ನವದೆಹಲಿ: ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯುಜಿಸಿ) ಮತ್ತು ತಜ್ಞರ ಸಮಿತಿಯ ಸಲಹೆಯ ಮೇರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಐದು ವಿಶ್ವವಿದ್ಯಾಲಯಗಳನ್ನು ಉತ್ಕೃಷ್ಟ ಸಂಸ್ಥೆ (Institutions of Eminence)ಗಳು ಎಂದು ಘೋಷಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸೆಪ್ಟೆಂಬರ್ 4 ರಂದು ಈ ಆದೇಶ ಹೊರಡಿಸಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಐಐಟಿ ಖರಗ್ಪುರ, ದೆಹಲಿ ವಿಶ್ವವಿದ್ಯಾಲಯ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯಗಳು ಉತ್ಕೃಷ್ಟ ಸಂಸ್ಥೆಗಳು ಎಂದು ಘೋಷಿಸಲ್ಪಟ್ಟಿವೆ.
ಇದಲ್ಲದೆ, ಉತ್ಕೃಷ್ಟ ಸಂಸ್ಥೆ ಎಂದು ಘೋಷಿಸಲ್ಪಡಲು ಸಿದ್ಧತೆಯನ್ನು ಮಾಡಿಕೊಳ್ಳುವಂತೆ ಐದು ಖಾಸಗಿ ವಿಶ್ವವಿದ್ಯಾಲಯಗಳಿಗೆ ಲೆಟರ್ಸ್ ಆಫ್ ಇಂಟೆಂಟ್ ನೀಡಲಾಗಿದೆ. ತಮಿಳುನಾಡಿನ ಅಮೃತ ವಿಶ್ವವಿದ್ಯಾಪೀಠಂ, ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನವದೆಹಲಿಯ ಜಾಮಿಯಾ ಹಮ್ದಾರ್ಡ್, ಒರಿಸ್ಸಾದ ಕಾಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಮತ್ತು ಮೊಹಾಲಿಯ ಭಾರತಿ ಇನ್ಸ್ಟಿಟ್ಯೂಟ್, ಸತ್ಯ ಭಾರತಿ ಫೌಂಡೇಶನ್ಗಳು ಲೆಟರ್ ಇಂಟೆಂಟ್ ಪಡೆದುಕೊಂಡಿವೆ. ಉತ್ಕೃಷ್ಟ ಸಂಸ್ಥೆಗಳಾಗಿ ಶೈಕ್ಷಣಿಕ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಈ ಸಂಸ್ಥೆಗಳು ತಮ್ಮ ಸಿದ್ಧತೆಯನ್ನು ಸಲ್ಲಿಸಬೇಕಾಗುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಇನ್ನೂ ಎರಡು ವಿಶ್ವವಿದ್ಯಾಲಯಗಳಾದ ಉತ್ತರಪ್ರದೇಶದ ಶಿವ ನಾಡರ್ ವಿಶ್ವವಿದ್ಯಾಲಯ ಮತ್ತು ಹರಿಯಾಣದ ಒಪಿ ಜಿಂದಾಲ್ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಇವುಗಳ ರಾಜ್ಯ ಸರ್ಕಾರದಡಿಯಲ್ಲಿನ ಖಾಸಗಿ ವಿಶ್ವವಿದ್ಯಾಲಯಗಳು ಎಂಬ ಸ್ಥಾನಮಾನವನ್ನು ನಿಲ್ಲಿಸಿ, ಉತ್ಕೃಷ್ಟ ಸಂಸ್ಥೆಗಳು ಎಂದು ಪರಿಗಣಿಸಲು ರಾಜ್ಯ ವಿಧಾನಸಭೆಯಲ್ಲಿ ಶಾಸನವನ್ನು ಅಂಗೀಕರಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಮುಖೇನ ಸೂಚನೆಯನ್ನು ನೀಡಲಾಗಿದೆ.
ಜಾದವ್ಪುರ ವಿಶ್ವವಿದ್ಯಾಲಯ (ಡಬ್ಲ್ಯುಬಿ), ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯ ಈ ಎರಡು ರಾಜ್ಯ ವಿಶ್ವವಿದ್ಯಾಲಯಗಳು ಅಧಿಕಾರ ಸಮಿತಿಯಿಂದ ಆಯ್ಕೆಯಾಗಿದೆ ಮತ್ತು ಉತ್ಕೃಷ್ಟ ಸಂಸ್ಥೆ ಯೋಜನೆಯಡಿಯ ಕೊಡುಗೆಯ ಬಗ್ಗೆ ಅವರ ಬದ್ಧತೆಯನ್ನು ಸೂಚಿಸಲು ರಾಜ್ಯ ಸರ್ಕಾರಗಳನ್ನು ಕೋರಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಇಲ್ಲಿಯವರೆಗೆ, ನಾವು 16 ಸಂಸ್ಥೆಗಳಿಗೆ ಉತ್ಕೃಷ್ಟ ಸಂಸ್ಥೆ ಸ್ಥಾನಮಾನ ನೀಡಿದ್ದೇವೆ ಹೊಂದಿದ್ದೇವೆ, ಇದಲ್ಲದೆ ರಾಜ್ಯ ಸರ್ಕಾರಗಳ ದೃಢೀಕರಣ ಮತ್ತು ಬದ್ಧತೆಯನ್ನು ಕಾಯುತ್ತಿರುವ ಮತ್ತೆ ನಾಲ್ಕು ಸಂಸ್ಥೆಗಳಿವೆ ಎಂದು ಮಾನವ ಸಂಪನ್ಮೂಲ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.