರೋನಾವೈರಸ್ ಲಾಕ್ಡೌನ್ನಿಂದಾಗಿ ಪಾಕಿಸ್ಥಾನದಲ್ಲಿ ಸಿಲುಕಿಕೊಂಡಿದ್ದ 748 ಭಾರತೀಯ ಪ್ರಜೆಗಳ ವಾಪಸ್ಸಾತಿ ಪ್ರಕ್ರಿಯೆ ಗುರುವಾರದಿಂದ ಪ್ರಾರಂಭವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಸಿಲುಕಿ ಹಾಕಿಕೊಂಡಿರುವ ಭಾರತೀಯರೊಂದಿಗೆ ಸಂಪರ್ಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಾಪಾಸ್ಸಾತಿಗೆ ಮಂಗಳವಾರ ದಿನಾಂಕ ನಿಗದಿಪಡಿಸಿತ್ತು, ಆದರೆ, ವಾಪಸಾತಿ ಪ್ರಕ್ರಿಯೆಯ ದಿನಾಂಕವನ್ನು ನಂತರ ಗುರುವಾರಕ್ಕೆ ಬದಲಾಯಿಸಲಾಯಿತು ಎಂದು ವರದಿಗಳು ತಿಳಿಸಿವೆ.
ಭಾರತೀಯ ಪ್ರಜೆಗಳನ್ನು ವಾಘಾ ಗಡಿಯಿಂದ ಮೂರು ಹಂತಗಳಲ್ಲಿ ಭಾರತಕ್ಕೆ ವಾಪಸ್ ಕಳುಹಿಸಲಾಗುವುದು ಮತ್ತು ಅದಕ್ಕಾಗಿ ಸಂಬಂಧಪಟ್ಟ ಇಲಾಖೆಗಳು ಮತ್ತು ಪಂಜಾಬ್ ರೇಂಜರ್ಸ್ಗೆ ಹೆಸರುಗಳ ಪಟ್ಟಿಯನ್ನು ಸಹ ನೀಡಲಾಗಿದೆ. ಅವರು ಹಿಂದಿರುಗುವ ಸಲುವಾಗಿ ಗಡಿಯನ್ನು ಜೂನ್ 25 ರಿಂದ 27 ರವರೆಗೆ ತೆರೆಯಲಾಗುತ್ತದೆ.
ಮೊದಲ ಹಂತವು ಜೂನ್ 25 ರಂದು ನಡೆಯಲಿದ್ದು, 250 ಭಾರತೀಯ ಪ್ರಜೆಗಳು ಮರಳಲು ಅನುಕೂಲವಾಗಲಿದೆ ಮತ್ತು ಶುಕ್ರವಾರದ ಎರಡನೇ ಹಂತದಲ್ಲೂ 250 ಜನರು ವಾಪಸ್ ಆಗಲಿದ್ದಾರೆ. ಕನಿಷ್ಠ 248 ಭಾರತೀಯರು ಶನಿವಾರ ಮೂರನೇ ಹಂತದ ಅಡಿಯಲ್ಲಿ ಮರಳಲಿದ್ದಾರೆ. ಇದು ವಾಪಸ್ಸಾತಿ ಪ್ರಕ್ರಿಯೆಯ ಕೊನೆಯ ಹಂತ.
ಭಾರತೀಯ ಪ್ರಜೆಗಳನ್ನು ಸುಗಮವಾಗಿ ವಾಪಾಸು ಕಳುಹಿಸುವುದನ್ನು ಖಚಿತಪಡಿಸಿಕೊಳ್ಳಲು ವಲಸೆ ಅಧಿಕಾರಿಗಳಿಗೆ ಪಾಕಿಸ್ಥಾನ ಸರ್ಕಾರವು ಸೂಚನೆ ನೀಡಿದೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.