ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಾಯುಸೇನೆ ಮತ್ತು ಆರ್ಮಿಯ ಸಹಭಾಗಿತ್ವದೊಂದಿಗೆ ಅಮರ ಚಿತ್ರ ಕಥಾವೂ ತಾಯ್ನಾಡಿಗಾಗಿ ಯುದ್ಧಭೂಮಿಯಲ್ಲಿ ಹೋರಾಡಿ ವೀರಮರಣವನ್ನಪ್ಪಿದ ಯೋಧರ ಯಶೋಗಾಥೆಯನ್ನೊಳಗೊಂಡ ‘ಪರಮ್ ವೀರ್ ಚಕ್ರ’ ಕಾಮಿಕ್ ಪುಸ್ತಕಗಳನ್ನು ಹೊರ ತರುತ್ತಿದೆ.
ಒಟ್ಟು 248 ಪುಟಗಳ ಪುಸ್ತಕ ಇದಾಗಿದ್ದು, ಅತ್ಯುನ್ನತ ಸೇನಾ ಪುರಸ್ಕಾರ ‘ಪರಮ್ ವೀರ್ ಚಕ್ರ’ವನ್ನು ಪಡೆದ 21 ಯೋಧರ ಸಾಹಸಗಾಥೆಗಳನ್ನು ಈ ಪುಸ್ತಕ ಒಳಗೊಂಡಿದೆ.
ದೇಶದ ವಯಸ್ಕರು, ಕಿರಿಯರು ಎಲ್ಲರೂ ಭಾರತದ ಸಮಕಾಲೀನ ವೀರ ಪುತ್ರರ ಬಗ್ಗೆ ತಿಳಿದುಕೊಳ್ಳಲಿ ಎಂಬ ಕಾರಣಕ್ಕೆ ಈ ಪುಸ್ತಕವನ್ನು ಹೊರತಂದಿರುವುದಾಗಿ ಅಮರ ಚಿತ್ರ ಕಥಾ ಸಂಪಾದಕಿ ರೀನಾ ಪುರಿ ತಿಳಿಸಿದ್ದಾರೆ.
6 ಸ್ಕ್ರಿಪ್ಟ್ ರೈಟರ್ಗಳು, 11 ಕಲಾವಿದರು, 5 ಕಲರಿಸ್ಟ್ಗಳು ಮತ್ತು ತಜ್ಞ ಸಂಪಾದಕರು 2 ವರ್ಷಗಳಿಂದ ಸತತವಾಗಿ ಪರಿಶ್ರಮಪಟ್ಟು ಈ ಪುಸ್ತಕವನ್ನು ಹೊರ ತಂದಿದ್ದಾರೆ. ಸೇನೆಯಿಂದ ಇದಕ್ಕೆ ಬೇಕಾದ ಎಲ್ಲಾ ಸಂಶೋಧನಾ ವಸ್ತುಗಳನ್ನು ಸಂಗ್ರಹಿಸಲಾಗಿದೆ. ದೇಶದ ವೀರರಿಗೆ ಗೌರವ ಸಲ್ಲಿಸುವ ಸಲುವಾಗಿ ಇದನ್ನು ಹೊರತರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.