ನವದೆಹಲಿ: ಉಭಯ ರಾಷ್ಟ್ರಗಳ ರಕ್ಷಣಾ ಸಹಕಾರದ ಭಾಗವಾಗಿ ಭಾರತ ಮತ್ತು ಅಮೆರಿಕ ನಡುವೆ ಜಂಟಿ ಮಿಲಿಟರಿ ಸಮರಾಭ್ಯಾಸವು ವಾಷಿಂಗ್ಟನ್ನಲ್ಲಿ ಶುಕ್ರವಾರ ಪ್ರಾರಂಭವಾಗಿದೆ. ವಾಷಿಂಗ್ಟನ್ನ ಜಾಯಿಂಟ್ ಬೇಸ್ ಲೂಯಿಸ್ ಮ್ಯಾಕ್ಕಾರ್ಡ್ನಲ್ಲಿ ಸಮರಾಭ್ಯಾಸವನ್ನು ನಡೆಸಲಾಗುತ್ತಿದೆ.
‘ಯುದ್ಧ್ ಅಭ್ಯಾಸ್’ ಎಂದು ಕರೆಯಲ್ಪಡುವ ಈ ಸಮರಾಭ್ಯಾಸವು ಭಾರತ ಮತ್ತು ಅಮೆರಿಕಾದ ನಡುವಿನ ಅತಿದೊಡ್ಡ ಜಂಟಿ-ಮಿಲಿಟರಿ ತರಬೇತಿ ಮತ್ತು ರಕ್ಷಣಾ ಸಹಕಾರ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇದು ಸೆಪ್ಟೆಂಬರ್ 18 ರಂದು ಕೊನೆಗೊಳ್ಳಲಿದೆ.
ಪ್ರಕೃತಿಯ ಬೆದರಿಕೆಗಳನ್ನು ಎದುರಿಸುವ ಬಗೆಯನ್ನು ಸಮರಾಭ್ಯಾಸದ ಸಮಯದಲ್ಲಿ ಭಾರತ ಮತ್ತು ಯುಎಸ್ ಸೇನೆಗಳು ಜಂಟಿಯಾಗಿ ತರಬೇತಿ, ಯೋಜನೆ ಮತ್ತು ಕಾರ್ಯಗತಗೊಳಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎನ್ ಮಾನದಂಡದ ಪ್ರಕಾರವೇ ಎರಡೂ ದೇಶಗಳು ಜಂಟಿ ಸಮರಾಭ್ಯಾಸ ಕಾರ್ಯಾಚರಣೆಯನ್ನು ನಡೆಸುತ್ತವೆ. ಪರಸ್ಪರ ಪ್ರಯೋಜನಕಾರಿಯಾದ ವಿವಿಧ ವಿಷಯಗಳ ಬಗ್ಗೆ ಪರಸ್ಪರರ ಅನುಭವಗಳನ್ನು ಹಂಚಿಕೊಳ್ಳಲು ಎರಡೂ ಕಡೆಯ ತಜ್ಞರು ಶೈಕ್ಷಣಿಕ ಮತ್ತು ಮಿಲಿಟರಿ ಚರ್ಚೆಗಳನ್ನು ನಡೆಸಲಿದ್ದಾರೆ.
15 ನೇ ಆವೃತ್ತಿಯ ಈ ಸಮರಾಭ್ಯಾಸವು ಭಾರತ ಅಥವಾ ಯುಎಸ್ನಲ್ಲಿ ನಡೆಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.