Date : Wednesday, 22-04-2015
ಬಂಟ್ವಾಳ: ಇಲ್ಲಿನ ಬಹುದಿನದ ಬೇಡಿಕೆಯಂತೆ ಕಾರ್ಯಾರಂಭಗೊಂಡ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆ ಮೂಲ ಸೌಕರ್ಯದ ಕೊರತೆಯನ್ನು ಎದುರಿಸುತ್ತಿದೆ. ವಿಶೇಷವೆಂದರೆ ಬಿಳಿ ಸಮವಸ್ತ್ರದಲ್ಲಿ ಗುರುತಿಸಬೇಕಾದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಇನ್ನೂ ಖಾಕಿ ಭಾಗ್ಯದಲ್ಲೇ ತೃಪ್ತಿಪಟ್ಟಿದ್ದಾರೆ. ಬಿ.ಸಿರೋಡಿನಿಂದ ಸುಮಾರು 3ಕಿ.ಮೀ ದೂರದ ಮೆಲ್ಕಾರ್‌ನಲ್ಲಿ ತಾತ್ಕಾಲಿಕವಾಗಿ...
Date : Wednesday, 22-04-2015
ಜೈಪುರ್: ಪ್ರಧಾನಿ ನರೇಂದ್ರ ಮೋದಿಯವರ ಪರ ಚಾದರನ್ನು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಬುಧವಾರ ಅಜ್ಮೀರ್ ಶರೀಫ್ ಖ್ವಾಜಾ ಮೊಯಿನುದ್ದೀನ್ ಚಿಸ್ಟಿ ದರ್ಗಾಗೆ ಅರ್ಪಿಸಲಿದ್ದಾರೆ. ‘ಮೋದಿಯವರು ನೀಡಿರುವ ಚಾದರನ್ನು ದರ್ಗಾಗೆ ಅರ್ಪಿಸಿ ಬಳಿಕ ಅವರು ನೀಡಿದ ಸಂದೇಶವನ್ನು ಓದುತ್ತೇನೆ’...
Date : Wednesday, 22-04-2015
ನವದೆಹಲಿ: ಕೇಂದ್ರದ ಭೂಸ್ವಾಧೀನ ಮಸೂದೆಯನ್ನು ವಿರೋಧಿಸುವ ಸಲುವಾಗಿ ಬುಧವಾರ ಎಎಪಿ ನವದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ನಡೆಸಲಿದೆ. ಆದರೆ ಈ ಪ್ರತಿಭಟನೆಯ ವೇಳೆ ಮಾಧ್ಯಮಗಳನ್ನು ತನ್ನ ಹತ್ತಿರಕ್ಕೆ ಬಿಡಬೇಡಿ ಎಂದು ಅರವಿಂದ್ ಕೇಜ್ರಿವಾಲ್ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬಂಡಾಯ ನಾಯಕರ ಉಚ್ಛಾಟನೆ,...
Date : Tuesday, 21-04-2015
ಬೆಳ್ತಂಗಡಿ : ತಾಲೂಕಿನಾದ್ಯಂತ ಮಂಗಳವಾರ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದ್ದು, ಧರ್ಮಸ್ಥಳ ಗ್ರಾಮದ ಕಂಚಿಮಾರು ಎಂಬಲ್ಲಿ ದನದ ಕೊಟ್ಟಿಗೆಗೆ ಸಿಡಿಲು ಬಡಿದು ದನವೊಂದು ಸತ್ತಿದ್ದು, ಅದರ ಪಕ್ಕದಲ್ಲಿದ್ದ ಮನೆಗೂ ಸಿಡಿಲಿನ ಆಘಾತ ಆಗಿದ್ದು ಓರ್ವ ಗಾಯಗೊಂಡಿದ್ದಾರೆ. ಸಂಜೆ ಸುಮಾರು 5-30ರ ಸಮಯಕ್ಕೆ...
Date : Tuesday, 21-04-2015
ಬೆಳ್ತಂಗಡಿ : ಹಾವೇರಿಯಿಂದ ಸುಬ್ರಹ್ಮಣ್ಯಕ್ಕೆ ಯಾತ್ರಾರ್ಥಿಯಾಗಿ ಬರುತ್ತಿದ್ದ ಟೆಂಪೋವೊಂದು ಚಾರ್ಮಾಡಿ ಘಾಟ್‌ನ 2ನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 40-45 ಅಡಿ ಪ್ರಪಾತಕ್ಕೆ ಬಿದ್ದು ಅದರಲ್ಲಿದ್ದ ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಹಾವೇರಿಯ ಬೂದನಕಟ್ಟೆ ನಿವಾಸಿ ಲಕ್ಷ್ಮವ್ವ(45),...
