ನವದೆಹಲಿ: ಭಾರತೀಯ ಸೇನೆಯ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ಮುಖ್ಯಸ್ಥೆ ಮತ್ತು ಹೋರಾಟಗಾರ್ತಿ ಶೆಹ್ಲಾ ರಶೀದ್ ವಿರುದ್ಧ ದೆಹಲಿ ಪೊಲೀಸರು ಶುಕ್ರವಾರ ಎಫ್ಐಆರ್ ದಾಖಲಿಸಿದ್ದಾರೆ. ರಶೀದ್ ವಿರುದ್ಧ ಬಂಧನ ಕೋರಿ ಸುಪ್ರೀಂ ಕೋರ್ಟ್ ವಕೀಲ ಅಲೋಕ್ ಶ್ರೀವಾಸ್ತವ್ ಅವರು ನೀಡಿದ್ದ ಕ್ರಿಮಿನಲ್ ದೂರಿನ ಮೇರೆಗೆ ಶೆಹ್ಲಾ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿದೆ.
ದೆಹಲಿ ಪೊಲೀಸರ ವಿಶೇಷ ಘಟಕವು ಭಾರತೀಯ ದಂಡ ಸಂಹಿತೆ (ಐಪಿಸಿ) ಯ 124-ಎ, 153 ಎ, 153, 504, 505 ಸೆಕ್ಷನ್ ಅಡಿಯಲ್ಲಿ ಶೆಹ್ಲಾ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ಎಂದು ಶೆಕ್ಲಾ ನಕಲಿ ಸುದ್ದಿಗಳನ್ನು ಹರಡಿದ್ದರು. ಮಾತ್ರವಲ್ಲದೇ ಭಾರತೀಯ ಸೇನೆಯ ವಿರುದ್ಧ ಆಧಾರರಹಿತ ಮತ್ತು ನಕಲಿ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ಸೇನೆ ಕಾಶ್ಮೀರ ಜನತೆಗೆ ಚಿತ್ರಹಿಂಸೆ ನೀಡುತ್ತಿದೆ ಎಂದು ಹೇಳಿದ್ದರು. ಈ ಎಲ್ಲಾ ಆರೋಪಗಳನ್ನು ಸೇನೆಯು ನಿರಾಕರಿಸಿತ್ತು ಮತ್ತು ಆರೋಪಗಳನ್ನು “ಆಧಾರರಹಿತ” ಎಂದು ಪ್ರತಿಪಾದಿಸಿತ್ತು.
ಸಶಸ್ತ್ರ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಸಾಮಾನ್ಯ ಜನರ ಮನೆಗಳನ್ನು ದರೋಡೆ ಮಾಡುತ್ತಿವೆ ಮತ್ತು ಹುಡುಗರನ್ನು ಎಳೆದುಕೊಂಡು ಹೋಗುತ್ತಿದೆ ಎಂದು ಶೆಹ್ಲಾ ಹೇಳಿದ್ದರು. ಶೋಪಿಯಾನದಲ್ಲಿ ನಾಲ್ಕು ಜನರನ್ನು ಸೇನಾ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡು ಚಿತ್ರಹಿಂಸೆ ನೀಡಿದ್ದಾರೆ ಎಂದು ಸರಣಿ ಟ್ವೀಟ್ಗಳಲ್ಲಿ ಆರೋಪಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅಧಿಕಾರ ಇಲ್ಲ ಎಂದಿದ್ದರು.
ಶೆಹ್ಲಾ ಅವರ ಈ ನಕಲಿ ಆರೋಪಗಳ ವಿರುದ್ಧ ವಕೀಲ ಶ್ರೀವಾಸ್ತವ್ ಅವರು ದೂರನ್ನು ದಾಖಲು ಮಾಡಿದ್ದಾರೆ. ಇದನ್ನು ಆಧರಿಸಿ ಅವರ ಮೇಲೆ ದೇಶದ್ರೋಹದ ಪ್ರಕರಣವನ್ನು ಹೂಡಲಾಗಿದೆ ಮತ್ತು ಎಫ್ಐಆರ್ ದಾಖಲು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.