ನವದೆಹಲಿ: ಖಗೋಳ ಶಾಸ್ತ್ರಜ್ಞರು ಗುರು ಗ್ರಹದಂತೆ ಗೋಚರಿಸುವ ಮತ್ತೊಂದು ಗ್ರಹವನ್ನು ಕಂಡು ಹಿಡಿದಿದ್ದಾರೆ.
51 Eridani b ಎಂದು ಕರೆಯಲಾಗಿರುವ ಈ ಗ್ರಹವನ್ನು ಜೆಮಿನಿ ಪ್ಲಾನೆಟ್ ಇಮೇಜರ್ ಎಂಬ ಹೊಸ ಉಪಕರಣದ ಸಹಾಯದಿಂದ ಕಂಡು ಹಿಡಿಯಲಾಗಿದೆ.
ಗುರು ಗ್ರಹವು ಹಲವು ಬಿಲಿಯನ್ ವರ್ಷಗಳ ಹಿಂದೆ ಕಂಡುಹಿಡಿಯಲಾದೆ. ಆದರೆ ಈ ಗ್ರಹ, ಕೇವಲ 20 ಮಿಲಿಯನ್ ವರ್ಷ ಪುರಾತನವಾಗಿದೆ. ಮೀಥೇನ್ನಿಂದ ಕೂಡಿರುವ ಈ ಗ್ರಹ ಗುರು ಗ್ರಹಕ್ಕಿಂತಲೂ ದುಪ್ಪಟ್ಟು ತೂಕ ಹೊಂದಿದೆ ಮತ್ತು ಸೌರ ಮಂಡಲದ ಅತ್ಯಂತ ದೊಡ್ಡ ಗ್ರಹವೆಂದು ಹೇಳಲಾಗಿದೆ.
ಜೆಮಿನಿ ಪ್ಲಾನೆಟ್ ಇಮೇಜರ್ ಉಪಕರಣವನ್ನು ಇಂತಹ ಹೊಸ ಗ್ರಹಗಳ ಅನ್ವೇಶಣೆಗಾಗಿಯೇ ರೂಪಿಸಲಾಗಿದ್ದು, 51 Eridani b ಎಂಬ ಗ್ರಹವು ಈ ಉಪಕರಣದಿಂದ ಕಂಡು ಹಿಡಿಯಲಾದ ಮೊದಲ ಗ್ರಹವಾಗಿದೆ ಎಂದು ಕೆಲಿಫೋರ್ನಿಯಾ ವಿಶ್ವ ವಿದ್ಯಾಲಯದ ಬರ್ಕ್ಲೆ ಖಗೋಳಶಾಸ್ತ್ರ ಮತ್ತು ಜಿಪಿಐ ವಿಜ್ಞಾನ ಪ್ರೋ. ಜೇಮ್ಸ್ ಗ್ರಹಂ ಹೇಳಿದ್ದಾರೆ.
ಈ ಉಪಕರಣವು ಒಂದು ಸಣ್ಣ ಕಾರಿನ ಮಾದರಿ ಇದ್ದು, ಚಿಲಿ ರಾಷ್ಟ್ರದಲ್ಲಿ ಡಿ.2014ರಿಂದ ಕಾರ್ಯನಿರತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.