Date : Tuesday, 21-04-2015
ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ಮತ್ತು ಸಜೀಪಮುನ್ನೂರು ಗ್ರಾಮದ ನೇತ್ರಾವತಿ ಸೇತುವೆಯ ಆಸುಪಾಸಿನಲ್ಲಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಮರಳುದಂಧಗೆ ಇನ್ನು ಕಡಿವಾಣ ಬಿದ್ದಿಲ್ಲ. ವಾರದ ಹಿಂದೆಯಷ್ಟೇ ತಹಸೀಲ್ದಾರ್ ದಾಳಿ ನಡೆಸಿದ ಬಳಿಕವೂ ಮರುಳುಗಾರಿಕೆ ಮುಂದುವರಿದಿದೆ! ಸಜೀಪಮುನ್ನೂರು ಗ್ರಾಮದ ನಂದಾವರ, ಪಾಣೆಮಂಗಳೂರು ಅಕ್ಕರಂಗಡಿ, ನೆಹರೂನಗರ,...
Date : Tuesday, 21-04-2015
ಬಂಟ್ವಾಳ : ಹಲಸು ಪ್ರೇಮಿಗಳಿಗೆ ಒಂದು ಸಿಹಿಸುದ್ದಿ..ಹಲಸು ಪ್ರೇಮಿಕೂಟ, ಬಂಟ್ವಾಳ ಕಳೆದ ಹಲವು ವರ್ಷಗಳಿಂದ ಹಲಸಿನ ಮೌಲ್ಯವರ್ಧನೆ, ಮಾರುಕಟ್ಟೆ, ತಳಿ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹಲಸಿನ ಹಬ್ಬ, ತಳಿ ಆಯ್ಕೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಿದೆ. ಏಪ್ರಿಲ್ 26 ರಂದು ಪಾಣೆಮಂಗಳೂರು ಹಳೆ...
Date : Tuesday, 21-04-2015
ಬಂಟ್ವಾಳ: ಸರ್ಕಾರವು ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಈ ಹಿಂದೆ ಭವಿಷ್ಯನಿಧಿ ಮೂಲಕ ಹಿರಿಯ ಬೀಡಿ ಕಾರ್ಮಿಕರಿಗೆ ಸಿಗುತ್ತಿದ್ದ ರೂ 1ಸಾವಿರ ಮೊತ್ತದ ಪಿಂಚಣಿಯನ್ನೂ ಕಸಿದುಕೊಳ್ಳುವ ಮೂಲಕ ಬಂಡವಾಳಶಾಹಿದಾರರನ್ನು ರಕ್ಷಿಸುತ್ತಿದೆ ಎಂದು ಜಿಲ್ಲಾ ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ) ಅಧ್ಯಕ್ಷ...
Date : Tuesday, 21-04-2015
ಬೆಳ್ತಂಗಡಿ : ಮಿತಿಗಿಂತ ಅಧಿಕ ಮರಳನ್ನು ಹೊತ್ತು ಸಾಗುತ್ತಿದ್ದ ಸುಮಾರು 35 ಲಾರಿಗಳನ್ನು ಬೆಳ್ತಂಗಡಿ ತಹಶೀಲ್ದಾರ್ ಬಿ.ಎಸ್. ಪುಟ್ಟ ಶೆಟ್ಟಿ ಅವರು ಸೋಮವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಸರಕಾರ ನೀಡಿದ 10 ಟನ್ ಪರವಾನಿಗೆಗಿಂತ ಹೆಚ್ಚಿಗೆ ಮರಳನ್ನು ತುಂಬಿಸಿಕೊಂಡು ಬರುತ್ತಿದ್ದ ಲಾರಿಗಳನ್ನು ಮದ್ದಡ್ಕದಿಂದ ಚಾರ್ಮಾಡಿ ತನಕ...
Date : Tuesday, 21-04-2015
ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಬಿ.ಸಿ.ರೋಡ್-ಹಾಸನ ಚತುಷ್ಪಥ ರಸ್ತೆ ನಿರ್ಮಾಣದ ವೇಳೆ ಕಲ್ಲಡ್ಕ ಪೇಟೆಯನ್ನು ಯಥಾಸ್ಥಿತಿ ಕಾಪಾಡುವ ಉದ್ದೇಶದಿಂದ ಅಧಿಕಾರಿಗಳ ಮಹತ್ವದ ಸಭೆಯೊಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉಪಸ್ಥಿತಿಯಲ್ಲಿ ಮಂಗಳವಾರ ಬಂಟ್ವಾಳ ಪ್ರವಾಸಿ ಮಂದಿರದಲ್ಲ್ಲಿ ನಡೆದಿದೆ. ಕಲ್ಲಡ್ಕ...