ನವದೆಹಲಿ: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ ಆರು ಸದಸ್ಯರುಳ್ಳ ಹಣಕಾಸು ನೀತಿ ಸಮಿತಿಯು, ಗುರುವಾರ 2019-20ನೇ ಸಾಲಿನ ದ್ವೈಮಾಸಿಕ ಹಣಕಾಸು ನೀತಿಯನ್ನು ಘೋಷಣೆ ಮಾಡಿದ್ದು, ರೆಪೋ ದರದಲ್ಲಿ ಶೇ. 0.25 ರಷ್ಟು ಕಡಿತವನ್ನು ಮಾಡಿದೆ. ಈ ಮೂಲಕ ವಾಹನ ಮತ್ತು ಗೃಹ ಸಾಲಗಳು ಇನ್ನಷ್ಟು ಅಗ್ಗವಾಗಲಿದೆ.
ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ವೇಗವನ್ನು ನೀಡುವ ಸಲುವಾಗಿ ರೆಪೋ ದರದಲ್ಲಿ ಕಡಿತವನ್ನು ಮಾಡಲಾಗಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಪ್ರಸ್ತುತ ರೆಪೋ ದರ ಶೇ. 6 ಕ್ಕೆ ಇಳಿದಿದೆ. ರೆಪೋ ದರ ಕಡಿತದಿಂದಾಗಿ ವಸತಿ, ವಾಹನ, ಕಾರ್ಪೋರೇಟ್ಗಳಿಗೆ ಬ್ಯಾಂಕುಗಳು ನೀಡುವ ಸಾಲಗಳ ಬಡ್ಡಿದರಗಳು ಕಡಿತವಾಗಲಿದೆ.
ಕಳೆದ ಫೆಬ್ರವರಿಯಲ್ಲೂ ಆರ್ಬಿಐ ರೆಪೋ ದರವನ್ನು ಶೇ. 0.25 ರಷ್ಟು ಕಡಿತ ಮಾಡಿತ್ತು. ಇದರಿಂದ ರೆಪೋ ದರ ಶೇ. 6.50 ರಿಂದ ಶೇ. 6.25 ಕ್ಕೆ ಇಳಿಕೆಯಾಗಿತ್ತು. ಇದೀಗ ಮತ್ತೆ ರೆಪೋ ದರ ಕಡಿತಗೊಂಡ ಪರಿಣಾಮ ಶೇ. 6 ಕ್ಕೆ ಇಳಿಕೆಯಾಗಿದೆ.
ರೆಪೋ ದರ ಕಡಿತದ ಲಾಭವನ್ನು ಬ್ಯಾಂಕುಗಳು ಜನರಿಗೆ ವರ್ಗಾವಣೆ ಮಾಡುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.