Date : Saturday, 06-06-2015
ಬೆಂಗಳೂರು: ತೀರ್ಥಹಳ್ಳಿಯ ವಿದ್ಯಾರ್ಥಿನಿ ನಂದಿತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಾಸಕ ಅರಗ ಜ್ಞಾನೇಂದ್ರ ಸೇರಿದಂತೆ ೪೦ಕ್ಕೂ ಅಧಿಕ ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಮೂವರು ಮಂದಿಯ ತಂಡ ವಿದ್ಯಾರ್ಥಿನಿ ನಂದಿತಾಳನ್ನು ಅತ್ಯಾಚಾರಗೈದು ವಿಷ ಕುಡಿಸಿದ್ದು, ಇದರಿಂದ ಅಸ್ವಸ್ಥಗೊಂಡ ಆಕೆ ಸಾವನ್ನಪ್ಪಿದ್ದಳು...
Date : Saturday, 06-06-2015
ಬಾರಮುಲ್ಲಾ: ಜಮ್ಮು ಕಾಶ್ಮೀರದ ಬಾರಮುಲ್ಲಾದ ಟೂಟ್ ಮಾರ್ ಗಲಿ ಪ್ರದೇಶದಲ್ಲಿ ಅಕ್ರಮವಾಗಿ ಭಾರತದೊಳಗೆ ಒಳನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಸೇನಾ ಪಡೆಗಳು ಹತ್ಯೆ ಮಾಡಿದೆ. 4ರಿಂದ 5 ಉಗ್ರರು ಒಳನುಸುಳಲು ಪ್ರಯತ್ನಿಸುತ್ತಿದ್ದ ಸಂದರ್ಭ ಎನ್‌ಕೌಂಟರ್ ನಡೆಸಿದ ಸೇನಾ ಪಡೆ ಇಬ್ಬರನ್ನು ಹತ್ಯೆ...
Date : Saturday, 06-06-2015
ನವದೆಹಲಿ: ಎನ್‌ಡಿಎ ಸರ್ಕಾರ ಇತ್ತೀಚಿಗೆ ಜಾರಿಗೊಳಿಸಿದ 3 ಸಾಮಾಜಿಕ ಭದ್ರತಾ ಯೋಜನೆಗಳು ನಿರೀಕ್ಷೆಗೂ ಮೀರಿ ಯಶಸ್ಸನ್ನು ಸಾಧಿಸುತ್ತಿದೆ. ಇದುವರೆಗೆ ಈ 3 ಯೋಜನೆಗಳನ್ನು 10 ಕೋಟಿಗೂ ಅಧಿಕ ಮಂದಿ ನೋಂದಾವಣೆ ಮಾಡಿಕೊಂಡಿದ್ದಾರೆ. ಆರಂಭವಾದ 1 ತಿಂಗಳಲ್ಲೇ 10 ಕೋಟಿಗೂ ಅಧಿಕ ಮಂದಿ...
Date : Saturday, 06-06-2015
ನವದೆಹಲಿ: ಪ್ರಧಾನಿ ನರೇಂದ್ರ ಎರಡು ದಿನಗಳ ಪ್ರವಾಸಕ್ಕಾಗಿ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಶನಿವಾರ ಬೆಳಿಗ್ಗೆ ಢಾಕಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಬರಮಾಡಿಕೊಂಡರು. ಮೋದಿಗೆ ಸ್ವಾಗತ ಕೋರುವ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು, ಮೋದಿ ಕಟೌಟ್‌ಗಳನ್ನು ಢಾಕಾದಲ್ಲಿ ಹಾಕಲಾಗಿದೆ....
Date : Saturday, 06-06-2015
ಬೆಂಗಳೂರು: ಇಲ್ಲಿನ ವಿಕಾಸಸೌಧ ಹಾಗೂ ವಿಧಾನಸೌಧಗಳಿಗೆ ಹೆಚ್ಚಿನ ಭದ್ರತೆ ಒದಗಿಸುವ ದೃಷ್ಟಿಯಿಂದ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ಹೆಚ್ಚಿನ ಭದ್ರತೆಗೆ ಕೈಗಾರಿಕಾ ಭದ್ರತಾ ಪಡೆಯ ಜೊತೆಗೆ ಸಿಸಿ ಟಿವಿ, ವಾಹನ ಪರಿಶೀಲನಾ ಸ್ಕ್ಯಾನರ್ ಮತ್ತಿತರ...
