ಮಂಗಳೂರು: ದೇಶ – ವಿದೇಶದಲ್ಲಿ ಯಶಸ್ಸನ್ನು ಕಂಡ ಮಂಗಳೂರಿನ ಜನರನ್ನು ಮಂಗಳೂರಿಗೆ ಮರಳುವಂತೆ ಮಾಡುವ “ಬ್ಯಾಕ್ ಟು ಊರು” ಎಂಬ ಪ್ರಯತ್ನದ ಭಾಗವಾಗಿ ಜರ್ಮನಿ ಮೂಲದ ಈಟ್ಯಾಗ್ ಗ್ರೂಪ್ ಹಾಗೂ ಮಂಗಳೂರು SEZ ಲಿಮಿಟೆಡ್ ನಡುವೆ ಇಂದು ಬಂಡವಾಳ ಹೂಡಿಕೆ ಒಪ್ಪಂದ ನಡೆದಿದೆ. EOI ಒಡಂಬಡಿಕೆಗೆ ಸಹಿ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ಉದ್ಯಮ ಸ್ಥಾಪನೆಗೆ ಮಂಗಳೂರು ವಿಶೇಷ ಆರ್ಥಿಕ ವಲಯ ಒದಗಿಸುವ ವಿವಿಧ ಅವಕಾಶ ಮತ್ತು ಮೂಲಸೌಕರ್ಯ, ಸೇವೆ, ಸೌಲಭ್ಯ ಹಾಗೂ ಪ್ರಯೋಜನಗಳನ್ನು ಗುರುತಿಸಿ ಶ್ರೀ ಪ್ರಕಾಶ್ ಪಿರೇರಾ ನೇತೃತ್ವದ ಈಟ್ಯಾಗ್ ಗ್ರೂಪ್(ETAG | European Technology Alliance Group ) ಮಂಗಳೂರು ನಗರದಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿರುವುದು ಅತ್ಯಂತ ಸಂತೋಷ ಹಾಗೂ ಶ್ಲಾಘನೀಯವಾಗಿದೆ.
ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಒಟ್ಟು 300 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹೂಡಿಕೆಯೊಂದಿಗೆ ಈಟ್ಯಾಗ್ ಗ್ರೂಪ್ ಇಂಧನ ಮತ್ತು ಇವಿ ಕ್ಷೇತ್ರಗಳಿಗೆ ಅತ್ಯಾಧುನಿಕ ಪರಿಹಾರಗಳನ್ನು ಅಭಿವೃದ್ದಿಪಡಿಸುವ ಉತ್ಪಾದನ ಘಟಕವನ್ನು ಸ್ಥಾಪಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.