ನವದೆಹಲಿ: ಆದಾಯ ದಾಖಲೆಗಳ ತಪ್ಪು ಮಾಹಿತಿ ಸಲ್ಲಿಕೆಯನ್ನು ಪರಿಶೀಲಿಸಲು ತೆರಿಗೆ ಪ್ರಾಧಿಕಾರ ವೃತ್ತಿಪರ ಚಾರ್ಟರ್ಡ್ ಅಕೌಂಟೆಂಟ್ಗಳ ಮೇಲೆ 10,000 ರೂ. ದಂಡ ವಿಧಿಸಲಿದೆ.
ಸೆಕ್ಷನ್ 271ಜೆ ಅಡಿಯಲ್ಲಿ ಆಡಿಟ್, ಮೌಲ್ಯಮಾಪನ ವರದಿ ದಾಖಲಿಸುವ ಅಡಿಟರ್ಗಳು, ಮೌಲ್ಯಮಾಪಕರು, ಚಾರ್ಟರ್ಡ್ ಅಕೌಂಟೆಂಟ್ಗಳು ಮತ್ತು ವ್ಯಾಪಾರಿ ಬ್ಯಾಂಕರ್ಗಳಿಗೆ ಜವಾಬ್ದಾರಿ ವಹಿಸಿದ್ದೇವೆ. ಅವರು ಆದಾಯ ದಾಖಲೆಗಳ ತಪ್ಪು ಮಾಹಿತಿ ಸಲ್ಲಿಸಿದಲ್ಲಿ 10,000 ವರೆಗೆ ದಂಡ ವಿಧಿಸಲಾಗುವುದು ಎಂದು ಸಿಬಿಡಿಟಿ ಅಧ್ಯಕ್ಷ ಸುಶೀಲ್ ಚಂದ್ರ ಹೇಳಿದ್ದಾರೆ.
ನಮ್ಮ ಕಾರ್ಯವ್ಯಸ್ಥೆ ಚಾರ್ಟರ್ಡ್ ಅಕೌಂಟೆಂಟ್ಗಳ ಮೇಲೆ ನಂಬಿಕೆ ಹೊಂದಿದ್ದುದ್ದು, ಅವರು ಹೆಚ್ಚು ಜವಾಬ್ದಾರಿ ಹೊಂದಿದ್ದಾರೆ. ತಪ್ಪು ಮಾಹಿತಿ ದಾಖಲಿಸಿದಲ್ಲಿ ಕರ್ತವ್ಯಲೋಪ ನಡೆಸಿದವರ ಮೇಲೆ ದಂಡ ವಿಧಿಸುವ ನಿಬಂಧನೆಗಳೀವೆ. ಆದರೆ ಇದಕ್ಕೆ ದಂಡ ವಿಧಿಸುವ ಯಾವುದೇ ಶಿಕ್ಷೆ ಅಸ್ತಿತ್ವದಲ್ಲಿಲ್ಲ ಎಂದು ಬಜೆಟ್ನ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಇದಕ್ಕಾಗಿ ತಪ್ಪು ಮಾಹಿತಿ ದಾಖಲಿಸಿದ ಚಾರ್ಟರ್ಡ್ ಅಕೌಂಟೆಂಟ್ಗಳ ಮೇಲೆ ದಂಡ ವಿಧಿಸಲು ಸಕ್ಷನ್ 271ಜೆ ಕಾನೂನು ಜಾರಿಗೆ ತರಲು ಮನವಿ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.