ಬೆಳ್ತಂಗಡಿ : ಮಿತಿಗಿಂತ ಅಧಿಕ ಮರಳನ್ನು ಹೊತ್ತು ಸಾಗುತ್ತಿದ್ದ ಸುಮಾರು 35 ಲಾರಿಗಳನ್ನು ಬೆಳ್ತಂಗಡಿ ತಹಶೀಲ್ದಾರ್ ಬಿ.ಎಸ್. ಪುಟ್ಟ ಶೆಟ್ಟಿ ಅವರು ಸೋಮವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಸರಕಾರ ನೀಡಿದ 10 ಟನ್ ಪರವಾನಿಗೆಗಿಂತ ಹೆಚ್ಚಿಗೆ ಮರಳನ್ನು ತುಂಬಿಸಿಕೊಂಡು ಬರುತ್ತಿದ್ದ ಲಾರಿಗಳನ್ನು ಮದ್ದಡ್ಕದಿಂದ ಚಾರ್ಮಾಡಿ ತನಕ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಕಾನೂನನ್ನು ಉಲ್ಲಂಘಿಸಿದ ೩೫ ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಏಪ್ರಿಲ್ 15 ರಂದು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ, ಪಂಗಡದ ಕುಂದುಕೊರತೆ ಸಭೆಯಲ್ಲಿ ಮರಳು ಸಾಗಾಣಿಕೆ ಲಾರಿಗಳ ಮೇಲೆ ಕಡಿವಾಣ ಹಾಕಲು ಆಗ್ರಹಿಸಲಾಗಿತ್ತು. ಚಾರ್ಮಾಡಿ ಘಾಟಿಯಲ್ಲಿ ಇತ್ತೀಚೆಗೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದಂತೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಉಜಿರೆಯಿಂದ ಗುರುವಾಯನಕೆರೆ ತನಕ ದಿನಪೂರ್ತಿ ಟ್ರಾಫಿಕ್ ಜಾಮ್ ಆಗುತ್ತಿದೆ. ಸುಗಮ ಸಂಚಾರಕ್ಕೆ ಪ್ರಯತ್ನಿಸುವುದೇ ಬೆಳ್ತಂಗಡಿ ಪೊಲೀಸರಿಗೆ ದೊಡ್ಡ ಸಾಹಸವಾಗಿದೆ. ಮೊದಲೇ ಸಿಬ್ಬಂದಿಗಳ ಕೊರತೆಯಿಂದ ಬಳಲುತ್ತಿರುವ ಬೆಳ್ತಂಗಡಿ ಪೊಲೀಸರು ತನ್ನ ಇತಿ ಮಿತಿಯೊಳಗೆ ಸುಗಮ ಸಂಚಾರಕ್ಕೆ ದುಡಿಯುತ್ತಿದ್ದಾರೆ. ಈ ಮಧ್ಯೆ ಲಾರಿಗಳ ಆರ್ಭಟ ಆಧಿಕವಾಗಿದೆ. ಇದರ ಆರ್ಭಟಕ್ಕೆ ಹಲವಾರ ಬಲಿಯಾಗಿದೆ. ಸಂಬಂಧ ಪಟ್ಟ ಇಲಾಖೆ ಮೌನವಹಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸೋಮವಾರ ಹಾಗೂ ಮಂಗಳವಾರ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ವಿವಿದೆಡೆ ಮಿತಿಗಿಂತ ಜಾಸ್ತಿ ಮರಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. 35 ಲಾರಿಗಳು ಅಧಿಕ ಮರಳನ್ನು ತುಂಬಿಸಿಕೊಂಡು ಬಂದಿದ್ದವು. ಅವುಗಳನ್ನು ಪುತ್ತೂರು ಆರ್ಟಿಓಗಳ ಸುಪರ್ದಿಗೆ ಒಪ್ಪಿಸಲಾಗುವುದು- ಬಿ.ಎಸ್. ಪುಟ್ಟ ಶೆಟ್ಟಿ ತಹಶೀಲ್ದಾರ್, ಬೆಳ್ತಂಗಡಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.