ಇಸ್ಲಾಮಾಬಾದ್: ಅಫ್ಘಾನಿಸ್ತಾನದ ಪೂರ್ವ ಗಡಿ ಪ್ರಾಂತ್ಯದಲ್ಲಿ ಪಾಕಿಸ್ಥಾನ ವೈಮಾನಿಕ ದಾಳಿಯನ್ನು ನಡೆಸಿದ್ದು, 46 ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಸರ್ಕಾರದ ವಕ್ತಾರರು ಬುಧವಾರ ತಿಳಿಸಿದ್ದಾರೆ.
“ಕಳೆದ ರಾತ್ರಿ ಪಕ್ಟಿಕಾ ಪ್ರಾಂತ್ಯದ ಬರ್ಮಾಲ್ ಜಿಲ್ಲೆಯಲ್ಲಿ ಪಾಕಿಸ್ತಾನ ನಾಲ್ಕು ಪಾಯಿಂಟ್ಗಳನ್ನು ಸ್ಫೋಟಿಸಿತು. ಸತ್ತವರ ಒಟ್ಟು ಸಂಖ್ಯೆ 46, ಅವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು” ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.
ಇನ್ನೂ ಆರು ಜನರು ಗಾಯಗೊಂಡಿದ್ದಾರೆ, ಹೆಚ್ಚಾಗಿ ಮಕ್ಕಳು ಎಂದು ಮಾಹಿತಿ ನೀಡಿದ್ದಾನೆ.
ಅಫ್ಘಾನ್ ರಕ್ಷಣಾ ಸಚಿವಾಲಯವು, ತನ್ನ ಪ್ರದೇಶದ ಮೇಲೆ ಪಾಕಿಸ್ಥಾನದ ದಾಳಿಗಳನ್ನು ಖಂಡಿಸಿದೆ, ಅವುಗಳನ್ನು “ಅನಾಗರಿಕ” ಮತ್ತು “ಸ್ಪಷ್ಟ ಆಕ್ರಮಣ” ಎಂದು ಕರೆದಿದೆ.
“ಇಸ್ಲಾಮಿಕ್ ಎಮಿರೇಟ್ ಈ ಹೇಡಿತನದ ಕೃತ್ಯವನ್ನು ಉತ್ತರಿಸದೆ ಬಿಡುವುದಿಲ್ಲ, ಬದಲಿಗೆ ತನ್ನ ಪ್ರದೇಶ ಮತ್ತು ಸಾರ್ವಭೌಮತ್ವದ ರಕ್ಷಣೆಯನ್ನು ತನ್ನ ಅವಿನಾಭಾವ ಹಕ್ಕು ಎಂದು ಪರಿಗಣಿಸುತ್ತದೆ” ಎಂದು ತಾಲಿಬಾನ್ ಸರ್ಕಾರ ಹೇಳಿದೆ.
ಮಾರ್ಚ್ನಲ್ಲೂ ಅಫ್ಘಾನಿಸ್ತಾನದ ಗಡಿ ಪ್ರದೇಶಗಳಲ್ಲಿ ಪಾಕಿಸ್ಥಾನದ ಮಿಲಿಟರಿ ವೈಮಾನಿಕ ದಾಳಿಗಳನ್ನು ನಡೆಸಿ ಎಂಟು ನಾಗರಿಕರನ್ನು ಕೊಂದು ಹಾಕಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.