ವ್ಲಾಡಿವೋಸ್ಟಾಕ್: ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಭಾರತವನ್ನು ಸೌರಶಕ್ತಿ ಬ್ಯಾಟರಿ ಉತ್ಪಾದನೆಯ ಹಬ್ ಆಗಿ ಪರಿವರ್ತಿಸಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಇದು ಶುದ್ಧ ಶಕ್ತಿಯ ಗುರಿಯನ್ನು ತಲುಪುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮೊಬೈಲ್ ಫೋನ್ಗಳ ಉದಾಹರಣೆಯನ್ನು ನೀಡಿದ ಅವರು, ಮೊಬೈಲ್ ಬ್ಯಾಟರಿಗಳ ಗಾತ್ರ ಕಡಿಮೆಯಾದಂತೆ ಅವುಗಳ ಜನಪ್ರಿಯತೆಯು ಅನೇಕ ಪಟ್ಟು ಹೆಚ್ಚಾಗುತ್ತಾ ಹೋಯಿತು ಎಂದಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಜಪಾನಿನ ಪ್ರಧಾನಿ ಶಿಂಜೊ ಅಬೆ, ಮಲೇಷ್ಯಾ ಪ್ರಧಾನಿ ಮಹಾತಿರ್ ಮೊಹಮ್ಮದ್ ಮತ್ತು ಮಂಗೋಲಿಯನ್ ಅಧ್ಯಕ್ಷ ಖಜಾಲ್ತ್ಮಾಗಿನ್ ಅವರ ಸಮ್ಮುಖದಲ್ಲಿ ಪೂರ್ವ ಆರ್ಥಿಕ ವೇದಿಕೆ (Eastern Economic Forum)ಯಲ್ಲಿ ಭಾಷಣ ಮಾಡಿದ ಅವರು, ಹವಾಮಾನ ಬದಲಾವಣೆಯ ಜಾಗತಿಕ ಸವಾಲು ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
2022 ರ ವೇಳೆಗೆ 175 GW ಶುದ್ಧ ಶಕ್ತಿಯನ್ನು ಉತ್ಪಾದಿಸುವ ಮಹತ್ವಾಕಾಂಕ್ಷೆಯ ಭಾಗವಾಗಿ ಭಾರತ ಸೌರಶಕ್ತಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಗಮನ ಹರಿಸುತ್ತಿದೆ ಎಂದು ಅವರು ಹೇಳಿದರು.
ಭಾರತವು 175 GW ನವೀಕರಿಸಬಹುದಾದ ಇಂಧನದ ಗುರಿಯನ್ನು ಸಾಧಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಪ್ರಧಾನಿ, ಭಾರತವು ಸೌರಶಕ್ತಿ ಬ್ಯಾಟರಿ ಉತ್ಪಾದನೆಯ ಹಬ್ ಆಗಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.
ಸೌರಶಕ್ತಿ ಬ್ಯಾಟರಿ ಉತ್ಪಾದನೆಯ ಕ್ಷೇತ್ರದಲ್ಲಿ ವ್ಯವಹರಿಸುವ ಕಂಪನಿಗಳನ್ನು ಈ ಬಗ್ಗೆ ಚರ್ಚಿಸಲು ಆಹ್ವಾನಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಅಡುಗೆಗಾಗಿ ಸೌರಶಕ್ತಿಯನ್ನು ಬಳಸಿದರೆ, 250 ಮಿಲಿಯನ್ ಬ್ಯಾಟರಿಗಳಿಗೆ ಅವಕಾಶ ಸಿಗುತ್ತದೆ, ಇದರಿಂದಾಗಿ ಕ್ರಾಸ್ ಸಬ್ಸಿಡಿ ಮೂಲಕ ಎಲೆಕ್ಟ್ರಿಕ್ ವೆಹ್ಹಿಕಲ್ ಮಾರುಕಟ್ಟೆಗೆ ಲಾಭವಾಗಬಹುದು ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.