ಬೆಂಗಳೂರು: ಸ್ಕೂಟರ್ನಲ್ಲಿ ಪೆಟ್ರೋಲ್ ಖಾಲಿಯಾದ ಕಾರಣ ರಾತ್ರಿ ರಸ್ತೆ ಬದಿ ಒಂಟಿಯಾಗಿ ನಿಂತಿದ್ದ ಮಹಿಳೆಯೋರ್ವರು ಸುರಕ್ಷಿತವಾಗಿ ಮನೆಗೆ ತಲುಪಲು ಎಎಸ್ಐ ನಾರಾಯಣ ಕೆ. ಸಹಾಯ ಮಾಡಿದ್ದು ಪ್ರಶಂಸೆಗೆ ಪಾತ್ರವಾಗಿದೆ.
ನಿರ್ಮಲಾ ರಾಜೇಶ್ ಎಂಬುವರು ಈ ಕುರಿತು ತಮ್ಮ ಫೇಸ್ಬುಕ್ ಗೋಡೆಯಲ್ಲಿ ಜ.26 ರಂದು ಬರೆದುಕೊಂಡಿದ್ದಾರೆ. ’ನಿನ್ನೆ ರಾತ್ರಿ ನಾನು ಕಚೇರಿಯಿಂದ ಸ್ಕೂಟರ್ನಲ್ಲಿ ಮನೆಗೆ ಹೊರಟಿದ್ದೆ. ಟಿವಿ ಟಾವರ್ ಬಳಿ ಇದ್ದಾಗ ಪೆಟ್ರೋಲ್ ಖಾಲಿಯಾಯಿತು. ನನ್ನ ಯಜಮಾನರು ಪೆಟ್ರೋಲ್ ತರುವವರೆಗೂ ಬೇರೆ ದಾರಿಯೇ ಇಲ್ಲದೇ ಒಬ್ಬಳೇ ರಸ್ತೆ ಬದಿ ನಿಂತಿದ್ದೆ. ಆದರೆ ಅದೇ ಸಂದರ್ಭದಲ್ಲಿ ಅಲ್ಲಿ ಹೊರಟಿದ್ದ ಟ್ರಾಫಿಕ್ ಪೊಲೀಸ್ ನಾರಾಯಣ್ ಅವರು ನನ್ನನ್ನು ವಿಚಾರಿಸಿದರು. ನಾನು ನಿಂತಿರುವ ಜಾಗ ಸುರಕ್ಷಿತವಲ್ಲ ಎಂದು ಸಲಹೆ ನೀಡಿದ ಅವರು, ತಮ್ಮ ಸ್ಕೂಟರ್ ನನಗೆ ನೀಡಿ, ಮೇಖ್ರಿ ಸರ್ಕಲ್ ಬಳಿ ನಿಲ್ಲುವಂತೆ ಹೇಳಿ ಕಳಿಸಿದರು. ಪೆಟ್ರೋಲ್ ಖಾಲಿಯಾದ ನನ್ನ ವಾಹನವನ್ನು ಸ್ವತಃ ನಾರಾಯಣ್ ಅವರೇ ಮೇಖ್ರಿ ಸರ್ಕಲ್ ವರೆಗೂ ತಳ್ಳಿಕೊಂಡು ಬಂದರು. ಅಷ್ಟೊತ್ತಿಗೆ ನನ್ನ ಯಜಮಾನರೂ ಬಂದರು. ಪರಿಣಾಮ ನಾವು ಸುರಕ್ಷಿತವಾಗಿ ಮನೆ ಸೇರಿದೆವು. ಪೊಲೀಸರೆಂದರೆ ಪೊಲೈಟ್ ಹಾಗೂ ಸ್ನೇಹಮಯಿಗಳೂ ಹೌದು ಎನ್ನಲು ಮಿ.ನಾರಾಯಣ್ ಅವರು ಮತ್ತೊಂದು ಉದಾಹರಣೆ. ದಯವಿಟ್ಟು ಈ ಪೋಸ್ಟ್ ಹೆಚ್ಚು ಶೇರ್ ಮಾಡಿ ಮತ್ತು ಹೆಚ್ಚೆಚ್ಚು ಲೈಕ್ಸ್ಗಳು ಬರುವಂತೆ ಮಾಡಿ. ಇದು ಪೊಲೀಸರಿಗೆ ಸಮರ್ಪಣೆ’.
ಹೀಗೆ ನಿರ್ಮಲಾ ರಾಜೇಶ್ ತಮ್ಮ ಫೇಸ್ಬುಕ್ನಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದು, ಕೆ.ಜಿ.ಹಳ್ಳಿ ಟ್ರಾಫಿಕ್ ಪೊಲೀಸ್ ಅದಿಕಾರಿ ನಾರಾಯಣ್ ಕೆ. ಅವರಿಗೊಂದು ಸೆಲ್ಯೂಟ್ ಹೊಡೆದಿದ್ದಾರೆ. 66 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಹಾಗೂ 14 ಸಾವಿರಕ್ಕಿಂತಲೂ ಹೆಚ್ಚು ಬಾರಿ ಈ ಪೋಸ್ಟ್ನ್ನು ಹಂಚಿಕೊಳ್ಳಲಾಗಿದೆ.
ನಾರಾಯಣ ಅವರ ಈ ಕಾರ್ಯ ರಾಜ್ಯ ಸರ್ಕಾರದ ಗಮನವನ್ನೂ ಸೆಳೆದಿದ್ದು, ಗೃಹ ಸಚಿವ ಜಿ.ಪರಮೇಶ್ವರ್ ಅವರು, 15 ಸಾವಿರ ರೂಪಾಯಿಯನ್ನು ಬಹುಮಾನವಾಗಿ ಘೋಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.