News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 19th November 2026

×
Home About Us Advertise With s Contact Us

2035ರ ವೇಳೆಗೆ ಜಾಗತಿಕವಾಗಿ ಕ್ರೈಸ್ಥರನ್ನು ಮೀರಿಸಲಿದೆ ಮುಸ್ಲಿಂ ಜನಸಂಖ್ಯೆ

ನವದೆಹಲಿ: ಪ್ಯೂ ರಿಸರ್ಚ್ ಸೆಂಟರ್ (Pew Research Center) ಬಿಡುಗಡೆ ಮಾಡಿರುವ ಹೊಸ ಅಧ್ಯಯನದ ಪ್ರಕಾರ, 2035ರ ವೇಳೆಗೆ ಜಾಗತಿಕವಾಗಿ ಮುಸ್ಲಿಮರ ಸಂಖ್ಯೆಯು ಕ್ರೈಸ್ತರ ಸಂಖ್ಯೆಯನ್ನು ಮೀರಿಸಲಿದ್ದು, ಇಸ್ಲಾಂ ಮತವು ವಿಶ್ವದ ಅತಿದೊಡ್ಡ ಮತವಾಗಲಿದೆ.

ಈ ಬದಲಾವಣೆಗೆ ಮುಖ್ಯ ಕಾರಣವೆಂದರೆ ಮುಸ್ಲಿಮರಲ್ಲಿ ಕಂಡುಬರುವ ಹೆಚ್ಚಿನ ಸಂತಾನೋತ್ಪತ್ತಿ ದರ (fertility rate) ಮತ್ತು ಯುವ ಜನಸಂಖ್ಯೆಯ ಪ್ರಮಾಣ. ಇತರ ಪ್ರಮುಖ ಧರ್ಮಗಳಿಗೆ ಹೋಲಿಸಿದರೆ, ಮುಸ್ಲಿಂ ಸಮುದಾಯವು ಹೆಚ್ಚು ವೇಗವಾಗಿ ಬೆಳೆಯುತ್ತಿದೆ.

“ವಿಶ್ವದಾದ್ಯಂತ ಗಮನಿಸಿದಾಗ, ಮುಸ್ಲಿಮೇತರರಿಗೆ ಹೋಲಿಸಿದರೆ ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಅಲ್ಲದೆ, ಹಿಂದೆ ಹೆಚ್ಚು ಮಕ್ಕಳನ್ನು ಹೊಂದಿದ್ದ ಕಾರಣದಿಂದಾಗಿ, ಅವರ ಜನಸಂಖ್ಯೆಯಲ್ಲಿ ಯುವಕರ ಪ್ರಮಾಣವೂ ಹೆಚ್ಚಾಗಿದೆ” ಎಂದು ಪ್ಯೂ ಸಂಸ್ಥೆಯ ಹಿರಿಯ ಜನಸಂಖ್ಯಾ ತಜ್ಞ ಕಾನ್ರಾಡ್ ಹ್ಯಾಕೆಟ್ ಅವರು ತಿಳಿಸಿದ್ದಾರೆ.

ಈ ಅಧ್ಯಯನದ ಪ್ರಕಾರ, ಮುಸ್ಲಿಮರಲ್ಲಿ ಸಂತಾನೋತ್ಪತ್ತಿ ದರವು ಪ್ರತಿ ಮಹಿಳೆಗೆ ಸರಾಸರಿ 3.1 ಮಕ್ಕಳಷ್ಟಿದ್ದು, ಇದು ಎಲ್ಲಾ ಧರ್ಮಗಳ ಪೈಕಿ ಅತ್ಯಧಿಕವಾಗಿದೆ. ನಂತರದ ಸ್ಥಾನದಲ್ಲಿ ಕ್ರೈಸ್ತರಿದ್ದು, ಇಲ್ಲಿ ಈ ಪ್ರಮಾಣವು 2.5 ರಷ್ಟಿದೆ. 2020 ಮತ್ತು 2025ರ ನಡುವೆ, ಮುಸ್ಲಿಂ ಮಹಿಳೆಯರು 25.2 ಕೋಟಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು ಇತರ ಯಾವುದೇ ಧರ್ಮದ ಮಹಿಳೆಯರು ಹೆತ್ತ ಮಕ್ಕಳ ಸಂಖ್ಯೆಗಿಂತ ಹೆಚ್ಚಾಗಿದ್ದು, ಇದೇ ಅವಧಿಯಲ್ಲಿ ಕ್ರೈಸ್ತ ತಾಯಂದಿರು 20.8 ಕೋಟಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top