Date : Tuesday, 31-01-2017
ಲಾಹೋರ್ : ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸೈಯೀದ್ನನ್ನು ಪಾಕಿಸ್ಥಾನದ ಲಾಹೋರ್ನಲ್ಲಿ ಗೃಹಬಂಧನದಲ್ಲಿಟ್ಟಿರುವುದಾಗಿ ಮೂಲಗಳು ತಿಳಿಸಿವೆ. 26/11 ಮುಂಬೈ ದಾಳಿಯ ಪ್ರಮುಖ ರೂವಾರಿಯಾಗಿದ್ದ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ...
Date : Monday, 30-01-2017
ಪಣಜಿ: ಗೋವಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇಂದು ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ಕ್ಯಾಸಿನೊಗಳನ್ನು ತಂದವರು ಕಾಂಗ್ರೆಸ್ಸಿಗರು. ಅವನ್ನು ಬಂದ್ ಮಾಡುವುದು...
Date : Monday, 30-01-2017
ನವದೆಹಲಿ : ಎಟಿಎಂಗಳಲ್ಲಿ ಈ ಹಿಂದೆ ವಿಧಿಸಲಾಗಿದ್ದ ವಿತ್ಡ್ರಾ ಮಿತಿಯನ್ನು ಆರ್‌ಬಿಐ ಹಿಂಪಡೆದಿದ್ದು. ನಾಳೆಯಿಂದ (ಫೆ. 1) ಎಟಿಎಂಗಳಲ್ಲಿ ದಿನಕ್ಕೆ ರೂ. 24,000 ವಿತ್ಡ್ರಾ ಮಾಡಬಹುದು. ನೋಟ್ ಬ್ಯಾನ್ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ ಮತ್ತು ಬ್ಯಾಂಕ್ಗಳಲ್ಲಿ ಹಣ ವಿತ್ಡ್ರಾ ಮಾಡಲು ಮಿತಿಯನ್ನು ಹೇರಿತ್ತು....
Date : Monday, 30-01-2017
ನವದೆಹಲಿ : ಬಿಸಿಸಿಐ ಹೊಸ ಆಡಳಿತ ಮಂಡಳಿ ರಚನೆಯಾಗಿದ್ದು, ಮಾಜಿ ಸಿಎಜಿ ವಿನೋದ್ ರಾಯ್ ಅವರನ್ನು ಬಿಸಿಸಿಐ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಸೋಮವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಹೊಸ ಆಡಳಿತ ಮಂಡಳಿ ರಚಿಸಿದೆ. ಇದರ ಮುಖ್ಯಸ್ಥರನ್ನಾಗಿ...
Date : Monday, 30-01-2017
ಠಾಣೆ: ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದ ಸಿದ್ಧಾಂತದ ವಿರುದ್ಧ ಹೋರಾಡುತ್ತಿರುವುದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಸೋಮವಾರ ಇಲ್ಲಿನ ಭಿವಾಂಡಿ ಕೋರ್ಟ್‌ಗೆ ಹಾಜರಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿಯೂ ಗಾಂಧೀಜಿ ಇದ್ದಾರೆ. ಅವರನ್ನು ಎಂದಿಗೂ ಅಳಿಸಿ ಹಾಕಲು...
Date : Monday, 30-01-2017
ನವದೆಹಲಿ: ಬಜೆಟ್ ಅಧಿವೇಶನವೆಂದರೆ ಮಹಾಪಂಚಾಯತ್ ಆಗಿದ್ದು, ಭಿನ್ನಾಭಿಪ್ರಾಯಗಳ ನಡುವೆಯೂ ಅದು ಸರಿಯಾಗಿ ಕಾರ್ಯನಿರ್ವಹಿಸಲು ಪ್ರತಿಪಕ್ಷಗಳ ಸಹಕಾರವೂ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ನೋಟುಗಳ ಅಮಾನ್ಯತೆ ಕಾರಣ ಸಂಸತ್ತಿನ ಚಳಿಗಾಲದ...
Date : Monday, 30-01-2017
ಬೆಂಗಳೂರು: ಸ್ಕೂಟರ್‌ನಲ್ಲಿ ಪೆಟ್ರೋಲ್ ಖಾಲಿಯಾದ ಕಾರಣ ರಾತ್ರಿ ರಸ್ತೆ ಬದಿ ಒಂಟಿಯಾಗಿ ನಿಂತಿದ್ದ ಮಹಿಳೆಯೋರ್ವರು ಸುರಕ್ಷಿತವಾಗಿ ಮನೆಗೆ ತಲುಪಲು ಎಎಸ್‌ಐ ನಾರಾಯಣ ಕೆ. ಸಹಾಯ ಮಾಡಿದ್ದು ಪ್ರಶಂಸೆಗೆ ಪಾತ್ರವಾಗಿದೆ. ನಿರ್ಮಲಾ ರಾಜೇಶ್ ಎಂಬುವರು ಈ ಕುರಿತು ತಮ್ಮ ಫೇಸ್‌ಬುಕ್ ಗೋಡೆಯಲ್ಲಿ ಜ.26...
Date : Monday, 30-01-2017
ಮುಂಬಯಿ: ಮಹಾತ್ಮ ಗಾಂಧೀಜಿ ಹತ್ಯೆ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಠಾಣೆ ಜಿಲ್ಲೆಯ ಭಿವಂಡಿ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಮಹಾತ್ಮ ಗಾಂಧೀಜಿ ಅವರನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ಹತ್ಯೆ ಮಾಡಿದ್ದರು ಎಂದು 2014 ರಲ್ಲಿ ಸಾರ್ವತ್ರಿಕ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ರಾಹುಲ್...
Date : Monday, 30-01-2017
ನವದೆಹಲಿ: ಕೌಟುಂಬಿಕ ದೌರ್ಜನ್ಯ ತಡೆ ಹಾಗೂ ವರದಕ್ಷಿಣೆ ನಿಷೇಧ ಕಾನೂನಿನ ದುರುಪಯೋಗ ಪಡಿಸಿಕೊಂಡ ವೃದ್ಧ ಮಹಿಳೆಯ ಮಗ ಹಾಗೂ ಸೊಸೆಗೆ ಮನೆ ಬಿಟ್ಟು ಹೋಗುವಂತೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ. ಜೀವನವೆಂಬುದು ಚಕ್ರ, ಅದು ಏಣಿಯಲ್ಲ. ಯಾವಾಗಲೂ ಪೂರ್ಣ ಸುತ್ತುತ್ತಾ ಇರುತ್ತದೆ. ವಯಸ್ಸಾದವರನ್ನು...
Date : Monday, 30-01-2017
ನವದೆಹಲಿ: ಬಹುಜನರ ಆರಾಧ್ಯದೈವಗಳಿಗೆ ಬ್ಯಾನ್ ಬಿಸಿ ಮುಟ್ಟಿಸಿ ತುಷ್ಟೀಕರಣದ ರಾಜಕಾರಣ ಮಾಡುತ್ತಿರುವ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೀಗ ಸರಸ್ವತಿಯ ಮೊರೆ ಹೊಕ್ಕಿದ್ದು ವಿಚಿತ್ರ. ಕೇಂದ್ರ ಸರ್ಕಾರದ 2017-18 ನೇ ಸಾಲಿನ ಬಜೆಟ್ ಅಧಿವೇಶನ ಹಾಗೂ ಇತರ ಕಾರ್ಯಸೂಚಿಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಇಂದು...