ನವದೆಹಲಿ: ಶೀಘ್ರದಲ್ಲೇ ಭಾರತೀಯ ಸೇನೆಯು T-90MS ಮುಖ್ಯ ಯುದ್ಧ ಟ್ಯಾಂಕ್ ಅನ್ನು ಖರೀದಿ ಮಾಡಲಿದೆ. 13448 ಕೋಟಿ ರೂ. ವೆಚ್ಚದಲ್ಲಿ 464 ಹೆಚ್ಚುವರಿ ಟ್ಯಾಂಕ್ಗಳನ್ನು ಖರೀದಿ ಮಾಡಲು ಇತ್ತೀಚಿಗೆ ನಡೆದ ಭದ್ರತಾ ಸಂಪುಟ ಸಭೆಯಲ್ಲಿ ಅನುಮೋದನೆಯನ್ನು ನೀಡಲಾಗಿತ್ತು. ರಷ್ಯಾದ ಸೇನೆ ಮತ್ತು ಭಾರತೀಯ ಸೇನೆ ಈಗಾಗಲೇ ಹೊಂದಿರುವ T-90Sನ ಆಧುನಿಕ ವರ್ಶನ್ T-90MS ಆಗಿದೆ.
ಮಿಲಿಟರಿ-ಟೆಕ್ನಿಕಲ್ ಕೋಆಪರೇಷನ್ (FSMTC) ಗೆ ಸಂಬಂಧಿಸಿದ ರಷ್ಯಾ ಫೆಡರಲ್ ಸರ್ವಿಸ್, ಟಿ-90 ಎಂಎಸ್ ಅನ್ನು ತಯಾರಿಸಲು ಭಾರತೀಯ ಪಾಲುದಾರರಿಗೆ ಸಹಾಯ ಮಾಡುವುದನ್ನು ಮುಂದುವರಿಯಲಿದ್ದೇವೆ ಎಂದು ತಿಳಿಸಿದೆ. ಟಿ-90ಎಂಎಸ್ಗೆ ಭಾರತೀಯ ಸೇನೆಯು ಭೀಷ್ಮ ಎಂದು ಮರುನಾಮಕರಣ ಮಾಡಿದೆ. “ಭಾರತೀಯ ಸೇನಾ ಪಡೆಗಳಿಗಾಗಿ ಹೆಚ್ಚಿನ ಟ್ಯಾಂಕ್ಗಳನ್ನು ಖರೀದಿಸುವ ಭಾರತೀಯ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ರಷ್ಯಾವು ಪರವಾನಗಿಯನ್ನು ಮುಂದುವರಿಸುವುದಕ್ಕೆ ಮತ್ತು ಭಾರತದಲ್ಲಿ ಟಿ -90 ಟ್ಯಾಂಕ್ಗಳ ಉತ್ಪಾದನೆಯನ್ನು ಸ್ಥಾಪಿಸುವುದಕ್ಕೆ ಸಜ್ಜಾಗಿದೆ” ಎಂದು FSMTC ತಿಳಿಸಿದೆ.
464 T-90MS ಟ್ಯಾಂಕ್ಗಳನ್ನು ಖರೀದಿಸಲು ಏಪ್ರಿಲ್ ಆರಂಭದಲ್ಲಿ ನಡೆದ ಭದ್ರತಾ ಸಂಪುಟ ಸಮಿತಿಯ ಸಭೆಯಲ್ಲಿ ಅನುಮೋದನೆಯನ್ನು ನೀಡಲಾಯಿತು ಎಂದು ವರದಿಯಾಗಿದೆ. ರಷ್ಯಾದ ಟ್ಯಾಂಕ್ ತಯಾರಕರಾದ ಉರಾಲ್ವಾಗೋಜೋವೋಡ್, ಚೆನ್ನೈ ಅವಧಿಯಲ್ಲಿ ಹೆವಿ ವೆಹ್ಹಿಕಲ್ ಫ್ಯಾಕ್ಟರಿಯಲ್ಲಿ ಟ್ಯಾಂಕ್ ಅನ್ನು ಜೋಡಿಸಲಿದೆ. ಟ್ಯಾಂಕ್ಗಳು ಸೈನ್ಯದ 10 ಶಸ್ತ್ರಸಜ್ಜಿತ ಪಡೆಗಳನ್ನು ಸೇರಿಕೊಳ್ಳಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.