
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, 4ನೇ ಭಾರತ-ಜಪಾನ್ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಂವಾದದಲ್ಲಿ (2+2) ಭಾಗವಹಿಸಲು ಹಾಗೂ ಜಪಾನ್ನ ರಕ್ಷಣಾ ಸಚಿವ ಸಮಕಕ್ಷ ಶಿಂಜಿರೊ ಕೊಯಿಜುಮಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು, ಎರಡು ದಿನಗಳ ಭೇಟಿಗಾಗಿ ಬುಧವಾರ ಟೋಕಿಯೊಗೆ ಆಗಮಿಸಿದರು.
ಅವರು ಟೋಕಿಯೊಗೆ ಆಗಮಿಸಿದಾಗ, ಜಪಾನ್ ಜಂಟಿ ಸಿಬ್ಬಂದಿ ಮುಖ್ಯಸ್ಥರ ಉಪ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ನೊರಿಮಿಚಿ ಶಿರಾಕಾವಾ ಅವರು ಅವರನ್ನು ಸ್ವಾಗತಿಸಿದರು.
ಈ ಭೇಟಿಯ ಸಂದರ್ಭದಲ್ಲಿ, ಉಭಯ ದೇಶಗಳು ತಮ್ಮ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಪರಿಶೀಲಿಸಲಿವೆ. ಜೊತೆಗೆ, ಕಡಲ ಭದ್ರತೆ, ರಕ್ಷಣಾ ತಂತ್ರಜ್ಞಾನ ಮತ್ತು ಪ್ರಾದೇಶಿಕ ಸ್ಥಿರತೆಯ ಕ್ಷೇತ್ರಗಳಲ್ಲಿ ಸಹಯೋಗವನ್ನು ವಿಸ್ತರಿಸುವ ಮಾರ್ಗಗಳ ಬಗ್ಗೆ ಚರ್ಚಿಸಲಿವೆ.
ಮಂಗಳವಾರ ಪ್ರಯಾಣ ಬೆಳೆಸುವ ಮುನ್ನ ‘ಎಕ್ಸ್’ ಪೋಸ್ಟ್ ಮಾಡಿದ್ದ ರಾಜನಾಥ್ ಸಿಂಗ್, ತಾವು ಭಾರತ-ಜಪಾನ್ ‘2+2’ ಸಚಿವರ ಸಭೆಯಲ್ಲಿ ಭಾಗವಹಿಸುವುದಾಗಿ ಮತ್ತು ಜಪಾನ್ ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವುದಾಗಿ ತಿಳಿಸಿದ್ದರು.
“ಭಾರತ-ಜಪಾನ್ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಭೆಯಲ್ಲಿ (2+2) ಭಾಗವಹಿಸಲು ನಾನು ಇಂದು ಟೋಕಿಯೊಗೆ ಹೊರಟಿದ್ದೇನೆ. ನನ್ನ ಭೇಟಿಯ ವೇಳೆ, ಜಪಾನ್ ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನೂ ನಡೆಸಲಿದ್ದೇನೆ. ಪರಸ್ಪರ ನಂಬಿಕೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಆಧಾರದ ಮೇಲೆ, ಮುಕ್ತ, ಸ್ವತಂತ್ರ ಮತ್ತು ನಿಯಮ-ಆಧಾರಿತ ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ಭಾರತ ಮತ್ತು ಜಪಾನ್ ಒಂದೇ ರೀತಿಯ ದೃಷ್ಟಿಕೋನವನ್ನು ಹೊಂದಿವೆ. ಅಲ್ಲದೆ, ಈ ಎರಡೂ ರಾಷ್ಟ್ರಗಳು ‘ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆ’ಯನ್ನು (Special Strategic and Global Partnership) ರೂಪಿಸಿಕೊಂಡಿವೆ” ಎಂದು ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



