ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಕಮ್ಯುನಿಕೇಶನ್(ಎಸ್ಒಸಿ) ಕಳೆದ 4ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿರುವ ‘ಮಣಿಪಾಲ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ’ ಈ ಬಾರಿ ಅ.29ರಿಂದ 31ರವರೆಗೆ ಜರಗಲಿದೆ ಎಂದು ಚಿತ್ರೋತ್ಸವದ ಪ್ರಾಧ್ಯಾಪಕ ಸಂಯೋಜಕ ವಿನ್ಯಾಸ್ ಹೆಗ್ಡೆ ತಿಳಿಸಿದ್ದಾರೆ.
ಎಂಐಟಿ ಲೈಬ್ರೆರಿ ಆಡಿಟೋರಿಯಂ, ಇಂಟರ್ಯಾಕ್ಟ್ ಹಾಲ್ ಮತ್ತು ಮಲೇಕಾ ಮೆಡಿಕಲ್ ಕಾಲೇಜಿನಲ್ಲಿ ಚಿತ್ರ ಪ್ರದರ್ಶನಗಳು ನಡೆಯಲಿವೆ. ಇಂಗ್ಲಿಷ್, ಹಿಂದಿ, ಕನ್ನಡ, ತುಳು, ಮಲಯಾಳ, ಕೊರಿಯನ್, ಪರ್ಶಿಯನ್, ಬಂಗಾಲಿ ಭಾಷೆಗಳ ಒಟ್ಟು 24 ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಚಲನಚಿತ್ರ ಪ್ರದರ್ಶನದ ಅನಂತರ ಆ ಚಿತ್ರದ ಕುರಿತು ಸಂವಾದ, ವಿಮರ್ಶೆ ನಡೆಯಲಿದೆ. ನಿರ್ದೇಶಕರಾದ ರಾಮಚಂದ್ರ ಪಿ.ಎನ್., ಲಿಂಗದೇವರು ಬಿ.ಎಸ್. ಮತ್ತಿತರ ಚಿತ್ರ ತಜ್ಞರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಚಿತ್ರ ತಯಾರಿಕಾ ಕಾರ್ಯಾಗಾರವೂ ನಡೆಯಲಿದ್ದು ಕುಂದನ್ ಷಾ ಸೇರಿದಂತೆ ಅನೇಕ ತಜ್ಞರು ತರಬೇತಿ ನೀಡಲಿದ್ದಾರೆ. ಪ್ರದರ್ಶನವು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿರುತ್ತದೆ ಎಂದರು.
ಅ. 29ರಂದು ಬೆಳಗ್ಗೆ 10 ಗಂಟೆಗೆ ಇಂಟರ್ಯಾಕ್ಟ್ ಸಭಾಂಗಣದಲ್ಲಿ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆಗೊಳ್ಳಲಿದೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಎಸ್ಒಸಿಯ ಸಹಾಯಕ ನಿರ್ದೇಶಕಿ ಡಾ| ಪದ್ಮರಾಣಿ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.