Date : Friday, 05-06-2015
ಬೆಳ್ತಂಗಡಿ: ತಾಲೂಕಿನ 46ಗ್ರಾ.ಪಂ.ನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು 22 ಪಂಚಾಯತ್ ಗಳಲ್ಲಿ ಬಹುಮತದ ಜಯಭೇರಿ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, 17 ಪಂ.ಗಳಲ್ಲಿ ಕಾಂಗ್ರೇಸ್ ಬೆಂಬಲಿತರು ವಿಜಯಿಯಾಗಿದ್ದಾರೆ. ಎ.29ರಂದು ಗ್ರಾ.ಪಂ.ಗಳಿಗೆ ನಡೆದ ಚುನಾವಣೆಯ ಮತ ಎಣಿಕಾ ಕಾರ್ಯ ಶುಕ್ರವಾರ ಉಜಿರೆ ಎಸ್.ಡಿ.ಎಂ ಪಿಯು ಕಾಲೇಜಿನಲ್ಲಿ...
Date : Friday, 05-06-2015
ಕಾಸರಗೋಡು : ಕೆನಡಾದ ವ್ಯಾಂಕೋವರ್‌ನಲ್ಲಿ 2015 ಜೂನ್ 8 ರಿಂದ 14 ರ ತನಕ ನಡೆಯಲಿರುವ 23ನೇ ಚರ್ಮಶುಷ್ರೂಷೆ(ಡರ್ಮಟೋಲಜಿ)ಯ ವಿಶ್ವ ಸಮ್ಮೇಳನದ ವೈಜ್ಞಾನಿಕ ಸಮಿತಿಯು “ಡಬ್ಲ್ಯುಎಸ್ 48 ಲಿಂಫೆಡಿಮಾದ ಹರಡುವಿಕೆಗೆ ತಡೆ: ಪ್ರಗತಿ ಮತ್ತು ಫಲಿತಾಂಶ’’ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ನಿರ್ವಹಿಸಲು ಕಾಸರಗೋಡಿಗೆ...
Date : Friday, 05-06-2015
ಬದಿಯಡ್ಕ: ನೈಸರ್ಗಿಕ ಸಂಪತ್ತು ಹಾಗೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಇದು ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ವಳಕುಂಜ ಹೇಳಿದರು. ಅವರು ಪಟ್ಟಾಜೆ ವಾರ್ಡ್ ಮಟ್ಟದ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು....
Date : Friday, 05-06-2015
ಸುಳ್ಯ: ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅತಿಥಿಯಾಗಿ ವೇದಿಕೆಯಲ್ಲಿದ್ದ ಶಿಕ್ಷಕಿ ದಿವ್ಯಾ ಕಾಳಮನೆಯವರು ಮಾತನಾಡಿ ಇದು ನಮ್ಮ ಭೂಮಿ-ಇದರ ರಕ್ಷಣೆಯ ಹೊಣೆ ನಮ್ಮದೇ ಆಗಿದೆ. ಹಾಗಾಗಿ ನಾವೆಲ್ಲರೂ ಪರಿಸರ ರಕ್ಷಣೆಯಲ್ಲಿ ಪಾಲ್ಗೊಳ್ಳೋಣ ಎಂದರು. ಅಧ್ಯಕ್ಷತೆಯನ್ನು ವಹಿಸಿದ...
Date : Friday, 05-06-2015
ತಿರುವನಂತಪುರಂ: ಬಹುನಿರೀಕ್ಷಿತ ನೈರುತ್ಯ ಮಾರುತ ಶುಕ್ರವಾರ ಕೇರಳವನ್ನು ಪ್ರವೇಶಿಸಿದ್ದು, ಕರಾವಳಿ ಭಾಗ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಈ ಮೂಲಕ ಪ್ರಸಕ್ತ ಸಾಲಿನ ಮುಂಗಾರು ಪ್ರಾರಂಭವಾಗಿದೆ. ಮುಂದಿನ 24 ಗಂಟೆಗಳಲ್ಲಿ ಮಾರುತಗಳು ಕರ್ನಾಟಕವನ್ನು ಪ್ರವೇಶ ಮಾಡಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ....