Date : Friday, 08-05-2015
ಸುಳ್ಯ : ಸುಳ್ಯ ಕಸಬಾದ ಶ್ರೀ ಕಾನತ್ತಿಲ ಉಳ್ಳಾಕುಳು, ಪುರುಷ, ರುದ್ರಾಂಡಿ ಮತ್ತು ಪರಿವಾರ ದೈವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮೇ.9ರಿಂದ 15ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ದೈವಸ್ಥಾನದ ಆಡಳಿತ ಮೊಕ್ತೇಸರ ಹೇಮನಾಥ ಕುರುಂಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ....
Date : Friday, 08-05-2015
ಕಾರ್ಕಳ: ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಹಾಗೂ ತಾಂತ್ರಿಕ ಶಿಕ್ಷಣದ ಅಭಿವೃದ್ಧಿ ಅಭಿಯಾನದ ಸಹಭಾಗಿತ್ವದಲ್ಲಿ ಬದಲಾಗುತ್ತಿರುವ ತಾಂತ್ರಿಕ ವಿದ್ಯಮಾನಗಳ ಕುರಿತು ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ ನಿಟ್ಟೆಯಲ್ಲಿ ಶುಕ್ರವಾರ ನಡೆಯಿತು....
Date : Friday, 08-05-2015
ಸುಳ್ಯ : ಮಂಡೆಕೋಲು ಗ್ರಾಮ ಪಂಚಾಯಿತಿಯಲ್ಲಿ ನೂತನವಾಗಿ ನಿರ್ಮಿಸಲಾದ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರದ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯು ಮೇ.9ರಂದು ನಡೆಯಲಿದೆ ಎಂದು ಗ್ರಾ.ಪಂ. ಅಧ್ಯಕ್ಷ ಸುರೇಶ್ ಕಣೆಮರಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಂಸದ ನಳಿನ್ಕುಮಾರ್ ಕಟೀಲು,...
Date : Friday, 08-05-2015
ಬೆಂಗಳೂರು : ಯುವಜನತೆಯು ತನ್ನ ಸಮಯವನ್ನು ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಸುವ ಮೂಲಕ ಮತ್ತು ತನ್ನ ದೇಶಕ್ಕೆ ಬದ್ಧತೆ ಮತ್ತು ತಾಳ್ಮೆಯಿಂದ ಸೇವೆ ಸಲ್ಲಿಸುವುದರ ಮೂಲಕ ಜ್ಞಾನ ವೃದ್ಧಿ ಮಾಡಬೇಕು ಎಂದು ರಾಜ್ಯಪಾಲ ವಜುಭಾಯ್ ವಾಲಾ ಹೇಳಿದರು. ಅವರು ಶುಕ್ರವಾರ ರಾಜಭವನದಲ್ಲಿ...
Date : Friday, 08-05-2015
ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ಅವರು ಶುಕ್ರವಾರ ತಮ್ಮ ಪಕ್ಷ ಹಿಂದೂಸ್ತಾನ್ ಅವಾಮಿ ಮೋರ್ಚಾ(ಎಚ್ಎಎಂ)ಗೆ ಅಧಿಕೃತವಾಗಿ ಚಾಲನೆ ನೀಡಿದರು. ಅವರು ಈ ಪಕ್ಷ ಮುಂಬರುವ ಬಿಹಾರ ಚುನಾವಣೆಯಲ್ಲಿ 243 ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ. ಎಚ್ಎಎಂ ಪಕ್ಷದ ರಾಜ್ಯಾಧ್ಯಕ್ಷನಾಗಿ ಶಕುನಿ...
