News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

QR ಕೋಡ್ ಪಾವತಿ ವ್ಯವಸ್ಥೆ: 600 ಕೋಟಿ ರೂ. ಹೂಡಿಕೆ ಮಾಡಲಿರುವ PayTm

ನವದೆಹಲಿ: ಒನ್97 ಕಮ್ಯೂನಿಕೇಶನ್ಸ್ ಪ್ರೈ.ಲಿ. ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆನ್‌ಲೈನ್ ಪಾವತಿ ಸಂಸ್ಥೆ ಪೇಟಿಎಂ ತನ್ನ ಕ್ಯೂಆರ್ ಕೋಡ್ (QR Code) ಆಧಾರಿತ ಪಾವತಿ ನೆಟ್‌ವರ್ಕ್ ವಿಸ್ತರಿಸಲು ಮುಂದಿನ 19 ತಿಂಗಳಲ್ಲಿ 600 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಕಂಪೆನಿ ತಿಳಿಸಿದೆ. ನೋಯ್ಡಾ...

Read More

ಎಚ್1ಬಿ ವೀಸಾಕ್ಕೆ ಯುಎಸ್ ತಡೆಯೊಡ್ಡಿದರೆ ಭಾರತ-ಮೆಕ್ಸಿಕೊ ಸಂಬಂಧ ವೃದ್ಧಿ: ಮೆಲ್ಬಾ ಪ್ರಿಯಾ

ನವದೆಹಲಿ: ಎಚ್ಬಿ1 ವೀಸಾಕ್ಕೆ ಅಮೆರಿಕಾ ತಡೆಯೊಡ್ಡಿದ್ದೇ ಆದಲ್ಲಿ, ನಮ್ಮ ಸಂತಸ ಇಮ್ಮಡಿಯಾಗುತ್ತದೆ. ಪರಿಣಾಮ ಭಾರತ ಹಾಗೂ ಮೆಕ್ಸಿಕೊ ಸಂಬಂಧ ವೃದ್ಧಿಗೆ ಆದ್ಯತೆ ಸಿಗಲಿದೆ ಎಂದು ಮೆಕ್ಸಿಕೊದ ರಾಯಭಾರಿ ಮೆಲ್ಬಾ ಪ್ರಿಯಾ ತಿಳಿಸಿದ್ದಾರೆ. ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ...

Read More

2 ಲಕ್ಷಕ್ಕಿಂತ ಅಧಿಕ ಮೌಲ್ಯದ ಆಭರಣ ಖರೀದಿಗೆ ಟಿಸಿಎಸ್ ಅನ್ವಯ

ನವದೆಹಲಿ: ನಗದು ಹಣ ಪಾವತಿಸುವ ಮೂಲಕ 2 ಲಕ್ಷಕ್ಕಿಂತ ಅಧಿಕ ಮೌಲ್ಯದ ಆಭರಣ ಖರೀದಿಗೆ ಏಪ್ರಿಲ್. 1 ರಿಂದ ಶೇ.1 ರಷ್ಟು ಟಿಎಸಿಎಸ್ (tax collected at source) ಅನ್ವಯಿಸಲಿದೆ. ಇದುವರೆಗೂ ಇದರ ಮಿತಿ 5 ಲಕ್ಷ ಖರೀದಿವರೆಗೂ ಇತ್ತು. ಹಣಕಾಸು ಮಸೂದೆ ಪಾಸಾದ ಕ್ಷಣದಿಂದಲೇ...

Read More

ಅಂಚೆ ಕಚೇರಿಯಲ್ಲೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಅವಕಾಶ

ನವದೆಹಲಿ: ಆಯ್ದ ರಾಜ್ಯಗಳ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು ಮುಂಬರುವ ಮಾರ್ಚ್‌ನಿಂದ ಅವಕಾಶ ನೀಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ರಾಜಸ್ಥಾನ, ಪ.ಬಂಗಾಲ, ತಮಿಳುನಾಡು, ಕರ್ನಾಟಕ, ಜಾರ್ಖಂಡ್ ಹಾಗೂ ಇನ್ನು ಕೆಲವು ರಾಜ್ಯಗಳಲ್ಲಿ ಈ ಯೋಜನೆಯ ಮೊದಲ ಹಂತ ಆರಂಭಿಸಲಾಗುವುದು...

