ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂದರುಗಳ ಅಭಿವೃದ್ಧಿ ಹಾಗೂ ಮೀನುಗಾರರ ಕಲ್ಯಾಣ ವಿಚಾರವಾಗಿ ಕಾಂಗ್ರೆಸಿಗರು ಸುಳ್ಳು ಸುದ್ದಿ ಹಬ್ಬಿಸುವ ಕಾರ್ಯ ನಡೆಸುತ್ತಿದ್ದಾರೆ. ಬಂದರುಗಳ ಅಭಿವೃದ್ಧಿಗೆ ಹತ್ತಾರು ಮನವಿ ಸಲ್ಲಿಸಿದ್ದರೂ ರಾಜ್ಯದ ಕಾಂಗ್ರೆಸ್ ಸರಕಾರ ಹಾಗೂ ಮೀನುಗಾರಿಕೆ ಹಾಗೂ ಬಂದರು ಇಲಾಖೆ ಸಚಿವರಿಂದ ಯಾವುದೇ ಅನುದಾನ ಸಿಕ್ಕಿಲ್ಲ ಎಂದು ಶಾಸಕರ ಗುರುರಾಜ್ ಗಂಟಿಹೊಳೆ ದೂರಿದ್ದಾರೆ.
ಮೀನುಗಾರರಿಗೆ ಕಾಂಗ್ರೆಸ್ ಸುಳ್ಳು ಸಂಗತಿ ಹೇಳುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಬಂದರುಗಳಲ್ಲಿ ಮೂಲಸೌಕರ್ಯ, ಶುಚಿತ್ವ, ಆಕ್ಷನ್ ಹಾಲ್, ಜಟ್ಟಿ ನಿರ್ಮಾಣ, ಬ್ರೇಕ್ವಾಟರ್, ಡ್ರಜ್ಜಿಂಗ್, ಜಟ್ಟಿ ನಿರ್ಮಾಣ ಸಹಿತ ಬಂದರು, ಹೊರ ಬಂದರು ಅಭಿವೃದ್ಧಿ, ಮೀನುಗಾರಿಕೆ ಕೊಂಡಿ ರಸ್ತೆಗಳನ್ನು ಮೇಲ್ದರ್ಜೆಗೆ ಸೇರಿಸಲು ಸಂಸದರಾದ ಬಿ.ವೈ.ರಾಘವೇಂದ್ರ ಅವರ ವಿಶೇಷ ಮುತುವರ್ಜಿಯಲ್ಲಿ ಈವರೆಗೇ 653 ಕೋಟಿ ರೂ. ಬೈಂದೂರು ಕ್ಷೇತ್ರಕ್ಕೆ ಬಂದಿದೆ. ಗಂಗೊಳ್ಳಿ ಬಂದರು ಆಧುನಿಕರಣಕ್ಕೆ ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯಡಿ 22.18 ಕೋಟಿ ಬಿಡುಗಡೆಯಾಗಿದ್ದನ್ನು ರಾಜ್ಯ ಮೀನುಗಾರಿಕೆ ಸಚಿವರು ತಾನೇ ಮಂಜೂರು ಮಾಡಿದ್ದು ಎಂದು ಸುಳ್ಳು ಹೇಳಿದ್ದಾರೆ.
ಕೇಂದ್ರ ಸರಕಾದ 13.31 ಕೋಟಿ ಗೆ ಅನುಮೋದನೆ ಸಿಕ್ಕರೂ ರಾಜ್ಯದ 8.87 ಕೋಟಿಗೆ ಅನುಮೋದನೆಯೇ ಸಿಕ್ಕಿಲ್ಲ. ದೋಣಿ ದುರುಂತಕ್ಕೆ ಪರಿಹಾರ ಮೊತ್ತ 5ರಿಂದ 10 ಲಕ್ಷಕ್ಕೆ ಏರಿಸುವಂತೆ ಸದನದಲ್ಲಿ ನಾನೇ ಪ್ರಸ್ತಾಪ ಮಾಡಿದ್ದೇನೆ. ಬಿಜೆಪಿ ಸರ್ಕಾರ ಕಡಲ್ಕೊರತೆ ತಡೆಗೆ 10 ಕೋ.ರೋ ನೀಡಿತ್ತು ಇದೀಗ ಕಾಂಗ್ರೆಸ್ ಸರಕಾರ ಯಾವ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಆದರೂ ಕಾಂಗ್ರೆಸಿಗರು ಮೀನುಗಾರರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಈ ಕೂಡಲೇ ಕಾಂಗ್ರೆಸಿಗರು ಮೀನುಗಾರರಿಗೆ ಸುಳ್ಳು ಮಾಹಿತಿ ನೀಡಿ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿನಃ ಕಾರಣ ವಿಳಂಬ