Date : Friday, 08-05-2015
ಲಂಡನ್: ಬ್ರಿಟನ್ ಸಂಸತ್ತಿಗೆ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಜಯಭೇರಿ ಬಾರಿಸಿದೆ. ಈ ಮೂಲಕ ಡೇವಿಡ್ ಕ್ಯಾಮರೂನ್ ಮತ್ತೆ ಬ್ರಿಟನ್ ಪ್ರಧಾನಿಯಾಗಿ 5 ವರ್ಷಗಳ ಕಾಲ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ. ವಿರೋಧ ಪಕ್ಷವಾಗಿರುವ ಲೇಬರ್ ಪಕ್ಷ ಮತ್ತು...
Date : Friday, 08-05-2015
ಲಂಡನ್: ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ 20 ವರ್ಷದ ವಿದ್ಯಾರ್ಥಿನಿಯೋರ್ವಳು ಸಂಸದೆಯಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾಳೆ. ಸ್ಕಾಟಿಶ್ ನ್ಯಾಷನಲ್ ಪಕ್ಷದ ವಿದ್ಯಾರ್ಥಿನಿ ಹೈರಿ ಬ್ಲಾಕ್ ಎಂಬಾಕೆ ಲೇಬರ್ ಪಕ್ಷದ ಅತ್ಯಂತ ಹಿರಿಯ ರಾಜಕಾರಣಿ ದೌಗ್ಲಸ್ ಅಲೆಗ್ಸಾಂಡರ್ ಅವರನ್ನು ಮಣಿಸುವ ಮೂಲಕ...
Date : Friday, 08-05-2015
ಇಸ್ಲಾಮಾಬಾದ್: ವಿವಿಧ ದೇಶಗಳ ರಾಜತಾಂತ್ರಿಕರಿದ್ದ ಪಾಕ್ ಸೇನಾ ಹೆಲಿಕಾಫ್ಟರ್ ಪತನಗೊಳ್ಳಲು ನಾವೇ ಕಾರಣ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ. ವಿಮಾನ ನಿರೋಧಕ ಕ್ಷಿಪಣಿಯ ಮೂಲಕ ಹೆಲಿಕಾಫ್ಟರನ್ನು ಹೊಡೆದುರುಳಿಸಲಾಯಿತು. ಪ್ರಧಾನಿ ನವಾಝ್ ಶರೀಫ್ ನಮ್ಮ ಟಾರ್ಗೆಟ್ ಆಗಿದ್ದರು ಎಂದು ತಾಲಿಬಾನ್ ವಕ್ತಾರ ಮೊಹಮ್ಮದ್ ಖೊರಾಸನಿ...
Date : Friday, 08-05-2015
ಮಂಗಳೂರು : ಮಹಾತ್ಮ ಗಾಂಧೀಜಿ ಅವರು ಕರ್ನಾಟಕಕ್ಕೆ ಮೊದಲು ಭೇಟಿ ನೀಡಿದ ಶತಮಾನೋತ್ಸವವನ್ನು ಶುಕ್ರವಾರ ಮಂಗಳೂರಿನಲ್ಲಿ ವಾರ್ತಾ ಇಲಾಖೆಯ ನೇತೃತ್ವದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ‘ನೂರು ವರ್ಷಗಳ ಹಿಂದೆ,...
Date : Friday, 08-05-2015
ಕಾರ್ಕಳ : 2011ರ ಜನಗಣತಿಯ ಆಧಾರದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿರುವುದರಿಂದ ಕಾರ್ಕಳ ತಾಲೂಕಿನಲ್ಲಿ ಈ ಬಾರಿ ಗ್ರಾ.ಪಂ.ಸದಸ್ಯರ ಸ್ಥಾನಗಳು ಹೆಚ್ಚಳ ಕಂಡಿದೆ. 2010ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 29 ಗ್ರಾ.ಪಂ.ಗಳಲ್ಲಿ 465 ಸದಸ್ಯರಿದ್ದರೆ, ಪ್ರಸಕ್ತ ಸಾಲಿನಲ್ಲಿ 27 ಸದಸ್ಯ ಸ್ಥಾನ ಹೆಚ್ಚಿದ್ದು, ಒಟ್ಟು...