Read More

ಕ್ಯಾನ್ಸರ್‌ ಕುರಿತು ಕಾಮಿಕ್ ಬುಕ್; ಬಿಗ್-ಬಿ, ಟಾಟಾರಿಂದ ಸಹಾಯಧನ

ನವದೆಹಲಿ: ಜಗತ್ತಿನಾದ್ಯಂತ ಏರುತ್ತಿರುವ ಸಾವಿನ ಪ್ರಮಾಣಕ್ಕೆ ಕಾರಣವಾಗಿರುವ ಕ್ಯಾನ್ಸರ್, ಜಗತ್ತನ್ನೇ ತನ್ನ ಮುಷ್ಠಿಯಲ್ಲಿ ಹಿಡಿದಂತಿದೆ. ಇಂಥದರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಿ ಬದುಕುಳಿದ ನೀಲಮ್ ಕುಮಾರ್, ಇದರಿಂದ ಗೆದ್ದು ಬಂದ ಇತರರ ಪ್ರೇರಕ ಕಥೆಗಳನ್ನು ಹೊಂದಿದ ಕಾಮಿಕ್ ಪುಸ್ತಕ ಬರೆಯಲು ಮುಂದಾಗಿದ್ದಾರೆ. ವಿಶೇಷವೆಂದರೆ...

Read More

ವಿನೂತನ ರೀತಿಯಲ್ಲಿ ಪರಿಸರವನ್ನು ಸಂರಕ್ಷಿಸುತ್ತಿರುವ ’ಸೇವ್ ಗ್ರೀನ್’

ಬೆಂಗಳೂರು: ನೆಲ, ಜಲ, ವಾಯು ಹೀಗೆ ಪರಿಸರ ಸಂರಕ್ಷಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಅನೇಕ. ಸಂಘ ಸಂಸ್ಥೆಗಳು, ವ್ಯಕ್ತಿಗಳು, ವಿದ್ಯಾರ್ಥಿಗಳು ಒಂದಿಲ್ಲೊಂದು ರೀತಿಯಲ್ಲಿ ಪರಿಸರ ಪ್ರೇಮ ಮೆರೆಯುವುದನ್ನು ನಾವು ಕಂಡಿದ್ದೇವೆ. ಅದರ ಭಾಗವಾಗಿ ಬೆಂಗಳೂರಿನ ಒಂದು ಎನ್‌ಜಿಒ ಮರಕ್ಕೆ ಅಂಟಿಸಿರುವ...

Read More

ಶಾಲೆಗಳಲ್ಲಿ ಕ್ರೀಡೆ ಕಡ್ಡಾಯಗೊಳಿಸಲು ಕೇಂದ್ರ ಚಿಂತನೆ

ನವದೆಹಲಿ: ಮುಂದಿನ ವರ್ಷದಿಂದ ಆರಂಭಗೊಂಡು ಪಠ್ಯಗಳ ಜೊತೆ ಕ್ರೀಡೆಯನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಕ್ರೀಡಾ ಸಚಿವಾಲಯದ ಪ್ರಸ್ತಾವನೆ ಬಹುತೇಕ ಜಾರಿಗೆ ಬರುವ ಸಾಧ್ಯತೆ ಇದೆ. ಸಚಿವಾಲಯದ ಯೋಜನೆಯಂತೆ ಪಠ್ಯಗಳಂತೆ ಕ್ರೀಡೆಯನ್ನು ಒಂದು ಪ್ರತ್ಯೇಕ ವಿಷಯ ಎಂದು...

