ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ವಾಪಾಸ್ ಪಡೆದುಕೊಂಡ ಬೆಳವಣಿಗೆಯ ನಡುವೆಯೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಕಣಿವೆ ರಾಜ್ಯದಲ್ಲಿ ಸ್ಥಳಿಯರೊಂದಿಗೆ ಮಾತುಕತೆಯನ್ನು ನಡೆಸುವಲ್ಲಿ ನಿರತರಾಗಿದ್ದಾರೆ. ಬುಧವಾರ ಅವರು ಬೀದಿಯಲ್ಲಿ ನಿಂತು ಸಾಂಪ್ರದಾಯಿಕ ಕಾಶ್ಮೀರಿ ವಾಝ್ವನ್ ಊಟವನ್ನು ಸವಿಯುತ್ತಿರುವ ವೀಡಿಯೋಗಳು ಸಾಕಷ್ಟು ವೈರಲ್ ಆಗಿದೆ.
“ಎಲ್ಲಾ ಹೇಗಿದೆ? ಜನರು ಏನು ಯೋಚಿಸುತ್ತಿದ್ದಾರೆ” ಎಂದು ದೋವಲ್ ಅವರು ಜನರ ಗುಂಪೊಂದನ್ನು ಪ್ರಶ್ನಿಸಿದ್ದಾರೆ, ಎಲ್ಲವೂ ಸರಿಯಾಗಿದೆ ಎಂದು ಗುಂಪಿನಲ್ಲಿದ್ದ ಒಬ್ಬ ಉತ್ತರಿಸುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಮುಚ್ಚಿದ ಅಂಗಡಿಗಳ ಮುಂದೆ ನಿಂತು ಈ ಮಾತುಕತೆಗಳು ನಡೆದಿವೆ.
“ಹೌದು, ಎಲ್ಲವೂ ಚೆನ್ನಾಗಿರುತ್ತದೆ. ಎಲ್ಲರೂ ಶಾಂತಿಯುತವಾಗಿ ಬದುಕಬೇಕು. ಸರ್ವಶಕ್ತ ಏನು ಮಾಡಿದರೂ ಒಳ್ಳೆಯದು. ನಿಮ್ಮ ಭದ್ರತೆ ಮತ್ತು ಯೋಗಕ್ಷೇಮವೇ ನಮ್ಮ ಏಕೈಕ ಕಾಳಜಿ. ನಿಮ್ಮ ಪೀಳಿಗೆಯ ಬೆಳವಣಿಗೆ ಮತ್ತು ಕಲ್ಯಾಣದ ಬಗ್ಗೆ ನಾವು ಯೋಚಿಸುತ್ತಿದ್ದೇವೆ” ಎಂದು ದೋವಲ್ ಸ್ಥಳಿಯರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಅವರು ಶೋಪಿಯಾನ್ನಲ್ಲಿ ಭದ್ರತಾ ಸಿಬ್ಬಂದಿಯನ್ನೂ ಭೇಟಿಯಾಗಿದ್ದಾರೆ. “ಸಿಆರ್ಪಿಎಫ್ (ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್) ಅನ್ನು ಅವಲಂಬಿಸಬೇಕು ಎಂಬುದು ರಾಷ್ಟ್ರಕ್ಕೆ ತಿಳಿದಿದೆ. ಎಡಪಂಥೀಯ ಉಗ್ರವಾದದಿಂದ ಹಿಡಿದು ಕಾಶ್ಮೀರದಲ್ಲಿನ ಭಯೋತ್ಪಾದನೆಯವರೆಗೆ ಸಿಆರ್ಪಿಎಫ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ” ಎಂದು ಅವರು ಸೈನಿಕರೊಂದಿಗೆ ಮಾತನಾಡುವ ಸಂದರ್ಭ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ, ದೊಂಬಿಗಳು ನಡೆಯದಂತೆ ಸಾಕಷ್ಟು ಭದ್ರತಾ ಕ್ರಮಗಳನ್ನು ತೆಗೆದುಕೊಂಡ ಬಳಿಕವೇ ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದೆ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದೆ. ಸರ್ಕಾರದ ಈ ನಿರ್ಧಾರದ ಹಿಂದೆ ಅಜಿತ್ ದೋವಲ್ ಅವರ ಪರಿಶ್ರಮ ಸಾಕಷ್ಟಿದೆ.
ವೈರಲ್ ವೀಡಿಯೋ ನೋಡಿ
India’s National Security Advisor Ajit Doval interacting with Indian forces in Jammu and Kashmir. pic.twitter.com/LWIZ9PirTK
— Sidhant Sibal (@sidhant) August 7, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.