ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡಿದ ಒಂದು ವಾರಗಳ ತರುವಾಯ, ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಮತ್ತು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರಿಗೂ ನರೇಂದ್ರ ಮೋದಿ ಸರ್ಕಾರ ಸಂಪುಟ ದರ್ಜೆಯ ಸ್ಥಾನಮಾನವನ್ನು ಪ್ರದಾನಿಸಿದೆ.
ಮಂಗಳವಾರ ಈ ಇಬ್ಬರ ಅಧಿಕಾರವಧಿಯನ್ನೂ 5 ವರ್ಷಗಳಿಗೆ ವಿಸ್ತರಣೆಗೊಳಿಸಲಾಗಿದೆ ಮತ್ತು ಇವರಿಗೆ ಸಂಪುಟ ಸಚಿವರ ರ್ಯಾಂಕ್ ನೀಡಲಾಗಿದೆ.
ಈ ಇಬ್ಬರೂ ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್)ನ ನಿವೃತ್ತ ಅಧಿಕಾರಿಗಳಾಗಿದ್ದು, ಪ್ರಧಾನ ಕಾರ್ಯದರ್ಶಿ ಮತ್ತು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ಮೇ.31ರಿಂದ ಇವರ ಸೇವಾ ಅವಧಿಯನ್ನು ವಿಸ್ತರಣೆಗೊಳಿಸಲಾಗಿದೆ.
74 ವರ್ಷದ ನೃಪೇಂದ್ರ ಮಿಶ್ರಾ ಅವರು, ಉನ್ನತ ಆಡಳಿತಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ರಸಗೊಬ್ಬರ ಕಾರ್ಯದರ್ಶಿಯಿಂದ ಹಿಡಿದು ಟೆಲಿಕಾಂ ಕಾರ್ಯದರ್ಶಿಯವರೆಗೆ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. 1967ರ ಉತ್ತರಪ್ರದೇಶದ ಕೇಡಾರ್ ನ ಐಎಎಸ್ ಅಧಿಕಾರಿ ಇವರಾಗಿದ್ದಾರೆ.
ಪ್ರಮೋದ್ ಕುಮಾರ್ ಮಿಶ್ರಾ ಅವರು ಕೂಡ ಪ್ರಧಾನಿ ನರೇಂದ್ರ ಮೋದಿಯವರ ಅತ್ಯಂತ ನಂಬಿಕಸ್ಥ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. 2001 ಮತ್ತು 2004ರಲ್ಲಿ ಮೋದಿಯವರು ಗುಜರಾತ್ ಸಿಎಂ ಆಗಿದ್ದ ವೇಳೆಯಲ್ಲೂ ಅವರು ಮೋದಿಯವರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.