
ನವದೆಹಲಿ: ಕಾರ್ಮಿಕ ಕಾನೂನುಗಳನ್ನು ಸರಳೀಕರಿಸಲು ಮತ್ತು ಸುವ್ಯವಸ್ಥಿತಗೊಳಿಸಲು ಕೇಂದ್ರದ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಇಂದಿನಿಂದಲೇ ಜಾರಿಗೆ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪೋಸ್ಟ್ ಮೂಲಕ ಈ ಘೋಷಣೆ ಮಾಡಿದ್ದಾರೆ.
ನಾಲ್ಕು ಕಾರ್ಮಿಕ ಸಂಹಿತೆಗಳು ಇಂತಿವೆ:
1. ವೇತನಗಳ ಸಂಹಿತೆ
2. ಕೈಗಾರಿಕೆ ಸಂಬಂಧಿತ ಸಂಹಿತೆ
3. ಸಾಮಾಜಿಕ ಭದ್ರತಾ ಸಂಹಿತೆ
4. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ
ಸ್ವಾತಂತ್ರ್ಯದ ಬಳಿಕ ಭಾರತದಲ್ಲಿ ಪರಿಚಯಿಸಲದಾದ ಮೊದಲ ಸಮಗ್ರ ಮತ್ತು ಅತ್ಯಂತ ಪ್ರಗತಿಶೀಲ ಕಾರ್ಮಿಕ ಸಂಬಂಧಿತ ಸುಧಾರಣೆ ಇದಾಗಿದೆ. ಇದು ಭಾರತದ ಕಾರ್ಮಿಕ ಕಾನೂನುಗಳನ್ನು ಸರಳೀಕರಿಸಲಿದೆ. ಮಾತ್ರವಲ್ಲದೇ, ಕಾರ್ಮಿಕರನ್ನು ಮತ್ತು ಕೈಗಾರಿಕೆಗಳನ್ನು ಸಬಲೀಕರಿಸುವ ನಿಟ್ಟಿನಲ್ಲಿ ಇಟ್ಟ ದೃಢ ಹೆಜ್ಜೆಯಾಗಲಿದೆ.
𝐓𝐡𝐞 𝐌𝐨𝐝𝐢 𝐆𝐨𝐯𝐞𝐫𝐧𝐦𝐞𝐧𝐭 𝐡𝐚𝐬 𝐨𝐟𝐟𝐢𝐜𝐢𝐚𝐥𝐥𝐲 𝐚𝐧𝐧𝐨𝐮𝐧𝐜𝐞𝐝 𝐭𝐡𝐞 𝐢𝐦𝐩𝐥𝐞𝐦𝐞𝐧𝐭𝐚𝐭𝐢𝐨𝐧 𝐨𝐟 𝟒 𝐦𝐚𝐣𝐨𝐫 𝐋𝐚𝐛𝐨𝐮𝐫 𝐂𝐨𝐝𝐞𝐬 — 𝐚 𝐡𝐢𝐬𝐭𝐨𝐫𝐢𝐜 𝐬𝐭𝐞𝐩 𝐭𝐨𝐰𝐚𝐫𝐝 𝐬𝐢𝐦𝐩𝐥𝐢𝐟𝐲𝐢𝐧𝐠 𝐈𝐧𝐝𝐢𝐚’𝐬 𝐥𝐚𝐛𝐨𝐮𝐫 𝐥𝐚𝐰𝐬 𝐚𝐧𝐝… pic.twitter.com/tUJHOKYQnY
— BJP (@BJP4India) November 21, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



