Date : Tuesday, 11-08-2015
ಮೂಡಬಿದರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂಟಪ, ಪುತ್ತಿಗೆ ಇಲ್ಲಿ ಆ.15ರಂದು ಬೆಳಿಗ್ಗೆ 9.30 ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಪದ್ಮವಿಭೂಷಣ ರಾಜರ್ಷಿ...
Date : Tuesday, 11-08-2015
ಮಂಗಳೂರು : ‘ಚಾಲಿಪೋಲಿಲು’ ಉತ್ತಮ ಸಂದೇಶ ಸಾರುವ ಚಿತ್ರವಾಗಿದ್ದು ಮನೋರಂಜನೆಯ ಜೊತೆಗೆ ಸಾಕಷ್ಟು ಕುತೂಹಲ ಮೂಡಿಸುತ್ತದೆ. ಉತ್ತಮ ಕಥಾ ಹಂದರವನ್ನೊಳಗೊಂಡ ಈ ಚಿತ್ರ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ...
Date : Tuesday, 11-08-2015
ಉಡುಪಿ : ಉಡುಪಿಯ ಸಮೀಪದ ವಂಡ್ಸೆ ಎಂಬಲ್ಲಿ ತನ್ನ ಮಾಲಕ ಸಂಬಳ ನೀಡುತ್ತಿಲ್ಲ ಎಂದು ಪ್ರತಿಭಟಿಸಿ ಯುವಕನೊಬ್ಬ ಮೊಬೈಲ್ ಟವರ್ ಏರಿದ ಫಟನೆ ನಡೆದಿದೆ. ರಿಂಗ್ ಬಾವಿ ಕೆಲಸ ಮಾಡುತ್ತಿದ್ದು ಕೇರಳದ ಕೊಲ್ಲಂ ಮೂಲದ ಬಿಜು (28) ಎಂಬಾತ ,ತನ್ನಮಾಲಕ ತನಗೆ ಸಂಬಳ ನೀಡಿಲ್ಲವೆಂದು...
Date : Tuesday, 11-08-2015
ಕಾಸರಗೋಡು : ರಾಮ ನಡೆದಂತೆ ನಡೆಯಬಹುದು, ಕೃಷ್ಣ ಹೇಳಿದಂತೆ ನಡೆದುಕೊಳ್ಳಬಹುದು, ರಾಮನ ಜೀವನ ಎಲ್ಲರಿಗೂ ಆದರ್ಶ, ಇದನ್ನು ಪಾಲಿಸುವುದರಿಂದ ನಮಗೆ ನೆಮ್ಮದಿ ಲಭಿಸುತ್ತದೆ ಎಂದು ಪೆರುಮುಂಡ ಶಂಕರನಾರಾಯಣ ಭಟ್ ಅಭಿಪ್ರಾಯಪಟ್ಟರು. ಅವರು ಗ್ರಾಮೋತ್ಥಾನ ಸೇವಾ ಸಮಿತಿ-ಕುಂಬಳೆ ಸೀಮೆ ವತಿಯಿಂದ ಬದಿಯಡ್ಕ ಸಂಸ್ಕೃತಿ...
Date : Tuesday, 11-08-2015
ಬಂಟ್ವಾಳ : ಬಂಟರ ಸಂಘ ಜಪ್ಪಿನಮೊಗರು (ರಿ) ಇದರ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ಶ್ರೀ ಜೆ ಸೀತಾರಾಮ ಶೆಟ್ಟಿ ಯವರ ಅಧ್ಯಕ್ಷತೆ ಯಲ್ಲಿ ಜರಗಿತು ಪ್ರಾರಂಭದಲ್ಲಿ ಇತ್ತೀಚೆಗೆ ನಿಧನ ರಾದ ಜಾಗತಿಕ ಬಂಟ ಪ್ರತಿಷ್ಠಾನ ದ ಮಾಜಿ ಅಧ್ಯಕ್ಷರಾದ ಕೆ ಬಿ...