Read More

ಬಿಹಾರ ಶಾಲಾ ಶಿಕ್ಷಣ ಮಂಡಳಿಯಿಂದ ಮಧ್ಯಂತರ ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನ

ಪಾಟ್ನಾ: ಬಿಹಾರ ಶಾಲಾ ಶಕ್ಷಣ ಮಂಡಳಿ (ಬಿಎಸ್‌ಇಬಿ) ಪ್ರಸ್ತುತ ನಡೆಯುತ್ತಿರುವ 12ನೇ ತರಗತಿ ಮಧ್ಯಂತರ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅಸಮಂಜಸ ಪ್ರಕ್ರಿಯೆ ತಡೆಗಟ್ಟಲು ಡಿಜಿಟಲ್ ಮೌಲ್ಯಮಾಪನ ನಡೆಸಲು ನಿರ್ಧರಿಸಿದೆ. ಶಿಕ್ಷಣ ಮಂಡಳಿ ಮಧ್ಯಂತರ ಪರೀಕ್ಷೆ 2017ರ ಉತ್ತರ ಪತ್ರಿಕೆಗಳ ಡಿಜಿಟಲ್...

Read More

2ನೇ ವಿಶ್ವಯುದ್ಧದಲ್ಲಿ ಹಿಟ್ಲರ್ ಬಳಸಿದ ಫೋನ್ 243,000 ಡಾಲರ್‌ಗೆ ಹರಾಜು

ವಾಷಿಂಗ್ಟನ್: ಎರಡನೇ ವಿಶ್ವ ಯುದ್ಧದ ಸಂದರ್ಭ ಜರ್ಮನಿಯ ನಾಜಿ ಪಕ್ಷದ ಅಡೋಲ್ಫ್ ಹಿಟ್ಲರ್ ಬಳಸಿದ ವೈಯಕ್ತಿಕ ಫೋನ್ 243,000 ಯುಎಸ್ ಡಾಲರ್‌ಗೆ ಹರಾಜಿನಲ್ಲಿ ಮಾರಾಟವಾಗಿದೆ. ವಿಶ್ವ ಯುದ್ಧದ ಬಳಿಕ ನಾಜಿ ಆಳ್ವಿಕೆಯ ಪತನದ ನಂತರ 1945ರಿಂದ ಒಂದು ಬ್ರೀಫ್‌ಕೇಸ್‌ನಲ್ಲಿ ಇರಿಸಲಾಗಿದ್ದ ಈ...

Read More

ಬುಲೆಟ್ ಟ್ರೈನ್ : ಸಮುದ್ರದೊಳಗಿನ ಮಾರ್ಗ ಪರೀಕ್ಷೆ

ದೆಹಲಿ: ಭಾರತದ ಮೊದಲ ಬುಲೆಟ್ ಟ್ರೈನ್  ಅಂದಾಜು 21 ಕಿ.ಮೀ ಸಮುದ್ರದೊಳಗೆ ಓಡಲಿದೆ. ಸಮುದ್ರದೊಳಗಿನ ಭೂಮಿಯ ಪರೀಕ್ಷಾರ್ಥವಾಗಿ ಇದೀಗ 7 ಕಿ.ಮೀ ಸುರಂಗ ಕೊರೆಯುವ ಮೂಲಕ ಪರೀಕ್ಷಿಸಲಾಗುತ್ತಿದೆ. 508 ಕಿ.ಮೀ ದೂರದ ಮುಂಬೈ -ಅಹಮದಾಬಾದ್ ಮಧ್ಯೆ ಬುಲೆಟ್ ಟ್ರೈನ್ ಓಡಲಿದ್ದು, ಅದಕ್ಕಾಗಿ ಸಮುದ್ರದ ತಳದಲ್ಲಿ 21 ಕಿ.ಮೀ ಉದ್ದದ...

Read More

Recent News

Back To Top