ನವದೆಹಲಿ: ಬಹುಜನರ ಆರಾಧ್ಯದೈವಗಳಿಗೆ ಬ್ಯಾನ್ ಬಿಸಿ ಮುಟ್ಟಿಸಿ ತುಷ್ಟೀಕರಣದ ರಾಜಕಾರಣ ಮಾಡುತ್ತಿರುವ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೀಗ ಸರಸ್ವತಿಯ ಮೊರೆ ಹೊಕ್ಕಿದ್ದು ವಿಚಿತ್ರ.
ಕೇಂದ್ರ ಸರ್ಕಾರದ 2017-18 ನೇ ಸಾಲಿನ ಬಜೆಟ್ ಅಧಿವೇಶನ ಹಾಗೂ ಇತರ ಕಾರ್ಯಸೂಚಿಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಇಂದು ಸಂಜೆ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸದಿರಲು ತೃಣಮೂಲ ಕಾಂಗ್ರೆಸ್ ನಿರ್ಧರಿಸಿದೆ.
ಫೆ.1 ರಂದು ಕೇಂದ್ರ ಮಂಡಿಸಲಿರುವ ಬಜೆಟ್ ಸಂದರ್ಭದಲ್ಲೂ ತಾನು ಹಾಜರು ಇರುವುದಿಲ್ಲ ಎಂದು ಹೇಳಿರುವ ಟಿಎಂಸಿ, ತನ್ನ ಗೈರು ಹಾಜರಿಗೆ ’ಸರಸ್ವತಿ ಪೂಜೆ’ಯ ನೆಪವೊಡ್ಡಿದೆ. ಟಿಎಂಸಿ ನಾಯಕ ಡೆರೆಕ್ ಓ ಬ್ರಿಯಾನ್ ಈ ವಿಷಯ ತಿಳಿಸಿದ್ದಾರೆ.
ಕೊಲ್ಕತ್ತಾದಲ್ಲಿ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿಯವರು ಪಕ್ಷದ ಸಭೆ ಕರೆದಿದ್ದಾರೆ. ಅದೇ ಸಂದರ್ಭದಲ್ಲಿ ಸರಸ್ವತಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಹಣಕಾಸು ಸಚಿವರ ಮುಂಗಡಪತ್ರ ಮಂಡನೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ನೋಟು ಅಮಾನ್ಯೀಕರಣಗೊಂಡ ದಿನದಿಂದಲೂ ಪ್ರಧಾನಿ ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ಅವರು ಒಂದಿಲ್ಲೊಂದು ರೀತಿಯಲ್ಲಿ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ಆರ್ಎಸ್ಎಸ್ ರ್ಯಾಲಿ, ಜಮ್ಮು ಮತ್ತು ಕಾಶ್ಮೀರ ವಿಚಾರ ಕುರಿತ ಉಪನ್ಯಾಸ ಕಾರ್ಯಕ್ರಮ ಹೀಗೇ ಎಲ್ಲವಕ್ಕೂ ಕೊಕ್ ನೀಡಲು ಮಮತಾ ಬ್ಯಾನರ್ಜಿ ಯತ್ನಿಸಿದ್ದರು.
ಪಠ್ಯದಲ್ಲಿದ್ದ ರಾಮಧೇನುವಿನ ಬದಲು ರೊಂಗಧೇನು ಮಾಡಲು ಆದೇಶಿಸಿದ್ದು, ಜಾತ್ಯತೀತತೆಯ, ಸಂವಿಧಾನದ ತತ್ವದಡಿಯ ಸೋಗಿನಲ್ಲಿ ಸರಸ್ವತಿ ಪೂಜೆಗೂ ನಿಷೇಧ ಹೇರಿ ಸುತ್ತೋಲೆ ಕಳಿಸಿದ್ದ ಅದೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೀಗ, ಕೇಂದ್ರದ ವಿರುದ್ಧ ತಮ್ಮ ಅಸಹಕಾರ ತೋರಿಸಲೂ ತಮಗಾಗದ ಸರಸ್ವತಿಯನ್ನೇ ಸಹಾಯಕ್ಕೆ ಪಡೆದಿರುವುದು ಮಾತ್ರ ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.