Date : Tuesday, 11-08-2015
ಬೆಳ್ತಂಗಡಿ : ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿರುವ ಪ್ರಾಕೃತಿಕ ಸಂಪತ್ತುಗಳನ್ನು ಉಪಯೋಗಿಸುವುದರ ಸಂಪೂರ್ಣ ಅಧಿಕಾರವನ್ನು ಆಯಾ ಗ್ರಾಮ ಪಂಚಾಯತುಗಳಿಗೆ ನೀಡುವಂತಾಗಬೇಕು ಎಂದು ಗ್ರಾಮಾಭಿವೃದ್ದಿ ಹೋರಾಟ ಸಮಿತಿಯ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರಕಾಶ ಕಾಶಿಬೆಟ್ಟು ಸರಕಾರವನ್ನು ಒತ್ತಾಯಿಸಿದ್ದಾರೆ. ಬೆಳ್ತಂಗಡಿಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ವಿಚಾರ...
Date : Tuesday, 11-08-2015
ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್‌ನ 2015-18ನೇ ಸಾಲಿನ ನೂತನ ಅಧ್ಯಕ್ಷರಾಗಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಆವೃತ್ತಿಯ ಮುಖ್ಯಸ್ಥ ಡಾ. ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಚುನಾಯಿತರಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಅನ್ನು ಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಗುರುವಪ್ಪ ಎನ್.ಟಿ.ಬಾಳೇಪುಣಿ, ಕಾರ್ಯದರ್ಶಿಯಾಗಿ ಆಗ್ನೆಲ್ ರೋಡ್ರಿಗಸ್,...
Date : Tuesday, 11-08-2015
ನವದೆಹಲಿ: ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ವಿತ್ತಸಚಿವ ಅರುಣ್ ಜೇಟ್ಲಿ, ‘ಗಾಂಧಿಗಳನ್ನು ಹೊರತುಪಡಿಸಿ ಬೇರೆ ಯಾರೂ ಈ ದೇಶವನ್ನು ಆಳುವುದನ್ನು ಕಾಂಗ್ರೆಸ್ ಬಯಸುವುದಿಲ್ಲ’ ಎಂದಿದ್ದಾರೆ. 2014ರ ಚುನಾವಣಾ ಸೋಲನ್ನು ಕಾಂಗ್ರೆಸ್ ಕೆಟ್ಟದಾಗಿ ತೆಗೆದುಕೊಂಡಿದೆ. ಗಾಂಧಿ ಕುಟುಂಬವನ್ನು ಹೊರತುಪಡಿಸಿ ಹೊರಗಿನವರು...
Date : Tuesday, 11-08-2015
ನವದೆಹಲಿ: ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ 2016ಗೆ ಕನ್ನಡಿಗ, ಶೂಟರ್ ಪ್ರಕಾಶ್ ನಂಜಪ್ಪ ಸ್ಥಾನ ಪಡೆದಿದ್ದಾರೆ. ಅಜರ್ ಬೈಜಾನ್ ಗಬಾಲದಲ್ಲಿ ನಡೆದ ಐಎಸ್ ಎಸ್ ಎಫ್ ಶೂಟಿಂಗ್ ವಿಶ್ವಕಪ್‌ನ 50 ಮೀ. ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ 8ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ...
Date : Tuesday, 11-08-2015
ಬೆಂಗಳೂರು: ಅರ್ಧ ಮನುಷ್ಯನನ್ನು ನುಂಗಿದ ಅನಕೊಂಡವೊಂದು ಬೆಂಗಳೂರಿನ ರಸ್ತೆಯಲ್ಲಿ ಕಾಣಿಸಿಕೊಂಡಿದೆ. ಅದನ್ನು ಕಂಡು ಒಮ್ಮೆ ಜನರೆಲ್ಲಾ ಭಯಭೀತರಾದರೂ ಬಳಿಕ ನಕ್ಕು ಮುಂದಕ್ಕೆ ಸಾಗಿದ್ದಾರೆ. ಹೊಂಡ-ಗುಂಡಿ ಬಿದ್ದ ರಸ್ತೆಯ ಬಗ್ಗೆ ಬಿಬಿಎಂಪಿ ಗಮನವನ್ನು ಸೆಳೆಯುವ ಸಲುವಾಗಿ ಅನಕೊಂಡ ಆಕೃತಿಯನ್ನು ರಸ್ತೆಯ ಗುಂಡಿಯಲ್ಲಿ ಇಟ್ಟು,...