ಪೀಟರ್ಮರ್ಟಿಜ್ಬರ್ಗ್: ಇತಿಹಾಸ ಮತ್ತೆ ಮರುಕಳಿಸುತ್ತಿದೆ. ಆದರೆ ನೈಜವಾಗಿಲ್ಲ, ಡಾಕ್ಯುಮೆಂಟರಿಯ ರೂಪದಲ್ಲಿ. ದಕ್ಷಿಣಾ ಆಫ್ರಿಕಾದಲ್ಲಿನ ಅಸಮಾನತೆಯ ವಿರುದ್ಧದ ಹೋರಾಟದ ಇತಿಹಾಸ ಮತ್ತೆ ಡಾಕ್ಯುಮೆಂಟರಿ ರೂಪದಲ್ಲಿ ಮರು ಸೃಷ್ಟಿಗೊಳ್ಳುತ್ತಿದೆ.
ಮಹಾತ್ಮ ಗಾಂಧೀಜಿಯವರ ಸತ್ಯಾಗ್ರಹಕ್ಕೆ ಕಾರಣವಾದ ಘಟನೆ ಸಂಭವಿಸಿ 125 ವರ್ಷ ಸಂದ ಹಿನ್ನಲೆಯಲ್ಲಿ ಅದರ ಸ್ಮರಣಾರ್ಥ ಮೂರು ದಿನಗಳ ಸರಣಿ ಕಾರ್ಯಕ್ರಮ ಬುಧವಾರದಿಂದ ಜರುಗುತ್ತಿದ್ದು, ‘ಮೇಕಿಂಗ್ ಆಫ್ ಅ ಮಹಾತ್ಮ’ ಸ್ಕ್ರೀನಿಂಗ್ ಮೂಲಕ ಇದು ಆರಂಭಗೊಂಡಿದೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
1893ರ ಜೂನ್ ೭ರಂದು ಯುವ ವಕೀಲರಾಗಿದ್ದ ಮೋಹನ್ ದಾಸ್ ಕರಮಚಂದ್ ಗಾಂಧಿಯವರನ್ನು ದಕ್ಷಿಣ ಆಫ್ರಿಕಾದ ಪೀಟರ್ಮರ್ಟಿಜ್ಬರ್ಗ್ನಲ್ಲಿ ಕಪ್ಪು ವರ್ಣೀಯನೆಂದು ರೈಲು ಬೋಗಿಯಿಂದ ಹೊರಕ್ಕೆ ದೂಡಲಾಗಿತ್ತು. ಇದೇ ಅವರನ್ನು ಅಸಾಮಾನತೆಯ ವಿರುದ್ಧ ಹೋರಾಡುವಂತೆ ಪ್ರೇರೇಪಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.