News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಾಷಿಂಗ್ಟನ್: ಭಾರತ, ಯುಎಸ್ ನಡುವಣ ಜಂಟಿ ಸಮರಾಭ್ಯಾಸಕ್ಕೆ ಚಾಲನೆ

ನವದೆಹಲಿ:  ಉಭಯ ರಾಷ್ಟ್ರಗಳ ರಕ್ಷಣಾ ಸಹಕಾರದ ಭಾಗವಾಗಿ ಭಾರತ ಮತ್ತು ಅಮೆರಿಕ ನಡುವೆ ಜಂಟಿ ಮಿಲಿಟರಿ ಸಮರಾಭ್ಯಾಸವು ವಾಷಿಂಗ್ಟನ್‌ನಲ್ಲಿ ಶುಕ್ರವಾರ ಪ್ರಾರಂಭವಾಗಿದೆ. ವಾಷಿಂಗ್ಟನ್‌ನ ಜಾಯಿಂಟ್ ಬೇಸ್ ಲೂಯಿಸ್ ಮ್ಯಾಕ್‌ಕಾರ್ಡ್‌ನಲ್ಲಿ ಸಮರಾಭ್ಯಾಸವನ್ನು ನಡೆಸಲಾಗುತ್ತಿದೆ. ‘ಯುದ್ಧ್ ಅಭ್ಯಾಸ್’ ಎಂದು ಕರೆಯಲ್ಪಡುವ ಈ ಸಮರಾಭ್ಯಾಸವು ಭಾರತ ಮತ್ತು ಅಮೆರಿಕಾದ ನಡುವಿನ...

Read More

ಚಂದಿರನ ಅಂಗಳಕ್ಕೆ ಚಂದ್ರಯಾನ-2 : ವೀಕ್ಷಿಸಲು ಭಾರತೀಯರಿಗೆ ಮೋದಿ ಮನವಿ

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಗಗನನೌಕೆಯು ಇಂದು ಮಧ್ಯರಾತ್ರಿಯ ಬಳಿಕ ಚಂದ್ರನ ಮೇಲ್ಮೈ ಅನ್ನು ಸ್ಪರ್ಶಿಸಲಿದೆ. ಈ ಐತಿಹಾಸಿಕ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನ ಇಸ್ರೋ ಕಛೇರಿಯಲ್ಲಿ ಮಕ್ಕಳೊಂದಿಗೆ ಕುಳಿತು ವೀಕ್ಷಣೆ ಮಾಡಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವುದಕ್ಕೆ ಉತ್ಸುಹುಕತೆಯನ್ನು...

Read More

ಸೇನೆ ವಿರುದ್ಧ ಸುಳ್ಳು ಆರೋಪ : ಶೆಹ್ಲಾ ರಶೀದ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು

ನವದೆಹಲಿ: ಭಾರತೀಯ ಸೇನೆಯ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್­ಮೆಂಟ್ ಮುಖ್ಯಸ್ಥೆ ಮತ್ತು ಹೋರಾಟಗಾರ್ತಿ ಶೆಹ್ಲಾ ರಶೀದ್ ವಿರುದ್ಧ ದೆಹಲಿ ಪೊಲೀಸರು ಶುಕ್ರವಾರ ಎಫ್ಐಆರ್ ದಾಖಲಿಸಿದ್ದಾರೆ. ರಶೀದ್ ವಿರುದ್ಧ ಬಂಧನ ಕೋರಿ ಸುಪ್ರೀಂ ಕೋರ್ಟ್ ವಕೀಲ ಅಲೋಕ್...

Read More

ಆರ್ಯನ್ ಆಕ್ರಮಣ ಸಿದ್ಧಾಂತವನ್ನು ಅಲ್ಲಗೆಳೆದ ಹೊಸ ಸಂಶೋಧನೆ

5000 ವರ್ಷ ಹಳೆಯ ಮಹಿಳೆಯ ಅಸ್ಥಿಪಂಜರದಲ್ಲಿನ ವಂಶವಾಹಿಯು ಆರ್ಯನ್ ಆಕ್ರಮಣದ ಸಿದ್ಧಾಂತವನ್ನು ಸಂಪೂರ್ಣವಾಗಿ ಅಲ್ಲಗಳೆದಿದೆ. ಸಿಂಧೂ ಕಣಿವೆ ನಾಗರೀಕತೆಯ ಪ್ರಾಚೀನ ಡಿಎನ್‌ಎ ಭಾರತದ ರಾಖಿಗಾರ್ಹಿ ಪುರಾತತ್ವ ಸ್ಥಳದಲ್ಲಿ ಸಮಾಧಿ ಮಾಡಲಾದ ವ್ಯಕ್ತಿಯಲ್ಲಿ ಕಂಡುಬಂದಿದೆ. ಪ್ರಾಚೀನ ಮಾನವ ಅವಶೇಷಗಳ ಬಗ್ಗೆ ಇದುವರೆಗಿನ ಅತಿದೊಡ್ಡ ಅಧ್ಯಯನವು ಭಾರತದಲ್ಲಿ...

