ನವದೆಹಲಿ: ಆದಾಯ ತೆರಿಗೆ ಇಲಾಖೆ ಅನಾಣ್ಯೀಕರಣ ಬಳಿಕ ಕಪ್ಪು ಹಣ ವಿರುದ್ಧ ಕ್ರಮ ಕೈಗೊಂಡಿದ್ದು, ನ.9, 2016ರಿಂದ ಜ.10, 2017ರ ವರೆಗೆ ಹೆಚ್ಚಿನ ಮೌಲ್ಯದ ಹಳೆ ನೋಟುಗಳ ಶಂಕಾಸ್ಪದ ಠೇವಣಿಗಳ ಪರಿಶೀಲನೆ ವೇಳೆ 1100 ಶೋಧಕಾರ್ಯ, ಮುಟ್ಟುಗೋಲು ಮತ್ತು ಸಮೀಕ್ಷೆಗಳನ್ನು ನಡೆಸಿದೆ. ಅಲ್ಲದೇ 5100 ನೋಟಿಸ್ ಜಾರಿಗೊಳಿಸಿದೆ ಎಂದು ಹಣಕಾಸು ಸಚಿವಾಲಯದ ರಾಜ್ಯ ಸಚಿವ ಸಂತೋಶ್ ಕುಮಾರ್ ಗಂಗ್ವಾರ್ ಶಿಮ್ಲಾ ಸಂಸತ್ ಸದಸ್ಯ ವಿರೇಂದ್ರ ಕಶ್ಯಪ್ ಹಾಗೂ ಲೋಕಸಭೆಗೆ ತಿಳಿಸಿದ್ದಾರೆ.
ಪರಿಶೀಲನೆ ವೇಳೆ 610 ಕೋಟಿ ರೂ. ವೆಚ್ಚದ ಅಮೂಲ್ಯ ವಸ್ತುಗಳು, 513 ಕೋಟಿ ರೂ. ನಗದು ಹಾಗೂ ಬಂಗಾರ ಮತ್ತು ಬೆಳ್ಳಿ ರೂಪದಲ್ಲಿದ್ದ ಇತರ ವಸ್ತುಗಳನ್ನು ವಶಕ್ಕೆ ಪಡೆದಿದೆ. ಇದರಲ್ಲಿ 110 ಕೋಟಿ ರೂ. ಹೊಸ ನೋಟುಗಳೂ ಒಳಗೊಂಡಿವೆ. ತನಿಖೆ ವೇಳೆ ಬಹಿರಂಗಪಡಿಸದ 5400 ಕೋಟಿ ರೂ. ಆದಾಯ ಪತ್ತೆ ಹಚ್ಚಲಾಗಿದೆ ಗಂಗ್ವಾರ್ ಅವರು ಲಿಖಿತ ಪತ್ರದಲ್ಲಿ ತಿಳಿಸಿದ್ದಾರೆ.
ನ.8, 2016ರ ವರೆಗೆ ರೂ.500ರ 17,165 ಮಿಲಿಯನ್ ನೋಟುಗಳು ಹಾಗೂ ರೂ.1000ದ 6858 ಮಿಲಿಯನ್ ನೋಟುಗಳು ಚಲಾವಣದೆಯಲ್ಲಿತ್ತು. ಇದರಲ್ಲಿ ಡಿಸೆಂಬರ್ 10, 2016ರ ವೇಳೆಗೆ 12.44 ಲಕ್ಷ ಕೋಟಿ ರೂ. ಆರ್ಬಿಐಗೆ ಹಿಂದಿರುಗಿಸಲಾಗಿದೆ ಎಂದು ಗಂಗ್ವಾರ್ ತಿಳಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಹಳೆ ನೋಟುಗಳನ್ನು ಠೇವಣಿ ಮಾಡಿದ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.