ಕೋಟ: ಯೋಗ ಗುರು ರಾಮ್ದೇವ್ ಬಾಬಾ, ರಾಜಸ್ಥಾನ ಸಿಎಂ ವಸುಂಧರಾ ರಾಜೆ ಮತ್ತು 1.5 ಲಕ್ಷಕ್ಕೂ ಅಧಿಕ ಯೋಗಾಸಕ್ತರು ೪ನೇ ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ರಾಜಸ್ಥಾನದ ಶಿಕ್ಷಣ ನಗರ ಎಂದೇ ಕರೆಯಲ್ಪಡುವ ಕೋಟದಲ್ಲಿ ಇಂದು ಲಕ್ಷಾಂತರ ಜನರು ಒಂದೇ ಕಡೆ ಸೇರಿ ಒಂದೇ ಸಮಯದಲ್ಲಿ ವಿವಿಧ ಆಸನಗಳನ್ನು ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದರು.
ಲಂಡನ್ನಿಂದ ಆಗಮಿಸಿದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಟೀಮ್ ಈ ಮೆಗಾ ಯೋಗ ಸಮಾವೇಶವನ್ನು ವೀಕ್ಷಿಸಿ ಸ್ಥಳದಲ್ಲೇ ವಿಶ್ವದಾಖಲೆಯ ಸರ್ಟಿಫೀಕೇಟ್ನ್ನು ನೀಡಿದೆ.
ಯೋಗ ನಡೆಯುವ ಸ್ಥಳದಲ್ಲಿ 8 ಪ್ರವೇಶ ದ್ವಾರಗಳನ್ನು ಹಾಕಲಾಗಿತ್ತು, ಆಗಮಿಸುವವರ ಸಂಖ್ಯೆಯನ್ನು ಲೆಕ್ಕ ಹಾಕಲು ಪ್ರತಿಯೊಬ್ಬರಿಗೂ ಬಾರ್ ಕೋಡ್ಗಳನ್ನು ನೀಡಲಾಗಿತ್ತು. ಬಾರ್ಕೋಡ್ ಮೂಲಕ ಅಧಿಕೃತವಾಗಿ ಮೈದಾನದೊಳಗೆ 1,50,000 ಜನರು ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.