Read More

ಮಾನವ ಸಹಿತ ಗಗನಯಾನಕ್ಕೆ ಗಗನಯಾತ್ರಿಗಳ ಮೊದಲ ಹಂತದ ಆಯ್ಕೆ ಪ್ರಕ್ರಿಯೆ ಪೂರ್ಣ

ಬೆಂಗಳೂರು: ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಗಗನಯಾತ್ರಿಗಳ ಆಯ್ಕೆ ಪ್ರಕ್ರಿಯೆಯ ಮೊದಲ ಹಂತವನ್ನು ಬೆಂಗಳೂರಿನ ಇನ್­ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಸಂಪೂರ್ಣಗೊಳಿಸಿದೆ ಎಂದು ಭಾರತೀಯ ವಾಯುಸೇನೆ ಶುಕ್ರವಾರ ಹೇಳಿದೆ. ಆಯ್ಕೆ ಮಾಡುವ ಪ್ರಕ್ರಿಯೆಯ ಭಾಗವಾಗಿ ಆಯ್ದ ಪೈಲಟ್‌ಗಳನ್ನು, ದೈಹಿಕ ವ್ಯಾಯಾಮ...

Read More

ಚಂದ್ರಯಾನ-2 ನೌಕೆ ಚಂದ್ರನಲ್ಲಿಗೆ ಇಳಿಯುವ ಸನ್ನಿವೇಶವೇ ರೋಚಕ

ದೇಶ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕಾತುರವಾಗಿದೆ. ಶನಿವಾರ ಮುಂಜಾನೆ 1:55 ಕ್ಕೆ ಚಂದ್ರಯಾನ-2 ಮಿಷನ್ ನೌಕೆ ಚಂದ್ರನ ಮೇಲ್ಮೈಗೆ ಇಳಿಯುತ್ತಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ ನೌಕೆಯನ್ನು ಕಳುಹಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗುತ್ತಿದೆ. ತನ್ನನ್ನು ಪರಿಭ್ರಮಿಸುತ್ತಿದ್ದ ಮಾತೃನೌಕೆಯಿಂದ ಬೇರ್ಪಡುವ ಮೂನ್ ಲ್ಯಾಂಡರ್ ವಿಕ್ರಮ್ ಮುಂಜಾನೆ 1:30...

Read More

ಐಐಟಿ ಮದ್ರಾಸ್, ಬಿಎಚ್­ಯು, ದೆಹಲಿ, ಹೈದರಾಬಾದ್ ವಿಶ್ವವಿದ್ಯಾಲಯಗಳು ಉತ್ಕೃಷ್ಟ ಸಂಸ್ಥೆಗಳಾಗಿ ಘೋಷಣೆ

ನವದೆಹಲಿ: ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯುಜಿಸಿ) ಮತ್ತು  ತಜ್ಞರ ಸಮಿತಿಯ ಸಲಹೆಯ ಮೇರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಐದು ವಿಶ್ವವಿದ್ಯಾಲಯಗಳನ್ನು ಉತ್ಕೃಷ್ಟ ಸಂಸ್ಥೆ (Institutions of Eminence)ಗಳು ಎಂದು ಘೋಷಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸೆಪ್ಟೆಂಬರ್ 4 ರಂದು ಈ ಆದೇಶ...

Read More

ಚಂದ್ರಯಾನ-2 : ಮೋದಿ ಜೊತೆ ಕುಳಿತು ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲಿದ್ದಾರೆ 60 ಮಕ್ಕಳು

ಬೆಂಗಳೂರು: ಚಂದ್ರಯಾನ-2 ಗಗನ ನೌಕೆ ಇಂದು ಮಧ್ಯರಾತ್ರಿ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಯುವ ಐತಿಹಾಸಿಕ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸುಮಾರು 60 ಮಕ್ಕಳೊಂದಿಗೆ ಕುಳಿತು ಬೆಂಗಳೂರಿನ ಇಸ್ರೋ ಕೇಂದ್ರ ಕಛೇರಿಯಲ್ಲಿ ವೀಕ್ಷಣೆ ಮಾಡಲಿದ್ದಾರೆ. ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ಇನ್ನು...

Read More

ರೂ.500 ಕೋಟಿಯ ಆಕಾಶ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಯೋಜನೆಗೆ ಕೇಂದ್ರ ಅನುಮೋದನೆ

ನವದೆಹಲಿ: ಶತ್ರು ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ನಿಟ್ಟಿನಲ್ಲಿ ಭಾರತೀಯ ವಾಯುಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನಗಳು ಭರದಿಂದ ಸಾಗುತ್ತಿವೆ. ಈ ಪ್ರಯತ್ನದ ಭಾಗವಾಗಿ ಪಾಕಿಸ್ಥಾನ ಮತ್ತು ಚೀನಾದ ಗಡಿಯಲ್ಲಿ ನಿಯೋಜಿಸಲು 5,000 ಕೋಟಿ ರೂ. ಮೌಲ್ಯದ ದೇಶೀಯ ಆಕಾಶ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ...

Read More

ಭಾರತವನ್ನು ಸೌರಶಕ್ತಿ ಬ್ಯಾಟರಿ ಉತ್ಪಾದನೆಯ ಹಬ್ ಆಗಿಸುವ ಇಂಗಿತ ವ್ಯಕ್ತಪಡಿಸಿದ ಮೋದಿ

ವ್ಲಾಡಿವೋಸ್ಟಾಕ್: ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಭಾರತವನ್ನು ಸೌರಶಕ್ತಿ ಬ್ಯಾಟರಿ ಉತ್ಪಾದನೆಯ ಹಬ್ ಆಗಿ ಪರಿವರ್ತಿಸಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಇದು ಶುದ್ಧ ಶಕ್ತಿಯ ಗುರಿಯನ್ನು ತಲುಪುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ...

Read More

Recent News

Back To Top