2020-21ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮರವಂತೆ ಹೊರಬಂದರು 2ನೇ ಹಂತದ ಕಾಮಗಾರಿಗೆ ಬಜೆಟ್ನಲ್ಲಿ ಮಂಜೂರಾತಿ ನೀಡಿದ್ದರು. ಅನಂತರ ಆಡಳಿತಾತ್ಮಕ ಅನುಮೋದನೆಯೂ ದೊರೆತಿದೆ. ತಾಂತ್ರಿಕ ಅನುಮೋದನೇ ಸಿಕ್ಕ ನಂತರ 2022ರ ಆಗಸ್ಟ್ 26ರಂದು ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡಲಾಗಿತ್ತು. ನಂತರ ಲೈನ್ ಮ್ಯಾನೇಜ್ಮೆಂಟ್ ಪ್ಲಾನ್ ( SMP)ಸಿದ್ಧಪಡಿಸಲು 64 ಲಕ್ಷ ಒದಗಿಸಲು ಈ ಕಾಂಗ್ರೆಸ್ ಸರಕಾರ ಸತಾಯಿಸಿದೆ. ಕೂಡಲೇ ಮರವಂತೆ ಹೊರ ಬಂದರು ಲೈನ್ ಮ್ಯಾನೇಜ್ಮೆಂಟ್ ಪ್ಲಾನ್ (SMP)ಗೆ ಅನುದಾನ ಒದಗಿಸುವಂತೆ ಕೋರಿದ್ದರರೂ ಅನುದಾನ ಬಂದಿಲ್ಲ. ನಂತರ ಶಿವಮೊಗ್ಗ ಸಂಸದರಾದ ರಾಘವೇಂದ್ರ ಅವರ ಗಮನಕ್ಕೆ ತಂದ ಕೂಡಲೇ ಅವರು ಸಂಬಂದಿಸಿದವರೊಂದಿಗೆ ಮಾತನಾಡಿ ನವೆಂಬರ್ 2023ರಲ್ಲಿ ಹಣ ಪಾವತಿಸುವ ಕೆಲಸ ಮಾಡಿಸಿದರು. ಮತ್ತು ಡಿಸೆಂಬರ್ 2024 ರಲ್ಲಿ ಸಿ.ಆರ್.ಝೆಡ್ ಅನುಮತಿ ದೊರಕುವಂತೆ ಮಾಡಿದ್ದಾರೆ.
ಮರವಂತೆ ಬ್ರೇಕ್ ವಾಟರ್ ಹಾಗೂ ನಾಗಬನ ಬಳಿ ತುರ್ತು ಪ್ರತಿಬಂಧಕ ತಡೆಗೋಡೆ ಕಾಮಗಾರಿಗೆ 6 ಕೋಟಿ ಅನುದಾನಕ್ಕೆ ಮನವಿ ಮಾಡಲಾಗಿತ್ತು.
ಉಪ್ಪುಂದದಲ್ಲಿ ಬ್ರೇಕ್ ವಾಟರ್ ನಿರ್ಮಿಸಲು ಮನವಿ ಮಾಡಲಾಗಿತ್ತು. ಈವರೆಗೂ ಪ್ರತಿಕ್ರಿಯೆ ಸಚಿವರಿಂದ ಬಂದಿಲ್ಲ.
ಗಂಗೊಳ್ಳಿ ಬಂದರು ಜಟ್ಟಿ ನಿರ್ಮಾಣಕ್ಕೆ 12 ಕೋಟಿ ಮಂಜೂರು ಮಾಡಲಾಗಿತ್ತು. ಗಂಗೊಳ್ಳಿ ಜಟ್ಟಿಯ ಹಳೆಯ ಡಯಾಫ್ರಾಂ ವಾಲ್ ಕುಸಿದು ಹೊಸದಾಗಿ ನಿರ್ಮಿಸುತ್ತದ್ದ 23 ಪೈಲ್ ಗಳ ಮೇಲೆ ಬಿದ್ದ ಹಾನಿಯಾಗಿತ್ತು. ಇದರ ತನಿಖೆ ಮುಕ್ತಾಯವಾಗದೇ ಕಾಮಗಾರಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಆದಷ್ಟು ಬೇಗ ಕಾಮಗಾರಿ ಶುರು ಮಾಡಿ ಮುಗಿಸಿದರೆ ಮಾತ್ರ ಮೀನುಗಾರರಿಗೆ ಸಹಾಯವಾಗಲಿದೆ. ಇದನ್ನು ರಾಜ್ಯ ಸರ್ಕಾರ ಮಾಡಬೇಕು.
ಅಳವಡಿಸಿಲ್ಲ. ಅನಧಿಕೃತ ವಾಹನಗಳು ಬಂದು ಗೋವುಗಳನ್ನು ಕಳವು ಮಾಡುತ್ತಿದ್ದಾರೆ. ಇಲಾಖೆಯವರು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.