ಹೈದರಾಬಾದ್: ನವೆಂಬರ್ 13 ಮತ್ತು 21 ರ ನಡುವೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ಕಾಕಿನಾಡ ಸಮೀಪ ನಡೆಯಲಿರುವ `ಟೈಗರ್ ಟ್ರಿಂಫ್’ ಎಂಬ ಮೊದಲ ಟ್ರೈ-ಸರ್ವೀಸಸ್ ಇಂಡಿಯಾ-ಯುಎಸ್ ಮಿಲಿಟರಿ ಸಮರಾಭ್ಯಾಸದಲ್ಲಿ 1,200 ಭಾರತೀಯ ಮತ್ತು 500 ಅಮೆರಿಕಾ ಯೋಧರು, ನೌಕಾ ಸಿಬ್ಬಂದಿಗಳು ಮತ್ತು ವಾಯುಪಡೆ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ.
“ಈ ಸಮರಾಭ್ಯಾಸವು ಘಟನೆ ಮತ್ತು ಕ್ಷೇತ್ರ ತರಬೇತಿಯನ್ನು ಒಳಗೊಂಡಿರುತ್ತದೆ, ಅಲ್ಲದೇ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳ ಬಗ್ಗೆಯೂ ಅಭ್ಯಾಸ ನಡೆಯಲಿದೆ. ಈ ಅಭ್ಯಾಸವು ಭಾರತೀಯ ಮತ್ತು ಅಮೆರಿಕಾದ ಯೋಧರ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಒಟ್ಟಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಕೂಡ ಸುಧಾರಿಸುತ್ತದೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಈ ಅಭ್ಯಾಸವು ಯುಎಸ್ ಮತ್ತು ಭಾರತೀಯ ಪಡೆಗಳಿಗೆ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಪರಸ್ಪರ ಕಲಿಯಲು ಮತ್ತು ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳನ್ನು ಸ್ಥಾಪಿಸಲು ಅವಕಾಶವನ್ನು ನೀಡುತ್ತದೆ. ಟೈಗರ್ ಟ್ರಿಂಫ್ ಸಮಯದಲ್ಲಿ, ಯುಎಸ್ಎಸ್ ಜರ್ಮಂಟೌನ್ನ ಫ್ಲೈಟ್ ಡೆಕ್ನಲ್ಲಿ ಭಾರತೀಯ ವಾಯುಪಡೆಯಿಂದ ಕ್ರಾಸ್ ಡೆಕ್ ಲ್ಯಾಂಡಿಂಗ್ಗಳನ್ನು ನಡೆಸುವ ಮೂಲಕ ಮತ್ತು ತೀರದಿಂದ ಹಡಗಿನಲ್ಲಿನ ಆಸ್ಪತ್ರೆಗೆ ಅಪಘಾತ ಸಂತ್ರಸ್ಥರನ್ನು ಸ್ಥಳಾಂತರಿಸುವ ಮೂಲಕ ಭಾರತೀಯ ಮತ್ತು ಯುಎಸ್ ಪಡೆಗಳು ಪರಸ್ಪರರ ವಾಯುಯಾನ ಬೆಂಬಲ ಸಾಮರ್ಥ್ಯಗಳಿಗೆ ಪರಿಚಿತಗೊಳ್ಳುತ್ತದೆ.
ಟೈಗರ್ ಟ್ರಿಂಫ್ ತರಬೇತಿಯು ಭಯೋತ್ಪಾದನೆ ನಿಗ್ರಹ ಅಥವಾ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದೆ. ಪರಸ್ಪರರ ತಂತ್ರಗಳು, ಕಾರ್ಯತಂತ್ರಗಳು ಮತ್ತು ಕಾರ್ಯವಿಧಾನಗಳೊಂದಿಗೆ ಪರಿಚಿತರಾಗಲು ಇದು ಸಹಾಯ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.