
ಶ್ರೀನಗರ: ನವೆಂಬರ್ 11 ರಂದು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಚೆಕ್ಪಾಯಿಂಟ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೈಬಾ ಉಗ್ರ ಲತೀಫ್ ಭಟ್, ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ನಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ.
ಅವನು ಮಸೀದಿಯೊಂದರೊಳಗೆ ಅಡಗಿಕೊಂಡಿದ್ದ ಮತ್ತು ಶರಣಾಗುವಂತೆ ಸೂಚಿಸಿದಾಗ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಟ್ ಮತ್ತು ಅವನ ಸಹಚರ ಉಮರ್ ನಿಸಾರ್ ದಾರ್ (ಇವನು ಸೋಮವಾರ ಕುಲ್ಗಾಮ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತನಾಗಿದ್ದನು), ನವೆಂಬರ್ 11 ರಂದು ಅಖ್ರಾನ್ನಲ್ಲಿರುವ ಸಿಆರ್ಪಿಎಫ್ ಚೆಕ್ಪಾಯಿಂಟ್ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದರು.
ಈ ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಮತ್ತು 500ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಪೊಲೀಸರು ವಿಡಿಯೋ ಕರೆ ಮೂಲಕ ಭಟ್ನೊಂದಿಗೆ ಮಾತನಾಡಿ, ಶರಣಾಗುವಂತೆ ಸೂಚಿಸಿದ ಸ್ವಲ್ಪ ಸಮಯದ ನಂತರವೇ, ಅಂದರೆ ಬೆಳಗಿನ ಜಾವ ಸುಮಾರು 2:45 ರ ಸುಮಾರಿಗೆ ಈ ಹೊಸ ಎನ್ಕೌಂಟರ್ ಆರಂಭವಾಯಿತು.
“ಹಮ್ ತುಮ್ಹಾರೆ ಸಾಥ್ ಹೈಂ (ನಾವು ನಿನ್ನ ಜೊತೆಗಿದ್ದೇವೆ)” ಎಂದು ಅಧಿಕಾರಿಯೊಬ್ಬರು ಭಟ್ಗೆ ಹೇಳುತ್ತಿರುವುದು ಕೇಳಿಸಿದೆ. ಆದರೆ, ಅವನು ಶರಣಾಗಲು ನಿರಾಕರಿಸಿ “ಮುಝೆ ಅಲ್ಲಾಹ್ ಸೆ ಮುಲಾಕಾತ್ ಕರ್ನಾ ಹೈ. ಮೈ ಬಹುತ್ ಖುಷ್ ಹೂಂ (ನಾನು ಅಲ್ಲಾಹನನ್ನು ಭೇಟಿಯಾಗಲು ಬಯಸುತ್ತೇನೆ. ನಾನು ತುಂಬಾ ಸಂತೋಷವಾಗಿದ್ದೇನೆ)” ಎಂದು ಹೇಳಿದ್ದಾನೆ. ಬಳಿಕ ಆತನನ್ನು ಎನ್ಕೌಂಟರ್ ಮಾಡಿ ಕೊಲ್ಲಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



