ಮಂಗಳೂರು : ತಾಲೂಕು ಬಂಟರ ಸಂಘ ಮಂಗಳೂರು ಮತ್ತು ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ತಾಲೂಕು ಸಮಿತಿ ಇವರ ಪ್ರಾಯೋಜಕತ್ವದಲ್ಲಿ, ಬಂಟರ ಯಾನೆ ನಾಡವರ ಮಾತೃಸಂಘವು ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ ಬಂಟರ ಸಂಘಗಳ ಸಹಕಾರದೊಂದಿಗೆ ಶ್ರೀ ಗಣೇಶೋತ್ಸವ, ತೆನೆಹಬ್ಬವನ್ನು ಸೆ. 17 ರಿಂದ 19ರ ವರೆಗೆ ಆಚರಿಸಲಿದೆ. ಈ ಸಂದರ್ಭದಲ್ಲಿ ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗವನ್ನು ಶ್ರದ್ಧಾಭಕ್ತಿ, ವಿಜೃಂಭಣೆಯಿಂದ ಜರುಗಲಿದೆ.
ಪ್ರತಿಭಾವಂತರಿಗೆ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಕಲ್ಪಿಸಿ ಹಲವಾರು ಕಾರ್ಯಕ್ರಮಗಳನ್ನು ಸಮಿತಿಯು ಹಮ್ಮಿಕೊಂಡಿದೆ. ಸೆ.೧೩ರಂದು ಬೆಳಿಗ್ಗೆ 9 ರಿಂದ ಶ್ರೀ ರಾಮಕೃಷ್ಣ ವಿದ್ಯಾಲಯ ಆವರಣದಲ್ಲಿ ‘ಬಂಟ ಕ್ರೀಡೋತ್ಸವವು’ ಎಲ್ಲಾ ವಯೋಮಾನದವರಿಗೆ ವಿವಿಧ ಸ್ಪರ್ಧೆಗಳೊಂದಿಗೆ ನಡೆಯಲಿರುವುದು.
ಮುಲ್ಕಿ ದಿ.ಸುಂದರರಾಮ್ ಶೆಟ್ಟಿಯವರ ಜನ್ಮ ಶತಾಬ್ದಿಯ ಅಂಗವಾಗಿ ಈ ವರ್ಷ ಗಣೇಶೋತ್ಸವದ ಶುಭ ಸಂದರ್ಭದಲ್ಲಿ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ಪ್ರೌಢಶಾಲಾ ಮಕ್ಕಳಿಗೆ ‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಂದರರಾಮ್ ಶೆಟ್ಟಿಯವರ ಕೊಡುಗೆ’ ಎಂಬ ವಿಷಯದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯ ಪ್ರಬಂಧಗಳನ್ನು ಸೆ.12ರ ಒಳಗೆ ಕಳುಹಿಸುವಂತೆ ಕೋರಲಾಗಿದೆ. ಸೆ. 16 ರಂದು ಎ.ಬಿ.ಶೆಟ್ಟಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು’ ಎಂಬ ವಿಷಯದಲ್ಲಿ ವಿಚಾರ ಗೋಷ್ಠಿಯನ್ನು ಏರ್ಪಡಿಸಲಾಗಿದೆ. ಬೆಳಗ್ಗೆ 9-30 ರಿಂದ ಮದ್ಯಾಹ್ನ 1-30ರ ವರೆಗೆ ನಡೆಯುವ ಈ ಗೋಷ್ಠಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಾರೆ.
ಸೆ.16ರಂದು ಸಂಜೆ ೪ಕ್ಕೆ ಮಕ್ಕಳ ಚಿತ್ರಕಲಾ ಸ್ಪರ್ಧೆಯು (ಸಾರ್ವಜನಿಕರಿಗೆ) ಎ.ಬಿ.ಶೆಟ್ಟಿ ಸಭಾಂಗಣದಲ್ಲಿ ಜರಗಲಿದೆ. ಸಂಜೆ 5 ಗಂಟೆಗೆ ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಬಳಿ ಇರುವ ರಾಧಾಕೃಷ್ಣ ಮಂದಿರದಿಂದ ಶ್ರೀ ಮಹಾಗಣಪತಿ ದೇವರ ವಿಗ್ರಹವನ್ನು ಮೆರವಣಿಗೆಯ ಮೂಲಕ ಬಂಟ್ಸ್ ಹಾಸ್ಟೆಲ್ನಲ್ಲಿರುವ ‘ಓಂಕಾರನಗರ’ಕ್ಕೆ ತರಲಾಗುವುದು.
ಸೆ.17 ರಂದು ಮಧ್ಯಾಹ್ನ 3ರಿಂದ ಕೂಡ್ಲಗಿ ಕೊಟ್ರೇಶ್ ತಂಡದವರಿಂದ ಹಾಸ್ಯಲಹರಿ, ರಾತ್ರಿ ಗಂಟೆ 8.00 ರಿಂದ ನಾಟ್ಯ ತರಂಗ, ಗ್ರೂಪ್ ಡ್ಯಾನ್ಸ್ ಸ್ಪರ್ದೆಯ ಅಂತಿಮ ಸುತ್ತು ನಡೆಯಲಿರುವುದು. ಈ ಸ್ಪರ್ಧೆಯಲ್ಲಿ ಕನ್ನಡ ಚಲನಚಿತ್ರದ ಖ್ಯಾತ ನಟ ನಟಿಯರು ತೀರ್ಪುಗಾರರಾಗಿ ಭಾಗವಹಿಸುವರು.
18ರಂದು ಬೆಳಿಗ್ಗೆ 9-30 ಕ್ಕೆ ಶ್ರೀ ದುರ್ಗಾದಾಸ್ ಶೆಟ್ಟಿ ಬಿ.ಇ. ತಂಡದವರಿಂದ ಭಕ್ತಿಗಾನಸುಧೆ ನಡೆಯಲಿರುವುದು. ಮಧ್ಯಾಹ್ನ ೩ರಿಂದ ಭಾರತರತ್ನ, ಮಾಜಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂರವರಿಗೆ “ಕಲಾಂ ಆಪ್ಕೊ ಸಲಾಂ”(ಗಾನ ನೃತ್ಯ ಕುಂಚ) ಎಂಬ ನುಡಿ ನಮನ ನಡೆಯಲಿರುವುದು. ರಾತ್ರಿ 8-00 ರಿಂದ ಮೂಡಬಿದಿರೆ, ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ “ನೃತ್ಯ ಸಂಭ್ರಮ” ಸಾಂಸ್ಕೃತಿಕ ಕಾರ್ಯಕ್ರಮವು ಜರಗಲಿದೆ.
ಸೆ. 19 ರಂದು ಬೆಳಿಗ್ಗೆ9-30 ರಿಂದ ಸಾಗರ್ ಕೊಟ್ಟಾರ ಬಳಗದವರಿಂದ ಕೊಳಲು ಮತ್ತು ಕೀಬೋರ್ಡ್ ವಾದನ ಕಚೇರಿ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.