Date : Monday, 30-09-2019
ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಅಮೆರಿಕದಾದ್ಯಂತ ತಮಿಳು ಭಾಷೆ ಪ್ರತಿಧ್ವನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಮಿಳು ಕವಿಯ ವಾಕ್ಯಗಳನ್ನು ತಾನು ಉಲ್ಲೇಖ ಮಾಡಿರುವುದನ್ನು ಉಲ್ಲೇಖಿಸಿ ಅವರು ಈ...
Date : Monday, 30-09-2019
ಸಿರ್ಮೌರ್: ಹಿಮಾಚಲಪ್ರದೇಶದ ಸಿರ್ಮೌರ್ ಜಿಲ್ಲೆಯ ದೃಷ್ಟಿ ವಿಕಲಚೇತನ ವಿರೇಂದ್ರ ಸಿಂಗ್ ಅವರು ಪ್ಲಾಸ್ಟಿಕ್ ಮುಕ್ತ ಭಾರತದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ದೇಶದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಿರ್ಮೂಲನೆಗೊಳಿಸುವ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಅವರು...
Date : Monday, 30-09-2019
ಕಾಶ್ಮೀರದ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸಲು ಪ್ರಯತ್ನಿಸಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಸುಸ್ತಾಗಿ ಹೋಗಿದ್ದಾರೆ, ಹೀಗಾಗಿ ತಮ್ಮ ಮೇಲಿನ ನಿಯಂತ್ರಣವನ್ನೇ ಕಳೆದುಕೊಂಡಿದ್ದಾರೆ. ಭಾರತವು 370 ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ ತಮ್ಮ ದೇಶದ ಕಡೆಗೆ ಕಿಂಚಿತ್ತು ಬೆಂಬಲವನ್ನು ಪಡೆಯಲು ಅವರು ವಿಫಲರಾಗಿದ್ದಾರೆ. ತಮ್ಮ ದೇಶವನ್ನು...
Date : Monday, 30-09-2019
ಸೂರತ್: ಈ ಬಾರಿಯ ನವರಾತ್ರಿಯನ್ನು ದೇಶದ ಉದ್ದಗಲಕ್ಕೂ ಅತ್ಯಂತ ವಿಭಿನ್ನವಾದ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಭಾನುವಾರ, ಸೂರತ್ ನಗರದ ವಿಆರ್ ಮಾಲ್ನಲ್ಲಿ ತಂಡವೊಂದು ಹೆಲ್ಮೆಟ್ ಧರಿಸಿಕೊಂಡು ಗರ್ಬಾ ನೃತ್ಯ ಮಾಡಿದೆ. ಸಂಚಾರಿ ನಿಯಮದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಹೆಲ್ಮೆಟ್ ಧರಿಸಿಕೊಂಡು ವಿಭಿನ್ನವಾಗಿ...
Date : Monday, 30-09-2019
ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನವು ಭಾರತೀಯ ಸಮಾಜದ ನೈರ್ಮಲ್ಯದ ಬಗೆಗಿನ ಧೋರಣೆಯನ್ನು ಬದಲಾಯಿಸಿದೆ. ಹೀಗಾಗಿ ಇದು ಜಗತ್ತಿಗೆ ಉದಾಹರಣೆಯಾಗಬಲ್ಲ ಕಾರ್ಯಕ್ರಮ ಮತ್ತು ಗೇಮ್ ಚೇಂಜರ್ ಆಗಿದೆ ಎಂದು ಯುನಿಸೆಫ್ನ ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯಿಸಿದ್ದಾರೆ. ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಯುನಿಸೆಫ್ ಇಂಡಿಯಾ ಸ್ಯಾನಿಟೇಶನ್ (WASH) ಮುಖ್ಯಸ್ಥ ನಿಕೋಲಸ್...
Date : Monday, 30-09-2019
ನವದೆಹಲಿ : ಇಂಡಿಯನ್ ಎಕ್ಸ್ಪ್ರೆಸ್ನ 2019ರ ಅತೀ ಪ್ರಭಾವಿ ಭಾರತೀಯ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಗ್ರ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. 2ನೇ ಸ್ಥಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, 3ನೇ ಸ್ಥಾನವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರು...
Date : Monday, 30-09-2019
ಲಂಡನ್: 1980ರ ದಶಕದಲ್ಲಿ ಪಾಕಿಸ್ಥಾನದಲ್ಲಿ ಉಗ್ರವಾದಿ ಶಕ್ತಿಗಳು ಬೆಳೆಯತೊಡಗಿದವು ಎಂದು ವಿಶ್ವಸಂಸ್ಥೆಯ ಭಾಷಣದ ವೇಳೆ ಹೇಳಿಕೊಂಡಿರುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ಬಲೂಚ್ ಹೋರಾಟಗಾರ ಮೆಹ್ರನ್ ಮರ್ರಿ ಕಿಡಿಕಾರಿದ್ದಾರೆ. ಇದನ್ನು ಒಪ್ಪಿಕೊಳ್ಳುವ ಮೂಲಕ ಇಮ್ರಾನ್ ಅವರು ತನ್ನ ದೇಶದ...
Date : Monday, 30-09-2019
ಶ್ರೀನಗರ: ಹೊಸದಾಗಿ ರೂಪುಗೊಂಡ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ (ಬಿಡಿಸಿ) ಅಥವಾ ಮೂರು ಹಂತದ ಪಂಚಾಯತ್ ಚುನಾವಣೆ ಅಕ್ಟೋಬರ್ 24 ರಂದು ನಡೆಯಲಿದೆ ಎಂದು ಶ್ರೀನಗರದ ಮುಖ್ಯ ಚುನಾವಣಾಧಿಕಾರಿ ಶೈಲೇಂದ್ರ ಕುಮಾರ್ ಮಾಹಿತಿಯನ್ನು...
Date : Monday, 30-09-2019
ಮಾವ್: ತರಕಾರಿ ವ್ಯಾಪಾರಿಯೊಬ್ಬರ ಮಗನನ್ನು ಬಿಜೆಪಿಯು ಉತ್ತರಪ್ರದೇಶದ ಘೋಷಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿಯನ್ನಾಗಿಸಿದೆ. ಪಕ್ಷದ ನಿರ್ಧಾರಕ್ಕೆ ಭಾರೀ ಶ್ಲಾಘನೆಗಳು ವ್ಯಕ್ತವಾಗುತ್ತಿದೆ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ವಿಜಯ್ ರಾಜ್ಬರ್ ಎಂಬುವವರು ಇದೀಗ ಪಕ್ಷದ ಟಿಕೆಟ್ ಪಡೆದು ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಮಗನ ಸಾಧನೆಯನ್ನು...
Date : Monday, 30-09-2019
ನವದೆಹಲಿ: ವಿಶ್ವದ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರವಾದ ಸೌದಿ ಅರೇಬಿಯಾವು ಭಾರತದಲ್ಲಿ 10 ಬಿಲಿಯನ್ ಡಾಲರ್ ದೀರ್ಘಾವಧಿ ಹೂಡಿಕೆ ಮಾಡುವತ್ತ ಗಮನ ಹರಿಸುತ್ತಿದೆ. ಭಾರತದ ಪ್ರಗತಿ ಸಂಭಾವ್ಯತೆಯನ್ನು ಮುಂದಿಟ್ಟುಕೊಂಡು ಪೆಟ್ರೋಕೆಮಿಕಲ್ಸ್, ಮೂಲಭೂತ ಸೌಕರ್ಯ ಮತ್ತು ಇತರ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಮಾಡಲು ಸೌದಿ...