ಜೈಪುರ: ಸಶಸ್ತ್ರ ಪಡೆಗಳ ಮಾಜಿ ಸೈನಿಕರು ಮತ್ತು ಸಿಬ್ಬಂದಿಗಳು ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಶ್ಲಾಘಿಸಿದ್ದಾರೆ.
ಸಶಸ್ತ್ರ ಪಡೆಗಳ ಮಾಜಿ ಸೈನಿಕರ ದಿನಾಚರಣೆಯಂದು ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಕ್ಷಣಾ ಸಚಿವರು, “ಭಾರತ ಇಂದು ಸುರಕ್ಷಿತವಾಗಿದ್ದರೆ, ಗಡಿಗಳು ಮಾತ್ರವಲ್ಲದೆ ದೇಶದ ಏಕತೆಯೂ ಉಳಿದಿದ್ದರೆ ಅದರ ಶ್ರೇಯಸ್ಸು, ಮನ್ನಣೆ ನಿಮ್ಮಂತಹ ಧೈರ್ಯಶಾಲಿ ಜನರಿಗೆ, ಸಶಸ್ತ್ರ ಪಡೆಗಳ ಯೋಧರಿಗೆ ಸಿಗಬೇಕು” ಎಂದಿದ್ದಾರೆ.
ಒಮ್ಮೆ ಸೈನಿಕನಾದವನು, ಯಾವಾಗಲೂ ಸೈನಿಕ ಎಂದು ದೇಶವು ಅರ್ಥಮಾಡಿಕೊಂಡಿದೆ ಎಂಬುದನ್ನು ಒತ್ತಿ ಹೇಳಿದರು.
ರಕ್ಷಣಾ ಸಚಿವರ ಪಾತ್ರವನ್ನು ನಿಭಾಯಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.
ಕಳೆದ 20-21 ವರ್ಷಗಳಿಂದ ರಕ್ಷಣಾ ಪಡೆಗಳ ಮುಖ್ಯಸ್ಥರ ರಚನೆಗೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಿತ್ತು, ಆದರೆ ಅದನ್ನು ಕಾರ್ಯಕತಗೊಳಿಸಿದ್ದು ಎನ್ಡಿಎ ಸರ್ಕಾರವೇ ಎಂದು ಅವರು ಹೇಳಿದರು.
“ರಕ್ಷಣಾ ಪಡೆಗಳ ಮುಖ್ಯಸ್ಥರ ನಿಯೋಜನೆಯಾಗಬೇಕು ಎಂದು ಕಳೆದ 20-21 ವರ್ಷಗಳಿಂದ ಚರ್ಚೆಗಳು ನಡೆಯುತ್ತಿತ್ತು. ಆದರೆ ನಾನು ರಕ್ಷಣಾ ಸಚಿವರಾದ ಕೂಡಲೇ ಈ ಬಗ್ಗೆ ಪ್ರಧಾನಮಂತ್ರಿಯೊಂದಿಗೆ ಚರ್ಚಿಸಿದೆ. ಅವರು ಒಂದು ಕ್ಷಣವೂ ಕಾಯದೆ ಸರಿ ಎಂದು ಹೇಳಿದರು” ಎಂದಿದ್ದಾರೆ.
ಮಾಜಿ ಸೈನಿಕರ ಕಲ್ಯಾಣವು ಕೇಂದ್ರ ಸರ್ಕಾರಕ್ಕೆ ಆದ್ಯತೆಯಾಗಿದೆ ಎಂದು ರಕ್ಷಣಾ ಸಚಿವರು ಎತ್ತಿ ತೋರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.