ಮಂಗಳೂರು: ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ತಲಪಾಡಿ ಇಲ್ಲಿ ದಿನಾಂಕ 6.9.2015 ರಂದು ಅಪರಾಹ್ನ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಅದ್ದೂರಿಯಾಗಿ ನಡೆಸಲಾಯಿತು. ವಿದ್ಯಾರ್ಥಿಗಳು ಕೃಷ್ಣ, ರಾಧೆ, ಹುಲಿವೇಷ ಧರಿಸಿ ಮೆರವಣಿಗೆಯನ್ನು ಆರಂಭಿಸಿದರು.
ಶಾಲಾ ಅಧ್ಯಕ್ಷರಾದ ಶ್ರೀ.ಎಂ.ಬಿ.ಪುರಾಣಿಕ್ರವರು ಮೊಸರು ತುಂಬಿದ ಮಡಕೆಯನ್ನು ಒಡೆಯುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತದನಂತರ, ಅಟ್ಟಣಿಗೆಯಲ್ಲಿ ವ್ಯವಸ್ಥೆಗೊಳಿಸಿದ ಮೊಸರು ತುಂಬಿದ ಮಡಕೆಯನ್ನು ಎಲ್ಲಾ ತರಗತಿಯ ಮಕ್ಕಳು ಮಾನವ ಪಿರಮಿಡ್ ರಚಿಸಿ ಮಡಕೆಯನ್ನು ಒಡೆದು ತಮ್ಮ ಸಾಹಸ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಶ್ರೀಕೃಷ್ಣನ ಜನ್ಮರಹಸ್ಯ, ಕೃಷ್ಣ ಜನ್ಮಾಷ್ಟಮಿಯ ಮಹತ್ವವನ್ನು ತಿಳಿಸಲಾಯಿತು. ಹಾಗೆಯೇ ನೃತ್ಯ, ಭಜನೆ, ಸಂಗೀತ ಮೊದಲಾದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಕ್ಕಳು ಹುಲಿವೇಷಧಾರಿಗಳಾಗಿ ಕುಣಿದ ನೃತ್ಯವು ಅಲ್ಲಿ ನೆರೆದಿದ್ದವರ ಕಣ್ಣಿಗೆ ಹಬ್ಬವಾಗಿತ್ತು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.