ನವದೆಹಲಿ: ತಮ್ಮ ಮೊದಲ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ನೌಕಾಪಡೆಗೆ ಎರಡು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಬ್ಯಾಟರಿಗಳನ್ನು ಖರೀದಿಸುವುದು ಸೇರಿದಂತೆ 12,000 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಖರೀದಿಪಡಿಸುವ ಬಗ್ಗೆ ನಿರ್ಧರಿಸಲಿದ್ದಾರೆ.
ಸಭೆ ಗುರುವಾರ ನಡೆಯಲಿದ್ದು, ಭಾರತ ಮತ್ತು ವಿದೇಶಗಳಿಂದ ಮಾಡಲು ನಿರ್ಧರಿಸಿರುವ ಹಲವಾರು ಖರೀದಿಗಳ ಬಗ್ಗೆ ರಕ್ಷಣಾ ಸಚಿವರು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.
“ಎರಡು ಮೊಬೈಲ್ ಮಿಸೈಲ್ ಕೋಸ್ಟಲ್ ಬ್ಯಾಟರಿಗಳನ್ನು ನೌಕಾಪಡೆಗೆ ಖರೀದಿಸಬೇಕಾಗಿದೆ. ಪ್ರಮುಖ ನಗರಗಳಿಗೆ ಹತ್ತಿರವಿರುವ ಟತ್ರಾ ಟ್ರಕ್ಗಳಲ್ಲಿ 1400 ಕೋಟಿ ರೂ.ಗಳ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಬ್ಯಾಟರಿಗಳನ್ನು ನೌಕಾಪಡೆಯು ನಿಯೋಜಿಸಲಿದೆ. ಬೆದರಿಕೆಗಳ ಸಂದರ್ಭದಲ್ಲಿ ಇಲ್ಲಿಂದಲೇ ಅದು ಒಳನುಸುಳುವ ಶತ್ರುಗಳ ಯುದ್ಧನೌಕೆಯನ್ನು ಧ್ವಂಸ ಮಾಡಲಿದೆ ” ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ತನ್ನ ಅಸ್ತಿತ್ವದಲ್ಲಿರುವ ಎರಡು ಹಳೆಯ ವ್ಯವಸ್ಥೆಗಳನ್ನು ಬ್ರಹ್ಮೋಸ್ ಮಿಸೈಲ್ ಬ್ಯಾಟರಿಗಳೊಂದಿಗೆ ರಿಪ್ಲೇಸ್ ಮಾಡಲು ನೌಕೆ ಬಯಸುತ್ತಿದೆ ಎಂದು ಹೇಳಲಾಗಿದೆ.
ಡಿಎಸಿ ಸಭೆಯಲ್ಲಿ, ಭಾರತೀಯ ಕೋಸ್ಟ್ ಗಾರ್ಡ್ಗಾಗಿ 7,000 ಕೋಟಿ ರೂಪಾಯಿ ಮೌಲ್ಯದ 14 ಮೀಡಿಯಂ-ಲಿಫ್ಟ್ ಚಾಪರ್ಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಿಂಗ್ ಕರೆ ನೀಡಲಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.