
ಭೋಪಾಲ್: ಮಧ್ಯಪ್ರದೇಶದ ಧಾರ್ನಲ್ಲಿರುವ ಭೋಜ್ಶಾಲಾ ಸಂಕೀರ್ಣದಲ್ಲಿರುವ ಕಮಲ್ ಮೌಲಾ ಮಸೀದಿಯನ್ನು ಪ್ರಾಚೀನ ದೇವಾಲಯದ ಅವಶೇಷಗಳಿಂದ ನಿರ್ಮಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆ ನ್ಯಾಯಾಲಯಕ್ಕೆ ವರದಿ ನೀಡಿದೆ.
ಕಮಾಲ್ ಮೌಲಾ ಮಸೀದಿಯನ್ನು ಹಿಂದೂ ಸಮುದಾಯ ವಾಗ್ದೇವಿ (ದೇವಿ ಸರಸ್ವತಿ) ದೇವಾಲಯವೆಂದು ಪರಿಗಣಿಸುತ್ತದೆ. ಆದರೆ ಮುಸ್ಲಿಮರು ಇದನ್ನು 11ನೇ ಶತಮಾನದ ಕಮಾಲ್ ಮೌಲಾ ಮಸೀದಿಯೆಂದು ಹೇಳಿಕೊಳ್ಳುತ್ತಾರೆ.
ಎಎಸ್ಐ ವರದಿಯ ಪ್ರಕಾರ, ಇಲ್ಲಿ ಪರಮಾರ ವಂಶದ ಕಾಲದ ಸುಮಾರು 12ನೇ ಶತಮಾನ ಮಂದಿರದ ಅವಶೇಷಗಳು ಕಂಡುಬಂದಿವೆ. ಮಸೀದಿಯ ನಿರ್ಮಾಣದಲ್ಲಿ ಹಿಂದಿನ ಮಂದಿರಗಳ ಭಾಗಗಳನ್ನು ಮರುಬಳಕೆ ಮಾಡಲಾಗಿದೆ. ವರದಿಯಲ್ಲಿ 94 ಮೂರ್ತಿಗಳು ಮತ್ತು ಮೂರ್ತಿ ತುಂಡುಗಳು ಪತ್ತೆಯಾಗಿವೆ ಎಂದು ತಿಳಿಸಲಾಗಿದ್ದು, ಅವುಗಳಲ್ಲಿ ಗಣೇಶ, ಬ್ರಹ್ಮ, ನರಸಿಂಹ, ಭೈರವ ಮುಂತಾದ ದೇವತೆಗಳ ಚಿತ್ರಗಳು, ಪ್ರಾಣಿಗಳು ಹಾಗೂ ಪೌರಾಣಿಕ ಆಕೃತಿಗಳು ಸೇರಿವೆ. ಅನೇಕ ಮೂರ್ತಿಗಳನ್ನು ಕೆತ್ತಿ ನಾಶಗೊಳಿಸಲಾಗಿದೆ ಅಥವಾ ಬದಲಾಯಿಸಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಭೋಜಶಾಲಾ ಸಂಕೀರ್ಣದ ನಿರ್ಮಾಣ 12ನೇ ಶತಮಾನದ್ದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಕಮಾಲ್ ಮೌಲಾ 1265 ವರ್ಷದ ಸುಮಾರಿಗೆ ಮರುನಿರ್ಮಿಸಿದೆ ಎಂದು ಸೂಚಿಸಲಾಗಿದೆ. ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠಕ್ಕೆ ಎಎಸ್ಐ ಈ ವರದಿಯನ್ನು ಸಲ್ಲಿಸಿದ್ದು, ಇದು 10 ಸಂಪುಟಗಳಲ್ಲಿ 2,000ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿದೆ. ವಿಚಾರಣೆಯಲ್ಲಿ ಕೋರ್ಟ್ ಎರಡು ವಾರಗಳೊಳಗೆ ಎಲ್ಲಾ ಪಕ್ಷಗಳಿಂದ ವರದಿಗೆ ಸಂಬಂಧಿಸಿದ ಆಕ್ಷೇಪಗಳು, ಅಭಿಪ್ರಾಯಗಳು, ಸಲಹೆಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ. ಮುಂದಿನ ವಿಚಾರಣೆ ಮಾ.16ಕ್ಕೆ ನಿಗದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


